Salaar: ‘ಸಲಾರ್​ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ

Prabhas: ‘ಸಲಾರ್​’ ಸಿನಿಮಾಗೆ ಡಬ್ಬಿಂಗ್​ ಮುಗಿಸಿರುವ ಸಪ್ತಗಿರಿ ಅವರು ಖುಷಿಯಿಂದ ಟ್ವೀಟ್​ ಮಾಡಿದ್ದಾರೆ. ಬಾಕ್ಸ್​ ಆಫೀಸ್​ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.

Salaar: ‘ಸಲಾರ್​ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ
ಪ್ರಭಾಸ್​

Updated on: Jul 09, 2023 | 7:56 AM

ಖ್ಯಾತ ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಈಗ ಅವರ ‘ಸಲಾರ್​’ ಸಿನಿಮಾ (Salaar Movie) ಬಗ್ಗೆ ಟಾಕ್​ ಕ್ರಿಯೇಟ್​ ಆಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್​ ಬಿಡಗಡೆ ಆಯಿತು. ಅದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಎರಡು ಭಾಗದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಸೆಪ್ಟೆಂಬರ್​ 28ರಂದು ಮೊದಲ ಭಾಗ ರಿಲೀಸ್​ ಆಗಲಿದೆ. ನಟ ಪ್ರಭಾಸ್ ಅವರು ಈ ಚಿತ್ರದಿಂದಲಾದರೂ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕು. ‘ಸಲಾರ್​’ ಸಿನಿಮಾದಲ್ಲಿ ಖ್ಯಾತ ಹಾಸ್ಯ ನಟ ಸಪ್ತಗಿರಿ (Comedy Actor Sapthagiri) ಕೂಡ ಅಭಿನಯಿಸಿದ್ದಾರೆ. ಅವರು ಈ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾ 2 ಸಾವಿರ ಕೋಟಿ ರೂಪಾಯಿ ಗಳಿಸಲಿದೆ ಎಂದು ಅವರು ಹೇಳಿದ್ದಾರೆ.

‘ಸಲಾರ್​’ ಸಿನಿಮಾಗೆ ಡಬ್ಬಿಂಗ್​ ಮುಗಿಸಿರುವ ಸಪ್ತಗಿರಿ ಅವರು ಖುಷಿಯಿಂದ ಟ್ವೀಟ್​ ಮಾಡಿದ್ದಾರೆ. ‘ಬಹುನಿರೀಕ್ಷಿತ ಸಲಾರ್​ ಸಿನಿಮಾಗೆ ನಾನು ಇಂದು ನನ್ನ ಪಾತ್ರದ ಡಬ್ಬಿಂಗ್​ ಪೂರ್ಣಗೊಳಿಸಿದ್ದೇನೆ. ಈ ಸಿನಿಮಾ ಡಬಲ್​ ಬ್ಲಾಕ್​ ಬಸ್ಟರ್​ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 2000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬ ನಂಬಿಕೆ ನನಗಿದೆ. ಈ ಅವಕಾಶ ನೀಡಿದ್ದಕ್ಕಾಗಿ ಪ್ರಭಾಸ್​, ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಧನ್ಯವಾದಗಳು’ ಎಂದು ಸಪ್ತಗಿರಿ ಅವರು ಟ್ವೀಟ್​ ಮಾಡಿದ್ದಾರೆ.

ಭಾರಿ ಬಜೆಟ್​ನಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ‘ಸಲಾರ್​’ ಸಿನಿಮಾವನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಪ್ರಭಾಸ್​ ಮಾತ್ರವಲ್ಲದೇ ಹಲವು ಮಂದಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್​ ಅಭಿನಯಿಸಿದ್ದಾರೆ. ಮಲಯಾಳಂ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​ ಅವರಿಗೂ ಪ್ರಮುಖ ಪಾತ್ರವಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಸೇರಿದಂತೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ‘ಸಲಾರ್​’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Project K Budget: ‘ಪ್ರಾಜೆಕ್ಟ್​ ಕೆ’ ಕಲಾವಿದರ ಒಟ್ಟು ಸಂಭಾವನೆ 200 ಕೋಟಿ ರೂ? ಇದರಲ್ಲಿ ಪ್ರಭಾಸ್​, ಕಮಲ್​ ಹಾಸನ್​ ಪಾಲು ಎಷ್ಟು?

ಪ್ರಭಾಸ್​ ಅವರು ‘ಬಾಹುಬಲಿ 2’ ಬಳಿಕ ಮಾಡಿದ ಯಾವ ಸಿನಿಮಾ ಕೂಡ ಗೆದ್ದಿಲ್ಲ. ಹಾಗಾಗಿ ಅವರು ‘ಸಲಾರ್​’ ಮೂಲಕ ಗೆಲ್ಲಬೇಕಿದೆ. ಅದಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. ‘ಸಲಾರ್​’ ಟೀಸರ್​ನಲ್ಲಿ ‘ಕೆಜಿಎಫ್​’ ಸ್ಟೈಲ್​ ಕಾಣಿಸಿದೆ. ಆ ಮೂಲಕ ಕಥೆಯ ಬಗ್ಗೆ ಕೌತುಕ ಮೂಡುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us