ಮತ್ತೆ ಮ್ಯಾಜಿಕ್ ಮಾಡುತ್ತಾ ‘ಲವ್ ಮಾಕ್ಟೆಲ್ 3’? ಬಿಡುಗಡೆ ಯಾವಾಗ?
Milana Nagaraj-Darling Krishna: ಡಾರ್ಲಿಂಗ್ ಕೃಷ್ಣಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ‘ಲವ್ ಮಾಕ್ಟೆಲ್’. ಹಾಸ್ಯ, ಭಾವುಕತೆ, ಗೆಳೆತನ, ಒಳ್ಳೆಯ ಸಂಗೀತ ಎಲ್ಲವುಗಳ ಮಿಶ್ರಣವಾಗಿದ್ದ ‘ಲವ್ ಮಾಕ್ಟೆಲ್’ ಅನ್ನು ಸಿನಿಮಾ ಸರಣಿಯಾಗಿ ಮುಂದುವರೆಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, 2022 ರಲ್ಲಿ ‘ಲವ್ ಮಾಕ್ಟೆಲ್ 2’ ಸಿನಿಮಾ ನಿರ್ಮಿಸಿದರು. ಆ ಸಿನಿಮಾ ಸಹ ಹಿಟ್ ಆಯ್ತು. ಇದೀಗ ಇದೇ ಜೋಡಿ ‘ಲವ್ ಮಾಕ್ಟೆಲ್ 3’ ಸಿನಿಮಾ ಮಾಡಿದ್ದು, ಸಿನಿಮಾದ ಬಿಡುಡಗೆ ದಿನಾಂಕ ಘೋಷಣೆ ಮಾಡಿದ್ದಾರೆ.

ಕೋವಿಡ್ ಸಮಯದಲ್ಲಿ ಒಟಿಟಿಯಲ್ಲಿ ದೊಡ್ಡ ಹಿಟ್ ಆಗಿತ್ತು ‘ಲವ್ ಮಾಕ್ಟೆಲ್’ (Love Mocktail) ಸಿನಿಮಾ. ಡಾರ್ಲಿಂಗ್ ಕೃಷ್ಣಗೆ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ. ಹಾಸ್ಯ, ಭಾವುಕತೆ, ಗೆಳೆತನ, ಒಳ್ಳೆಯ ಸಂಗೀತ ಎಲ್ಲವುಗಳ ಮಿಶ್ರಣವಾಗಿದ್ದ ‘ಲವ್ ಮಾಕ್ಟೆಲ್’ ಅನ್ನು ಸಿನಿಮಾ ಸರಣಿಯಾಗಿ ಮುಂದುವರೆಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, 2022 ರಲ್ಲಿ ‘ಲವ್ ಮಾಕ್ಟೆಲ್ 2’ ಸಿನಿಮಾ ನಿರ್ಮಿಸಿದರು. ಆ ಸಿನಿಮಾ ಸಹ ಹಿಟ್ ಆಯ್ತು. ಇದೀಗ ಇದೇ ಜೋಡಿ ‘ಲವ್ ಮಾಕ್ಟೆಲ್ 3’ ಸಿನಿಮಾ ಮಾಡಿದ್ದು, ಸಿನಿಮಾದ ಬಿಡುಡಗೆ ದಿನಾಂಕ ಘೋಷಣೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ‘ಲವ್ ಮಾಕ್ಟೆಲ್ 3’ ಸಿನಿಮಾ ಮೋಷನ್ ಪೋಸ್ಟರ್ ಲಾಂಚ್ ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಇದೀಗ ಹೊಸ ವರ್ಷದ ಉಡುಗೊರೆ ಎಂಬಂತೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಡಾಲಿಂಗ್ ಕೃಷ್ಣ ಘೋಷಿಸಿದ್ದಾರೆ. ಏಪ್ರಿಲ್ 10 ರಂದು ‘ಲವ್ ಮಾಕ್ಟೆಲ್ 3’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
2020 ಯಲ್ಲಿ ಬಿಡುಗಡೆ ಆಗಿದ್ದ ಮೊದಲ ‘ಲವ್ ಮಾಕ್ಟೆಲ್’ ಸಿನಿಮಾ ನವಿರು ಪ್ರೆಮಕತೆ, ಭರಪೂರ ಹಾಸ್ಯ, ನಾಸ್ಟೆಲಿಜಿಯಾ ಸೀನುಗಳಿಂದಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಸಿನಿಮಾದ ಅಂತ್ಯ ಸಖತ್ ಭಾವುಕವಾಗಿಯೂ ಇತ್ತು. 2022 ರಲ್ಲಿ ಬಂದ ‘ಲವ್ ಮಾಕ್ಟೇಲ್ 2’ ಸಿನಿಮಾ ಪ್ರೇಮವನ್ನು ಕಳೆದುಕೊಂಡವನೊಬ್ಬ ಮತ್ತೆ ಪ್ರೀತಿಯನ್ನು ಅರಸುವ ಆ ಹಾದಿಯಲ್ಲಿ ಎದುರಾಗುವ ಯುವತಿಯರು ಮತ್ತು ಅವರೊಟ್ಟಿಗಿನ ತಮಾಷೆಯಿಂದಾಗಿ ಗಮನ ಸೆಳೆದಿತ್ತು. ಜೊತೆಗೆ ಸಿನಿಮಾನಲ್ಲಿ ಭಾವುಕ ಅಂಶಗಳು ಸಾಕಷ್ಟಿದ್ದವು. ಇದೀಗ ತೆರೆಗಾಣಲು ಸಜ್ಜಾಗಿರುವ ‘ಲವ್ ಮಾಕ್ಟೇಲ್ 3’ ಈ ಹಿಂದಿನ ಎರಡು ಆವೃತ್ತಿಗಳಿಗಿಂತಲೂ ಭಿನ್ನವಾಗಿರಲಿದೆ ಎಂಬ ವಿಚಾರವನ್ನು ಡಾರ್ಲಿಂಗ್ ಕೃಷ್ಣ ಹಂಚಿಕೊಂಡಿದ್ದಾರೆ. ಕತೆ, ನಿರೂಪಣೆ ಸೇರಿದಂತೆ ಎಲ್ಲದರಲ್ಲಿಯೂ ‘ಲವ್ ಮಾಕ್ಟೇಲ್ 3’ ಹೊಸ ಅನುಭೂತಿ ಕೊಡಲಿದೆ ಎಂಬ ಭರವಸೆ ಕೃಷ್ಣ ಅವರದ್ದು.
ಇದನ್ನೂ ಓದಿ:ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್
‘ಲವ್ ಮಾಕ್ಟೆಲ್ 3’ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರುಗಳು ಬಂಡವಾಳ ಹೂಡಿದ್ದು, ಸಿನಿಮಾವನ್ನು ಕೃಷ್ಣ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲ ಈ ಸಿನಿಮಾಕ್ಕಿದೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ, ಮುಂತಾದವರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ತೊಡಗಿಸಿಕೊಂಡಿದ್ದು, ಸಿನಿಮಾದ ಬಿಡುಗಡೆಯನ್ನು ಏಪ್ರಿಲ್ 10ರಂದು ಮಾಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




