ಚಿರಂಜೀವಿ ಬೆಂಗಳೂರಿನಲ್ಲಿ ಹೊಂದಿರೋ ಫಾರ್ಮ್​ಹೌಸ್ ಬೆಲೆ ಎಷ್ಟು?

ಹೈದರಾಬಾದ್​ನಲ್ಲಿ ಚಿರಂಜೀವಿ ಅವರು ಲಕ್ಷುರಿ ಬಂಗಲೆ ಹೊಂದಿದ್ದಾರೆ. ಈ ಮನೆಯನ್ನು 30 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಾರುಕಟ್ಟೆಯ ಬೆಲೆಯ ಪ್ರಕಾರ ಈ ಮನೆ ಹಾಗೂ ಜಾಗದ ಬೆಲೆ 300 ಕೋಟಿ ರೂಪಾಯಿ. ಅದೇ ರೀತಿ ಅವರು ಬೆಂಗಳೂರಿನಲ್ಲೂ ಮನೆ ಹೊಂದಿದ್ದಾರೆ.

ಚಿರಂಜೀವಿ ಬೆಂಗಳೂರಿನಲ್ಲಿ ಹೊಂದಿರೋ ಫಾರ್ಮ್​ಹೌಸ್ ಬೆಲೆ ಎಷ್ಟು?
ರಾಮ್ ಚರಣ್-ಚಿರಂಜೀವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 24, 2024 | 7:42 AM

ಚಿರಂಜೀವಿ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿ ಇದ್ದಾರೆ. ಅವರ ಬಗ್ಗೆ ಹೊಸದಾಗಿ ಏನನ್ನು ಹೇಳಬೆಕೆಂದಿಲ್ಲ. ತೆಲುಗು ಸಿನಿಮಾ ರಂಗದಲ್ಲಿ ಅವರು ಲೆಜೆಂಡರಿ ಹೀರೋ ಎನಿಸಿಕೊಂಡಿದ್ದಾರೆ. ಅವರು 30 ವರ್ಷ ಯಶಸ್ವಿಯಾಗಿ ಚಿತ್ರರಂಗದಲ್ಲಿ ಇದ್ದಾರೆ. ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ 24 ಸಾವಿರ ಡ್ಯಾನ್ಸ್ ಸ್ಟೆಪ್ ಮಾಡಿದ ಕಾರಣಕ್ಕೆ ಗಿನ್ನೆಸ್ ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದಾರೆ. ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಆಸ್ತಿ ಬಗ್ಗೆ, ಬೆಂಗಳೂರಿನ ಫಾರ್ಮ್​ಹೌಸ್​ ಬಗ್ಗೆ ಇಲ್ಲಿದೆ ವಿವರ.

ಬೆಂಗಳೂರಿನಿಂದ 35 ಕಿ.ಮೀ ದೂರದಲ್ಲಿ ಚಿರಂಜೀವಿ ಫಾರ್ಮ್​ಹೌಸ್ ಹೊಂದಿದ್ದಾರೆ. ಇದರ ಬೆಲೆ 30 ಕೋಟಿ ರೂಪಾಯಿ ಎನ್ನಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಈ ಫಾರ್ಮ್​ಹೌಸ್​ ಇದೆ. ಹಲವು ವರ್ಷಗಳ ಹಿಂದೆ ಇದನ್ನು ಅವರು ಖರೀದಿ ಮಾಡಿದ್ದರು. ಕುಟುಂಬದ ಜೊತೆ ಅವರು ಇಲ್ಲಿಗೆ ಆಗಮಿಸುತ್ತಾರೆ. ಹಲವು ಸಮಾರಂಭ ಹಾಗೂ ಹಬ್ಬಗಳನ್ನು ಅವರು ಇಲ್ಲಿ ಆಚರಿಸಿದ್ದು ಇದೆ. ಈ ವರ್ಷ ಸಂಕ್ರಾಂತಿಯನ್ನು ಚಿರಂಜೀವಿ ಕುಟುಂಬ ಇಲ್ಲಿಯೇ ಆಚರಿಸಿತ್ತು.

ಚಿರಂಜೀವಿ ಅವರು ಹೈದರಾಬಾದ್​ನಲ್ಲಿ ಲಕ್ಷುರಿ ಬಂಗಲೆ ಹೊಂದಿದ್ದಾರೆ. ಈ ಮನೆಯನ್ನು 30 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮಾರುಕಟ್ಟೆಯ ಬೆಲೆಯ ಪ್ರಕಾರ ಈ ಮನೆ ಹಾಗೂ ಜಾಗದ ಬೆಲೆ 300 ಕೋಟಿ ರೂಪಾಯಿ. ಅವರು ಲಕ್ಷುರಿ ಲೈಫ್​ಸ್ಟೈಲ್ ಮೂಲಕ ಫೇಮಸ್ ಆದವರು. ಅವರ ಬಳಿ ದುಬಾರಿ ಕಾರುಗಳು ಸಾಕಷ್ಟಿವೆ.

ರೋಲ್ಸ್ ರಾಯ್ಸ್ ಪ್ಯಾಂಥಮ್ (10 ಕೋಟಿ ರೂಪಾಯಿ), ಟೊಯೋಟಾ ಲ್ಯಾಂಡ್ ಕ್ರೂಸರ್ 3ನೇ ಜನರೇಷನ್ (90 ಲಕ್ಷ ರೂಪಾಯಿ), ಟೊಯೋಟಾ ಲ್ಯಾಂಡ್ ಕ್ರ್ಯೂಸರ್ ನಾಲ್ಕನೇ ಜನರೇಷನ್ (1.50 ಕೋಟಿ ರೂಪಾಯಿ), ರೇಂಜ್ ರೋವರ್ ವೋಗ್ (1 ಕೋಟಿ ರೂಪಾಯಿ), ರೇಂಜ್ ರೋವರ್ ಆಟೋಬಯೋಗ್ರಫಿ (2.75 ಕೋಟಿ ರೂಪಾಯಿ), ಟೊಯೋಟಾ ವಲ್​ಫೈರ್​ (1 ಕೋಟಿ ರೂಪಾಯಿ) ಕಾರುಗಳು ಇವೆ.

ಇದನ್ನೂ ಓದಿ: ‘ಚಿರಂಜೀವಿ ಡ್ಯಾನ್ಸ್ ಮಾಡುತ್ತಿದ್ದರೆ ನಮ್ಮ ಕಣ್ಣು ಬೇರೆಲ್ಲೂ ಹೋಗಲ್ಲ’; ಹೊಗಳಿದ ಆಮಿರ್ ಖಾನ್

ಚಿರಂಜೀವಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಭೋಲಾ ಶಂಕರ್’ ಸಿನಿಮಾದಲ್ಲಿ. ಈ ಚಿತ್ರವನ್ನು ಮೆಹೆರ್ ರಮೇಶ್ ನಿರ್ದೇಶನ ಮಾಡಿದ್ದರು. ತಮನ್ನಾ ಭಾಟಿಯಾ, ಕೀರ್ತಿ ಸುರೇಶ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು.  ಅವರು ವಿಶ್ವಾಂಭರ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಯುವಿ ಕ್ರಿಯೇಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ