ವಿಕ್ಕಿ-ರಶ್ಮಿಕಾ ನಟನೆಯ ಹೊಸ ಸಿನಿಮಾ ಟ್ರೇಲರ್ ರಿಲೀಸ್; ಹೇಗಿದೆ ನೋಡಿ ನಟಿಯ ಲುಕ್
ಬಾಲಿವುಡ್ನಲ್ಲಿ ವ್ಯಕ್ತಿಗಳ ಜೀವನ ಆಧರಿಸಿದ ಸಿನಿಮಾಗಳು ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಬಯೋಗ್ರಫಿ ಸಿನಿಮಾಗಳ ಬಳಿಕ ಐತಿಹಾಸಿಕ ಸಿನಿಮಾಗಳ ಟ್ರೆಂಡ್ ಸಹ ನಡೆಯುತ್ತಲೇ ಬಂದಿದೆ. ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’, ಅಜಯ್ ದೇವಗನ್ರ ‘ತಾನಾಜಿ’, ‘ಪಾಣಿಪತ್’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಇನ್ನೂ ಕೆಲವು ಸಿನಿಮಾಗಳು ಗಮನ ಸೆಳೆದಿವೆ. ಈಗ ‘ಛವ್ವಾ’ ಸಿನಿಮಾ ಮೂಡಿ ಬರುತ್ತಿದೆ.
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಛವ್ವಾ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗಿದೆ. ಈ ಟ್ರೇಲರ್ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಈ ಮೂಲಕ ‘ಪುಷ್ಪ 2’ ಹಾಗೂ ‘ಛವ್ವಾ’ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿವೆ. ರಶ್ಮಿಕಾ ಮಂದಣ್ಣ ನಟನೆಯ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ.
ವಿಕ್ಕಿ ಕೌಶಲ್ ಅವರು ಛತ್ರಪತಿ ಶಿವಾಜಿ ಮಹರಾಜ್ ಅವರ ಮಗ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛತ್ರಪತಿ ಸಾಂಬಾಜಿ ಶಿವರಾಜ್ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈ ಟ್ರೇಲರ್ನಲ್ಲಿ ಅಬ್ಬರಿಸಿದ್ದಾರೆ. ಅವರ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಅವರು ನೂರಾರು ವೈರಿಗಳ ವಿರುದ್ಧ ಹೋರಾಡುವುದು ಕಂಡು ಬಂದಿದೆ.
‘ಸ್ತ್ರೀ 2’ ಸಿನಿಮಾ ಅಬ್ಬರಿಸುತ್ತಿದೆ. ಈ ಚಿತ್ರದ ಜೊತೆ ‘ಛವ್ವಾ’ ಸಿನಿಮಾದ ಟ್ರೇಲರ್ ಅಟ್ಯಾಚ್ ಆಗಿದೆ. ಅನೇಕರು ರಣವೀರ್ ಸಿಂಗ್ ಮಾಡಿದ ಬಾಜಿರಾವ್ ಮಸ್ತಾನಿ ಹಾಗೂ ವಿಕ್ಕಿ ಕೌಶಲ್ ಮಾಡಿದ ಈ ಪಾತ್ರವನ್ನು ಹೋಲಿಕೆ ಮಾಡುತ್ತಿದ್ದಾರೆ. ವಿಕ್ಕಿ ಕೌಶಲ್ ಅವರು ಚತ್ರಪತಿ ಸಾಂಬಾಜಿ ಮಹರಾಜ್ ಪಾತ್ರವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಸಾಂಬಾಜಿಯ ಪತ್ನಿ ಯೇಸುಬಾಯಿ ಬೋನ್ಸಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಛವ್ವಾ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ. ಅಂದು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಕೂಡ ರಿಲೀಸ್ ಆಗಲಿದೆ. ಎರಡು ಬಿಗ್ ಬಜೆಟ್ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಲಿದೆ ಎಂಬುದು ವಿಶೇಷ. ‘ಮಿಮಿ’, ‘ಚುಪ್ಪಿ’ ಸಿನಿಮಾ ನಿರ್ದೇಶಕ ಲಕ್ಷ್ಮಣ ಉಟೇಕರ್ ಅವರು ಈ ಸಿನಿಮಾನ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಲಕ್ಷ್ಮಣ್ ಅವರು ಈ ಮೊದಲು ‘ಜರ ಹಟ್ಕೆ ಜರ ಬಚ್ಕೆ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. 2023ರಲ್ಲಿ ರಿಲೀಸ್ ಆದ ಈ ಸಿನಿಮಾ ಮೆಚ್ಚುಗೆ ಪಡೆಯಲು ವಿಫಲವಾಗಿತ್ತು.
ಇದನ್ನೂ ಓದಿ: ಶಿವಾಜಿ ಕುರಿತ ಹಿಂದಿ ಸಿನಿಮಾದಲ್ಲಿ ದಕ್ಷಿಣ ಸ್ಟಾರ್ ನಟ ಔರಂಗಾಜೇಬ್
ಛತ್ರಪತಿ ಶಿವಾಜಿ ಅವರ ಮಗ ಛತ್ರಪತಿ ಸಾಂಬಾಜಿ ಮಹರಾಜನ ಕಥೆಯನ್ನು ಈ ಚಿತ್ರ ಹೊಂದಿದೆ. ಈ ಚಿತ್ರದಲ್ಲಿ ಅಖಾಯೆ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ ಅವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:01 pm, Mon, 19 August 24