AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಚಾರಕ್ಕೆ ಬಾರದ ನಟಿ ವಿರುದ್ಧ ನಿರ್ದೇಶಕ, ನಿರ್ಮಾಪಕರಿಂದ ದೂರು ದಾಖಲು

Asurana Kaiyalli Parijatha: ನಿನ್ನೆಯಷ್ಟೆ ಹಣ ಕೊಡದೆ ಸತಾಯಿಸುತ್ತಿರುವ ನಿರ್ಮಾಪಕನ ವಿರುದ್ಧ ‘ವಸುದೇವ ಕುಟುಂಬ’ ಧಾರಾವಾಹಿಯ ನಟ-ನಟಿಯರು ಮತ್ತು ಯೂನಿಟ್ ಸದಸ್ಯರು ದೂರು ನೀಡಿದ್ದಲ್ಲದೆ, ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಿ ಮಂಗಳಾರತಿ ಮಾಡಿದ್ದರು. ಇಂದು ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರ ವಿರುದ್ಧ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ದೂರು ನೀಡಿದ್ದಾರೆ.

ಪ್ರಚಾರಕ್ಕೆ ಬಾರದ ನಟಿ ವಿರುದ್ಧ ನಿರ್ದೇಶಕ, ನಿರ್ಮಾಪಕರಿಂದ ದೂರು ದಾಖಲು
Asura
ಮಂಜುನಾಥ ಸಿ.
|

Updated on: May 02, 2026 | 4:50 PM

Share

ನಿನ್ನೆಯಷ್ಟೆ ಹಣ ಕೊಡದೆ ಸತಾಯಿಸುತ್ತಿರುವ ನಿರ್ಮಾಪಕನ (Producer) ವಿರುದ್ಧ ‘ವಸುದೇವ ಕುಟುಂಬ’ ಧಾರಾವಾಹಿಯ ನಟ-ನಟಿಯರು ಮತ್ತು ಯೂನಿಟ್ ಸದಸ್ಯರು ದೂರು ನೀಡಿದ್ದಲ್ಲದೆ, ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡ ಹಾಕಿ ಮಂಗಳಾರತಿ ಮಾಡಿದ್ದರು. ಇಂದು ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರ ವಿರುದ್ಧ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕ ದೂರು ನೀಡಿದ್ದಾರೆ.

‘ಅಮೃತವರ್ಷಿಣಿ’ ಧಾರಾವಾಹಿ ನಟಿ ರಜನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದು, ಸಿನಿಮಾನಲ್ಲಿ ನಟಿಸಿ ಈಗ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ‘ಅಸುರನ ಕೈಯಲ್ಲಿ ಪಾರಿಜಾತ’ ಹೆಸರಿನಲ್ಲಿ ಸಿನಿಮಾನಲ್ಲಿ ರಜಿನಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ಕಾರ್ತಿಕ್ ಎಂಬುವರು ಮೀಕ್ಷಾ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಟಿ ಬರುತ್ತಿಲ್ಲವೆನ್ನಲಾಗುತ್ತಿದೆ.

‘ಅಸುರನ ಕೈಯಲ್ಲಿ ಪಾರಿಜಾತ’ ಸಿನಿಮಾ ಅನ್ನು ವಿಘ್ನೇಶ್ ನಿರ್ದೇಶನ ಮಾಡಿದ್ದು ಕಾರ್ತಿಕ್ ಅವರು ನಿರ್ಮಾಣ ಮಾಡುವ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ. ಟ್ರೈಲರ್ ರಿಲೀಸ್​​ಗೆ ಕರೆದರೆ ಅಂದು ಬರ್ತ್​ ಡೇ ಇದೆ ಬರಲ್ಲ ಎಂದರು. ಪ್ರಚಾರಕ್ಕೆ ಕರೆದರೆ ಸೀರಿಯಲ್ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದೀನಿ ಎಂದರು. ನಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ ನಿರ್ದೇಶಕ.

ಇದನ್ನೂ ಓದಿ:ಏಕಾಏಕಿ ಎಂಟ್ರಿ ಕೊಟ್ಟ ‘ಪೆದ್ದಿ’ ಸಿನಿಮಾ; ಅಭಿಮಾನಿಗಳಿಗೆ ಶುರುವಾಗಿದೆ ಆತಂಕ

ಕೇವಲ ಎರಡು ಗಂಟೆ ಬಂದು ಪ್ರಚಾರ ಮಾಡಿಕೊಡಿ ಎಂದರೆ ಬರುತ್ತಿಲ್ಲ. ಮೂರು ದಿನ ಬನ್ನಿ ಅಂತ ಅಷ್ಟೇ ಕೇಳಿರೋದು ರಿಲೀಸ್ ದಿನ, ಟ್ರೈಲರ್ ರಿಲೀಸ್ ದಿನ ಒಂದು ಪ್ರೆಸ್ ಮೀಟ್ ಅಷ್ಟೇ , ಸಿನಿಮಾ ರೀಲ್ಸ್ ಶೇರ್ ಮಾಡಿಕೊಳ್ಳಿ ಎಂದರೆ ಹಣ ಕೊಡಿ ನಾನೇ ರೀಲ್ಸ್ ಮಾಡಿ ಹಾಕುತ್ತೀನಿ ಎನ್ನುತ್ತಾರೆ. ಅದಕ್ಕೆ ಈಗ ನಾವು ಫಿಲಂ ಚೇಂಬರ್ ಅಧ್ಯಕ್ಷರಿಗೆ ನಟಿಯ ವಿರುದ್ಧ ದೂರು ನೀಡಿದ್ದೀವಿ’ ಎಂದಿದ್ದಾರೆ ವಿಘ್ನೇಶ್. ದೂರು ಸ್ವೀಕರಿಸಿ ಮಾತನಾಡಿರುವ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, ‘ನಾನು ದೂರು ತಗೊಂಡಿದ್ದೀನಿ ಅದಕ್ಕೆ ಹೇಳೋದು ನಿರ್ಮಾಪಕರಿಗೆ ಸಿನಿಮಾ ಮಾಡೋಕು ಮುಂಚೆ ಸರಿಯಾಗಿ ಒಪ್ಪಂದ ಮಾಡಿಕೊಳ್ಳಿ ಅಂತ. ಆದರೆ ಇವರುಗಳು ಕೇಳಲ್ಲ, ನಾನು ಈಗಾಗಲೇ ರಜಿನಿ ಅವರ ಹತ್ತಿರ ಮಾತನಾಡಿದ್ದೀನಿ, ಫಿಲಂ ಚೇಂಬರ್​ಗೆ ಬರ್ತೀನಿ ಅಂತ ಹೇಳಿದ್ದಾರೆ. ನೋಡೋಣ, ಸಂಧಾನ ಮಾಡುವ ಪ್ರಯತ್ನ ಮಾಡುತ್ತೀವಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ಆಕ್ಲೆಂಡ್​ನಲ್ಲಿ ‘ಮೋದಿ ಮೋದಿ’ ಘೋಷಣೆ: ಪ್ರಧಾನಿಯ ಸ್ವಾಗತಕ್ಕೆ ಜನಸಾಗರ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ