Lockdown: ಮತ್ತೆ ಪ್ರಸಾರ ಆಗಲಿದೆ ‘ರಾಮಾಯಣ’ ಸೀರಿಯಲ್​! ಹಾಗಾದ್ರೆ ಲಾಕ್​ಡೌನ್​ ಆಗೋದು ಖಚಿತ?

Lockdown: ಮತ್ತೆ ಪ್ರಸಾರ ಆಗಲಿದೆ ‘ರಾಮಾಯಣ’ ಸೀರಿಯಲ್​! ಹಾಗಾದ್ರೆ ಲಾಕ್​ಡೌನ್​ ಆಗೋದು ಖಚಿತ?
(ರಾಮಾಯಣ ಧಾರಾವಾಹಿ)

ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಲ್ಲೂ ಜೋರಾಗಿ ಹಬ್ಬುತ್ತಿದೆ. ಜನರಿಗೆ ಮತ್ತೆ ಚಿಂತೆ ಆರಂಭವಾಗಿದೆ. ಲಸಿಕೆ ಬಂದ ನಂತರವೂ ಪರಿಸ್ಥಿತಿ ಕೈ ಮೀರುತ್ತಿರುವುದು ವಿಪರ್ಯಾಸವೇ ಸರಿ. ನಾಳೆ ಏನಾಗುತ್ತದೋ ಎಂಬ ಚಿಂತೆಯಲ್ಲೇ ದಿನ ದೂಡುವಂತಾಗಿದೆ. ದೇಶದೆಲ್ಲೆಡೆ ಮತ್ತೆ ಲಾಕ್​ಡೌನ್​ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಲಾಕ್​ಡೌನ್​ ಆಗಬಹುದು ಎಂಬುದಕ್ಕೆ ಸೂಚನೆ ಸಿಗುವ ರೀತಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗ ಹಿಂದಿಯ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಈಗ ಅದೇ ಸ್ಥಿತಿ […]

Madan Kumar

|

Apr 16, 2021 | 11:32 AM

ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಲ್ಲೂ ಜೋರಾಗಿ ಹಬ್ಬುತ್ತಿದೆ. ಜನರಿಗೆ ಮತ್ತೆ ಚಿಂತೆ ಆರಂಭವಾಗಿದೆ. ಲಸಿಕೆ ಬಂದ ನಂತರವೂ ಪರಿಸ್ಥಿತಿ ಕೈ ಮೀರುತ್ತಿರುವುದು ವಿಪರ್ಯಾಸವೇ ಸರಿ. ನಾಳೆ ಏನಾಗುತ್ತದೋ ಎಂಬ ಚಿಂತೆಯಲ್ಲೇ ದಿನ ದೂಡುವಂತಾಗಿದೆ. ದೇಶದೆಲ್ಲೆಡೆ ಮತ್ತೆ ಲಾಕ್​ಡೌನ್​ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಲಾಕ್​ಡೌನ್​ ಆಗಬಹುದು ಎಂಬುದಕ್ಕೆ ಸೂಚನೆ ಸಿಗುವ ರೀತಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದ ವರ್ಷ ಲಾಕ್​ಡೌನ್​ ಆರಂಭ ಆದಾಗ ಹಿಂದಿಯ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಈಗ ಅದೇ ಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ!

ಲಾಕ್​ಡೌನ್​ ಆಗುತ್ತೋ ಇಲ್ಲವೋ ಎಂಬ ಗೊಂದಲ ಕಾಡುತ್ತಿರುವಾಗಲೇ ಈ ವರ್ಷ ಕೂಡ ‘ರಾಮಾಯಣ’ ಧಾರಾವಾಹಿ ಮರು ಪ್ರಸಾರಕ್ಕೆ ಸಜ್ಜಾಗಿದೆ. ಕಳೆದ ವರ್ಷ ಜನರನ್ನು ಮನೆಯೊಳಗೆ ಕೂರಿಸಲು ಮಾರ್ಚ್​ ತಿಂಗಳಿಂದ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಸೀರಿಯಲ್​ ಆರಂಭಿಸಲಾಗಿತ್ತು. ಈ ವರ್ಷ ಸ್ಟಾರ್​ ಭಾರತ್​ ವಾಹಿನಿಯಲ್ಲಿ ಮತ್ತೆ ರಾಮಾಯಣ ಪ್ರಸಾರ ಆಗಲಿದೆ. ಈ ಸುದ್ದಿ ಕೇಳಿದವರೆಲ್ಲ ‘ಹಾಗಾದ್ರೆ ಮತ್ತೆ ಲಾಕ್​ಡೌನ್​ ಆಗೋದು ಖಚಿತ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

1987ರಲ್ಲಿ ಮೂಡಿಬಂದ ರಾಯಾಯಣ ಧಾರಾವಾಹಿಗೆ ರಮಾನಂದ್​ ಸಾಗರ್​ ನಿರ್ದೇಶನ ಮಾಡಿದ್ದರು. ಅದರಲ್ಲಿ ಸೀತೆ ಪಾತ್ರಕ್ಕೆ ದೀಪಿಕಾ ಚಿಕ್ಲಿಯಾ ಬಣ್ಣ ಹಚ್ಚಿದ್ದರು. ಈಗ ಸ್ಟಾರ್​ ಭಾರತ್​ ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರ ಆಗಲಿದೆ ಎಂಬ ಸುದ್ದಿಯನ್ನು ದೀಪಿಕಾ ಚಿಕ್ಲಿಯಾ ಹಂಚಿಕೊಂಡಿದ್ದಾರೆ. ‘ಈ ವರ್ಷ ಕೂಡ ರಾಮಾಯಣ ಧಾರಾವಾಹಿ ಕಿರುತೆರೆಯಲ್ಲಿ ಮತ್ತೆ ಬರಲಿದೆ ಎಂದು ವಿಷಯವನ್ನು ಹಂಚಿಕೊಳ್ಳಲು ಎಗ್ಸೈಟ್​​ ಆಗಿದ್ದೇನೆ’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

‘ಕಳೆದ ವರ್ಷ ಲಾಕ್​ಡೌನ್​ನಲ್ಲಿ ರಾಮಾಯಣ ಪ್ರಸಾರವಾಗಿತ್ತು. ಈ ವರ್ಷ ಕೂಡ ಇತಿಹಾಸ ಮರುಕಳಿಸಲಿದೆ ಎನಿಸುತ್ತದೆ’ ಎಂದು ದೀಪಿಕಾ ಊಹೆ ಮಾಡಿದ್ದಾರೆ. ಈ ಧಾರಾವಾಹಿ ನನಗೆ ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಜೀವನದ ಭಾಗವೇ ಆಗಿದೆ. ರಾಮಾಯಣ ವೀಕ್ಷಿಸಲು ಪ್ರತಿ ರಾತ್ರಿ 7 ಗಂಟೆಗೆ ಸ್ಟಾರ್​ ಭಾರತ್​ ವಾಹಿನಿಯನ್ನು ನೋಡಿ ಎಂದು ದೀಪಿಕಾ ಬರೆದುಕೊಂಡಿದ್ದಾರೆ.

ರಾಮನಾಗಿ ಅರುಣ್​ ಗೋವಿಲ್​, ಲಕ್ಷ್ಮಣನಾಗಿ ಸುನಿಲ್​ ಲಹರಿ, ರಾವಣನಾಗಿ ಅರವಿಂದ್​ ತ್ರಿವೇದಿ, ಹನುಮಂತನ ಪಾತ್ರದಲ್ಲಿ ಧಾರಾ ಸಿಂಗ್​ ನಟಿಸಿದ್ದ ಈ ಸೀರಿಯಲ್​ ಎಷ್ಟೇ ವರ್ಷ ಕಳೆದರೂ ತನ್ನ ಚಾರ್ಮ್​ ಕಳೆದುಕೊಂಡಿಲ್ಲ. ಹಾಗಾಗಿ ಜನರು ಮತ್ತೆ ಮತ್ತೆ ಇದನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಧಾರಾವಾಹಿ ಕಥೆ ಹಾಗಿರಲಿ, ಒಂದು ವೇಳೆ ಮತ್ತೆ ಲಾಕ್​ಡೌನ್​ ಆದರೆ ಏನು ಮಾಡೋದು ಎಂದು ಜನಸಾಮಾನ್ಯರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಬಾರದು: ಕಾಂಗ್ರೆಸ್​ ಟ್ವೀಟ್​

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಬೇಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Follow us on

Related Stories

Most Read Stories

Click on your DTH Provider to Add TV9 Kannada