Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijaya Bhaskar’s Death Anniversary: ವಿಜಯ ಭಾಸ್ಕರರನ್ನು ಸಂಗೀತದೆಡೆ ಸೆಳೆದ ದೇವಸ್ಥಾನದ ಲೆಗ್ ಹಾರ್ಮೋನಿಯಂ

Music Director : ಹಿಂದಿಯ ಟಾಪ್ ಹೀರೋ ದಿಲೀಪ್ ಕುಮಾರ್, ವಿಜಯಭಾಸ್ಕರ್ ಪಿಯಾನೋ ಕೈಚಳಕ ನೋಡಿ ‘ನಿಮಗೆ ಮುಂಬೈನಲ್ಲಿ ಮನೆ ಕೊಡಿಸ್ತೀನಿ. ನಿನ್ನ ಸಿನಿಮಾಗಳಿಗೆ ಇನ್ನು ನಿಮ್ಮನ್ನೇ ರೆಕಮೆಂಡ್ ಮಾಡ್ತೀನಿ’ ಎಂದಿದ್ದರು.

Vijaya Bhaskar’s Death Anniversary: ವಿಜಯ ಭಾಸ್ಕರರನ್ನು ಸಂಗೀತದೆಡೆ ಸೆಳೆದ ದೇವಸ್ಥಾನದ ಲೆಗ್ ಹಾರ್ಮೋನಿಯಂ
ಚಲನಚಿತ್ರ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಮತ್ತು ಹಿರಿಯ ಪರ್ತಕರ್ತ ಎನ್. ಎಸ್. ಶ್ರೀಧರಮೂರ್ತಿ
Follow us
ಶ್ರೀದೇವಿ ಕಳಸದ
|

Updated on:Mar 03, 2022 | 11:29 AM

ವಿಜಯ ಭಾಸ್ಕರ್ | Vijaya Bhaskar (1931-2002) : ದಕ್ಷಿಣ ಭಾರತ ಚಿತ್ರರಂಗದಲ್ಲಿ ಇಳಯ ರಾಜಾ ಅವರಿಗಿಂತ ಮೊದಲು ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿಜಯ ಭಾಸ್ಕರ್ 628 ಚಿತ್ರಗಳಿಗೆ ಸಂಗೀತ ನೀಡಿ ಭಾರತೀಯ ಚಿತ್ರರಂಗದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ತಮಗೆ ಇದ್ದ ಸಂಪರ್ಕಗಳಿಂದ ಕನ್ನಡ ಚಿತ್ರಸಂಗೀತದ ವ್ಯಾಪ್ತಿಯನ್ನು ಗಮನಾರ್ಹವಾಗಿ ಹಿಗ್ಗಿಸಿದರು. 1931ರ ಸೆಪ್ಟಂಬರ್ 7ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ತಂದೆ ಕೃಷ್ಣಮೂರ್ತಿ ಆ ಕಾಲದಲ್ಲಿಯೇ ಚೀಫ್ ಇಂಜಿನಿಯರ್ ಆಗಿದ್ದವರು. ತಾಯಿ ಜೀಜಾಬಾಯಿ ಕೂಡ ಸಂಗೀತದಲ್ಲಿ ಆಸಕ್ತಿ ಇದ್ದವರೇ. ಇವರ ಮನೆ ಇದ್ದಿದ್ದು ಮಲ್ಲೇಶ್ವರಂನಲ್ಲಿ. ಸಮೀಪದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಲೆಗ್ ಹಾರ‍್ಮೋನಿಯಂ ಮೂಲಕ ಸಂಗೀತ ನೀಡುತ್ತಿದ್ದ ಕ್ರಮ ವಿಜಯ ಭಾಸ್ಕರರನ್ನು ಆಕರ್ಷಿಸಿತು. ತಂಗಿಯರಿಗೆ ವಿದ್ವಾನ್ ರತ್ನಗಿರಿ ಸುಬ್ಬಾಶಾಸ್ತ್ರಿಗಳ ಬಳಿ ಸಂಗೀತ ಕಲಿಸುವ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಕೇಳುತ್ತಲೇ ಆರಂಭಿಕ ಸಂಗೀತ ಕಲಿಕೆಗೆ ತೊಡಗಿಕೊಂಡರು ವಿಜಯ ಭಾಸ್ಕರ್. ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

*

(ಭಾಗ 1)

ತಂದೆಗೆ ಮಗ ಪೂರ್ಣಪ್ರಮಾಣದಲ್ಲಿ ಸಂಗೀತ ಕ್ಷೇತ್ರದೆಡೆ ಬರುವುದು ಇಷ್ಟ ಇರಲಿಲ್ಲ. ತನ್ನ ಹಾಗೇ ಇಂಜಿನಿಯರ್ ಆಗಲಿ ಅಂತ ಆಸೆ. ಓದಿನಲ್ಲಿಯೂ ಮುಂದೆ ಇದ್ದ ಅವರಿಗೆ ಸುಲಭವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ಸೀಟ್ ಸಿಕ್ಕಿತು. ತಂದೆಯ ಆಸೆಯಂತೆ ಇಂಜಿನಿಯಿರಿಂಗ್ ಸೇರಿದರೂ ಸಂಗೀತದ ಆಸಕ್ತಿ ದೂರ ಆಗಿರಲಿಲ್ಲ. ಶೇಷಾದ್ರಿ ಪುರಂನಲ್ಲಿ ಶ್ಯಾಮಲಾ ಭಾವೆ ಅವರ ತಂದೆ ಜಿ.ವಿ.ಭಾವೆ ಅವರ ಹತ್ತಿರ ಹಿಂದೂಸ್ತಾನಿ ಸಂಗೀತ ಕಲಿಯಲು ಆರಂಭಿಸಿದರು. ಎಷ್ಟೋ ದಿನ ಮಗ ಹೀಗೆ ಸಂಗೀತ ಕಲೀತಾ ಇರೋ ವಿಷಯ ತಂದೆಗೆ ಗೊತ್ತೇ ಇರಲಿಲ್ಲ. ವಿಜಯ ಭಾಸ್ಕರ್ ಅವರ ಸಂಗೀತದ ಆಸಕ್ತಿ ಎಷ್ಟು ತೀವ್ರವಾಗಿತ್ತು ಅಂದರೆ ಮೈಸೂರು ಅರಮನೆ ಆರ್ಕೆಸ್ಟ್ರಾ ಹ್ಯಾಂಡಲ್ ಮಾಡುತ್ತಿದ್ದ ಲೀನ್ ಹಂಟ್ ಅವರ ಹತ್ತಿರ ವೆಸ್ಟರ್ನ್ ಮ್ಯೂಸಿಕ್ ಕಲಿತರು. ಅದರಲ್ಲೂ ಪಿಯಾನೋ ಪ್ಲೇ ಮಾಡೋದ್ರಲ್ಲಿ ಮಾಸ್ಟರ್ ಎನ್ನಿಸಿಕೊಂಡರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸೋ ಹೊತ್ತಿಗೆ ವಿಜಯಭಾಸ್ಕರ್ ಸಂಗೀತದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಪಿಯಾನೋ ನುಡಿಸೋದ್ರಲ್ಲಿ ಅವರನ್ನ ಮೀರಿಸೋರೆ ಇಲ್ಲ ಅನ್ನೋ ಮಾತು ಎಲ್ಲಾ ಕಡೆ ಕೇಳಿ ರ‍್ತಾ ಇತ್ತು. ಈಗ ತಂದೆ ಕೃಷ್ಣಮೂರ್ತಿ ಅವರಿಗೂ ಮಗನ ಹಾದಿ ಸಂಗೀತವೇ ಅನ್ನೋದು ಕ್ಲಿಯರ್ ಆಗಿತ್ತು. ಆಗೆಲ್ಲ ಇಂಜಿನಿಯರಿಂಗ್ ಓದುವವರೇ ಕಡಿಮೆ. ವಿಜಯಭಾಸ್ಕರ್ ಅವರಿಗೆ ಜಾಬ್ ಅಪರ್ಚುನಿಟಿಗೆ ಏನು ಕೊರತೆ ಇರಲಿಲ್ಲ. ಆದರೆ ಅವರಿಗೆ ಸಂಗೀತದಲ್ಲಿಯೇ ಏನನ್ನಾದರೂ ಸಾಧಿಸಬೇಕು ಅನ್ನುವ ಹಂಬಲ ಬಂದುಬಿಟ್ಟಿತ್ತು.

ಇದನ್ನೂ ಓದಿ : Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

ಬಾಲಿವುಡ್‌ನಲ್ಲಿ ಏನಾದರೂ ಮಾಡ್ಬೇಕು ಅನ್ನೋ ಹಂಬಲದಲ್ಲಿ ಮುಂಬೈಗೆ ಹೋದರು. ಅಲ್ಲಿ ಮಾಧವ ಲಾಲ್ ಮಾಸ್ಟರ್ ಎನ್ನುವವರಿಗೆ ಅಸೋಸಿಯೇಟ್ ಆಗುವ ಅವಕಾಶ ಸಿಕ್ಕಿತು. ಅವರ ಮೂಲಕವೇ ಹಿಂದಿ ಚಿತ್ರರಂಗದ ದಿಗ್ಗಜ ನೌಷಾದ್ ಅವರ ಪರಿಚಯವಾಯಿತು. ಅವರಿಬ್ಬರ ಸಂಬಂಧ ಗುರು-ಶಿಷ್ಯ ಸಂಬಂಧದಷ್ಟು ನಿಕಟವಾಯಿತು. ನೌಷಾದ್ ಅವರ ಕ್ಲಾಸಿಕ್ ಅಂತ್ಲೇ ಕರೆಸಿಕೊಂಡಿರುವ ‘ಬೈಜುಬಾವ್ರ’ ಸಿನಿಮಾಕ್ಕೆ ವಿಜಯಭಾಸ್ಕರ್ ಅಸೋಸಿಯೇಟ್ ಆಗಿ ಕೆಲಸ ಮಾಡಿದರು. ಬಾಲಿವುಡ್‌ನಲ್ಲಿ ಅವರು ಫೇಮಸ್ ಕೂಡ ಆಗಿದ್ದರು. ಮದನ್ ಮೋಹನ್ ಅವರ ಅಸೋಸಿಯೇಟ್ ಆಗುವ ಅವಕಾಶ ಕೂಡ ಸಿಕ್ಕಿತು. ಹೀಗೆ ಅಸೋಸಿಯೇಟ್ ಆಗಿಯೇ ವಿಜಯಭಾಸ್ಕರ್ ಅವರಿಗೆ ಕೈತುಂಬಾ ಕೆಲಸಗಳು. ಆಗಿನ ಹಿಂದಿಯ ಟಾಪ್ ಹೀರೋ ದಿಲೀಪ್ ಕುಮಾರ್, ವಿಜಯಭಾಸ್ಕರ್ ಪಿಯಾನೋ ಕೈಚಳಕ ನೋಡಿ ‘ನಿಮಗೆ ಮುಂಬೈನಲ್ಲಿ ಮನೆ ಕೊಡಿಸ್ತೀನಿ. ನಿನ್ನ ಸಿನಿಮಾಗಳಿಗೆ ಇನ್ನು ನಿಮ್ಮನ್ನೇ ರೆಕಮೆಂಡ್ ಮಾಡ್ತೀನಿ’ ಎಂದಿದ್ದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Chi. Udayashankar’s Birth Anniversary: ಎರಡುತಾಸಿಗೆ ‘ಬೆಂಗಳೂರ್ ಮೈಲ್’, ಹತ್ತುನಿಮಿಷಕ್ಕೆ ಕೆ.ಜಿ ಮೈಸೂರ್​ಪಾಕ್ ಖಾಲಿ

Published On - 11:27 am, Thu, 3 March 22

ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ