Bigg Boss Kannada: ‘ಬಿಗ್ ಬಾಸ್​’ನಲ್ಲಿ ಮುಂದುವರೆದ ಹಳೆಯ ಟೆಕ್ನಿಕ್? ಏನದು?

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ಸೆಪ್ಟೆಂಬರ್​ 29ರಂದು ಅದ್ದೂರಿಯಾಗಿ ಲಾಂಚ್​ ಆಗಲಿದೆ. ಆ ಬಗ್ಗೆ ಮಾತನಾಡಲು ಸೆ.23ರಂದು ಪ್ರೆಸ್​ಮೀಟ್​ ಮಾಡಲಾಯಿತು. ಈ ವೇಳೆ ಕೆಲವು ವಿಚಾರಗಳನ್ನು ತಂಡ ರಿವೀಲ್ ಮಾಡಿದೆ. ಇದರಲ್ಲಿ ಸ್ವರ್ಗ-ನರಕ ಕೂಡ ಕೂಡಿದೆ.

Bigg Boss Kannada: ‘ಬಿಗ್ ಬಾಸ್​’ನಲ್ಲಿ ಮುಂದುವರೆದ ಹಳೆಯ ಟೆಕ್ನಿಕ್? ಏನದು?
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Sep 24, 2024 | 7:01 AM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಆರಂಭಕ್ಕೆ ಇನ್ನು ಉಳಿದಿರೋದು ಕೆಲವೇ ದಿನಗಳು ಮಾತ್ರ. ಶನಿವಾರ (ಸೆಪ್ಟೆಂಬರ್ 28) ಶೂಟಿಂಗ್ ನಡೆಯಲಿದ್ದು, ಸೆಪ್ಟೆಂಬರ್ 29ರಂದು ಕಲರ್ಸ್ ಕನ್ನಡದಲ್ಲಿ ಈ ಶೋ ಪ್ರಸಾರ ಕಾಣಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಈ ಶೋನ ಭಾಗ ಆಗಲಿದ್ದಾರೆ. ಯಾವೆಲ್ಲ ಸ್ಪರ್ಧಿಗಳು ದೊಡ್ಮನೆ ಒಳಗೆ ಬರುತ್ತಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಹೀಗಿರುವಾಗಲೇ ಬಿಗ್ ಬಾಸ್​ನವರು ಹಳೆಯ ಟೆಕ್ನಿಕ್ ಉಪಯೋಗಿಸಿದ್ದಾರೆ.

ಕಳೆದ ವರ್ಷ ಬಿಗ್ ಬಾಸ್​ನಲ್ಲಿ ಸಮರ್ಥರು ಹಾಗೂ ಅಸಮರ್ಥರು ಹೆಸರಿನ ಎರಡು ಗುಂಪನ್ನು ಮಾಡಲಾಗಿತ್ತು. ಒಂದು ವಾರಗಳ ಕಾಲ ಈ ಆಟ ಇತ್ತು. ಸಮರ್ಥರಿಗೆ ಮನೆ ಬಳಕೆಗೆ ಅವಕಾಶ ಇತ್ತು. ಜೊತೆಗೆ ಮನೆಯ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿತ್ತು. ಅದೇ ರೀತಿ ಮನೆಯ ಸಾಮಾನ್ಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇತ್ತು. ಎಲಿಮಿನೇಷನ್​ಗೆ ಈ ತಂಡದಿಂದ ಯಾರೆಂದರೆ ಯಾರೂ ನಾಮಿನೇಟ್ ಆಗಿರಲಿಲ್ಲ.

ಅದೇ ರೀತಿ ಅಸಮರ್ಥರು ತಂಡದವರಿಗೆ ಸಮವಸ್ತ್ರ ಇತ್ತು. ಅದನ್ನೇ ಅವರು ಹಾಕಬೇಕಿತ್ತು. ಜೊತೆಗೆ ಅವರಿಗೆ ಮನೆಯ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಲು ಅವಕಾಶ ಇರಲಿಲ್ಲ. ಎಲ್ಲರೂ ನಾಮಿನೇಟ್ ಆಗಿದ್ದು ಇದೇ ತಂಡದಿಂದಲೇ ಆಗಿತ್ತು. ಈ ಟಾಸ್ಕ್ ಒಂದೇ ವಾರಕ್ಕೆ ಮುಗಿದ ಹೊರತಾಗಿಯೂ ಮನೆಯಲ್ಲಿದ್ದ ಅನೇಕರು ಸಮರ್ಥರು-ಅಸಮರ್ಥರು ಎಂಬ ಗ್ಯಾಂಗ್​ನಿಂದಲೇ ಗುರುತಿಸಲ್ಪಡುತ್ತಿದ್ದರು. ಈ ರೀತಿಯಲ್ಲಿ ಸಮರ್ಥರು ಹಾಗೂ ಅಸಮರ್ಥರು ಎಂಬುದನ್ನು ನಿರ್ಧರಿಸಲಾಗಿದ್ದು ಪ್ರೇಕ್ಷಕರ ವೋಟಿಂಗ್ ಮೂಲಕವೇ.

ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದ ಸುದೀಪ್; ಮತ್ತೆ ಒಪ್ಪಿದ್ದು ಹೇಗೆ?

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ವರ್ಗ-ನರಕ ಕಾನ್ಸೆಪ್ಟ್​ ತರಲಾಗಿದೆ. ಯಾರು ಯಾವ ತಂಡ ಸೇರಬೇಕು ಎಂಬುದನ್ನು ವೋಟಿಂಗ್ ಆಧಾರದ ಮೂಲಕ ನಿರ್ಧರಿಸಲಾಗುವುದು ಎಂದು ವಾಹಿನಿ  ಹೇಳಿದೆ. ಈ ಮೂಲಕ ಕಳೆದ ವರ್ಷದ ಟೆಕ್ನಿಕ್​ನ ಮುಂದುವರಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಕೆಲವು ವರದಿಗಳು ಪ್ರಕಾರ ಹಲವು ವಾರಗಳ ಕಾಲ ಸ್ವರ್ಗ-ನರಕ ಕಾನ್ಸೆಪ್ಟ್​ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲವು ವರದಿಗಳು ಒಂದೇ ವಾರದಲ್ಲಿ ಎಲ್ಲವೂ ನಾರ್ಮಲ್​ ಆಗಲಿದೆ ಎನ್ನುತ್ತಿವೆ. ಸ್ವರ್ಗ-ನರಕ ಪಡೆಯಲು ಸ್ಪರ್ಧೆ ಏರ್ಪಟ್ಟರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು