ಮಲ್ಟಿಪ್ಲೆಕ್ಸ್ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಆಸೆ. ಆದರೆ ದುಬಾರಿಯಾದ ಸಿನಿಮಾಗಳ ಟಿಕೆಟ್ ದರ ನೋಡಿ ಎಷ್ಟೋ ಜನರು ಮಲ್ಟಿಪ್ಲೆಕ್ಸ್ (Multiplex) ಕಡೆಗೆ ತಲೆ ಹಾಕುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎಂದು ಚಿಂತಿಸುವ ವರ್ಗ ಕೂಡ ದೊಡ್ಡದಿದೆ. ಅಂಥವರಿಗೆಲ್ಲ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಇಂದು (ಫೆಬ್ರವರಿ 23) ಪಿವಿಆರ್ (PVR) ಮತ್ತು ಐನಾಕ್ಸ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡುವವರಿಗೆ ಕಡಿಮೆ ಬೆಲೆಯಲ್ಲಿ ಟಿಕೆಟ್ಗಳು ಸಿಗಲಿವೆ. ದೇಶಾದ್ಯಂತ ಕೇವಲ 99 ರೂಪಾಯಿಗೆ ಸಿನಿಮಾ ತೋರಿಸಲಾಗುತ್ತಿದೆ. ಅಂದಹಾಗೆ, ಈ ಆಫರ್ (Cinema Lovers Day) ಇರುವುದು ಇಂದು (ಫೆ.23) ಮಾತ್ರ!
ಪಿವಿಆರ್ ಮತ್ತು ಐನಾಕ್ಸ್ ಕಡೆಯಿಂದ ಫೆಬ್ರವರಿ 23ರಂದು ‘ಸಿನಿಮಾ ಲವರ್ಸ್ ಡೇ’ ಆಚರಿಸಲಾಗುತ್ತಿದೆ. ಈ ಪ್ರಯಕ್ತ ಪಿವಿಆರ್, ಐನಾಕ್ಸ್ನಲ್ಲಿ ಸಿನಿಮಾದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಹಾಲಿವುಡ್ನಿಂದ ಸ್ಯಾಂಡವುಡ್ ತನಕ ಎಲ್ಲ ಸಿನಿಮಾಗಳ ಟಿಕೆಟ್ಗಳು ಕೇವಲ 99 ರೂಪಾಯಿಗೆ ಸಿಗುತ್ತಿವೆ. ಸಾಮಾನ್ಯ ದರ್ಜೆಯ ಸೀಟುಗಳಿಗೆ 99 ರೂಪಾಯಿ ಇದೆ. ಐಷಾರಾಮಿಯಾದ ವಿಶೇಷ ಸೀಟ್ಗಳ ಬೆಲೆಯನ್ನೂ ತಗ್ಗಿಸಲಾಗಿದೆ.
IMPORTANT DEVELOPMENT… ‘ARTICLE 370’, ‘CRAKK’, ‘TBMAUJ’ SELL 2.30 LAC TICKETS AT *NATIONAL CHAINS* ON CINEMA LOVERS DAY… Yes, you read it right… The *affordable ticket pricing* on #CinemaLoversDay – ₹ 99 – has worked magic… The *advance* ticket sales have been phenomenal…… pic.twitter.com/h2yy8qCi31
— taran adarsh (@taran_adarsh) February 23, 2024
ಗೋಲ್ಡ್ ಕ್ಲಾಸ್ ರೀತಿಯ ಐಷಾರಾಮಿ ಸಿನಿಮಾ ಸೀಟ್ಗಳಿಗೆ ಮಾಮೂಲಿ ದಿನದಲ್ಲಿ ಸಾವಿರಾರು ರೂಪಾಯಿ ಟಿಕೆಟ್ ಬೆಲೆ ಇರುತ್ತದೆ. ಆದರೆ ‘ಸಿನಿಮಾ ಲವರ್ಸ್ ಡೇ’ ಪ್ರಯುಕ್ತ 199 ರೂಪಾಯಿಂದ ಆರಂಭವಾಗಿ ರಿಯಾಯಿತಿ ದರದಲ್ಲಿ ಈ ಸೀಟ್ಗಳ ಟಿಕೆಟ್ ಮಾರಲಾಗುತ್ತಿದೆ. ಲಕ್ಷಾಂತರ ಪ್ರೇಕ್ಷಕರು ಆ ಆಫರ್ನ ಮಜಾ ಸವಿಯುತ್ತಿದ್ದಾರೆ. ಇಂದು ಶುಕ್ರವಾರ ಆಗಿರುವುದರಿಂದ ಹೊಸದಾಗಿ ಬಿಡುಗಡೆಯಾದ ಸಿನಿಮಾಗಳ ಟಿಕೆಟ್ಗಳು ಕೂಡ ಪಿವಿಆರ್ ಹಾಗೂ ಐನಾಕ್ಸ್ನಲ್ಲಿ ಕೇವಲ 99 ರೂಪಾಯಿಗೆ ಸಿಗುತ್ತಿವೆ.
ಇದನ್ನೂ ಓದಿ: ಪಿವಿಆರ್ ಹಣ ಗಳಿಸುವುದು ಹೇಗೆ? ಟಿಕೆಟ್ನಿಂದ ಸಿಗುವುದೆಷ್ಟು? ನಿರ್ಮಾಪಕರಿಗೆ ತಲುಪುವುದೆಷ್ಟು? ವ್ಯವಹಾರ ಹೇಗೆ?
ಈಗ ಪಿವಿಆರ್ ಮತ್ತು ಐನಾಕ್ಸ್ನಲ್ಲಿ ಹಲವು ಸಿನಿಮಾಗಳು ಪ್ರದರ್ಶನ ಕಾಣುತ್ತಿದೆ. ಹೃತಿಕ್ ರೋಷನ್ ನಟನೆಯ ‘ಫೈಟರ್’, ಶಾಹಿದ್ ಕಪೂರ್ ಅಭಿನಯದ ‘ತೇರಿ ಬಾತೋ ಮೈ ಐಸಾ ಉಲ್ಜಾ ಜಿಯಾ’, ಪ್ರಿಯಾಮಣಿ ನಟಿಸಿರುವ ‘ಆರ್ಟಿಕಲ್ 370’, ವಿದ್ಯುತ್ ಜಾಮ್ವಾಲ್ ಅವರ ‘ಕ್ರ್ಯಾಕ್’, ತೇಜ ಸಜ್ಜಾ ನಟನೆಯ ‘ಹನುಮಾನ್’, ರಜನಿಕಾಂತ್ ಅಭಿನಯಿಸಿರುವ ‘ಲಾಲ್ ಸಲಾಂ’ ಮುಂತಾದ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಕನ್ನಡದ ‘ಒಂದು ಸರಳ ಪ್ರೇಮಕಥೆ’, ‘ಮಿಸ್ಟರ್ ನಟ್ವರ್ಲಾಲ್’, ‘ಫಾರ್ ರಿಜಿಸ್ಟ್ರೇಷನ್’ ಮುಂತಾದ ಸಿನಿಮಾಗಳನ್ನು ಕೂಡ ಇಂದು ಕೇವಲ 99 ರೂಪಾಯಿಗೆ ಪ್ರೇಕ್ಷಕರು ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:58 am, Fri, 23 February 24