ನಟಿ ದೀಪಿಕಾ ಪಡುಕೋಣೆ ಫಿಟ್ನೆಸ್ಗೆ ಹೆಚ್ಚು ಒತ್ತುಕೊಡುತ್ತಾರೆ. ಸದಾ ಜಿಮ್ನಲ್ಲಿ ಕಳೆಯುವ ಅವರು, ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ. ಆದರೆ, ಲಾಕ್ಡೌನ್ನಿಂದ ಅವರ ಲೈಫ್ಸ್ಟೈಲ್ ಕೊಂಚ ಬದಲಾದಂತಿದೆ. ಅವರು ಅಂದುಕೊಳ್ಳೋದು ಒಂದಾದರೆ, ಆಗೋದು ಮಾತ್ರ ಇನ್ನೊಂದು.
ದೀಪಿಕಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಯೋಗಾಸನ ಮಾಡುತ್ತಿದ್ದಾರೆ. ಅದೇ ಪೋಸ್ಟ್ನಲ್ಲಿ ಮತ್ತೊಂದು ಫೋಟೋ ಹಾಕಿದ್ದು, ಅದರಲ್ಲಿ ದೀಪಿಕಾ ನಿದ್ರಿಸುತ್ತಿದ್ದಾರೆ. ಇದಕ್ಕೆ ಅವರು ನಿರೀಕ್ಷೆ vs ರಿಯಾಲಿಟಿ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸದ್ಯ, ಪೋಸ್ಟ್ಗೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ಕೆಲವರು ‘ಈ ಫೋಟೋ ನನ್ನ ದಿನವನ್ನು ಖುಷಿಯಾಗಿಸಿತು’ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ನಾನು ಯೋಗ ಮಾಡಬೇಕು ಎಂದುಕೊಂಡಿದ್ದೇನೆ. ನಿಮ್ಮನ್ನು ನಾನು ಮಾದರಿಯಾಗಿಟ್ಟುಕೊಳ್ಳುತ್ತೇನೆ ಎಂದಿದ್ದಾರೆ. ಹಲವರು ನಗುವ ಸ್ಮೈಲಿ ಹಾಕಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ನೋಡಿದ ಅನೇಕರು ಖುಷಿ ಆಗಿದ್ದಂತೂ ಸತ್ಯ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಏಪ್ರಿಲ್ನಲ್ಲಿ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿತ್ತು. ಕೊರೊನಾದಿಂದಾಗಿ ಮುಂಬೈನಲ್ಲಿ ಆಗಿರುವ ಜನತಾ ಕರ್ಫ್ಯೂನಿಂದ ತಪ್ಪಿಸಿಕೊಳ್ಳಲು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಸದ್ಯ, ದೀಪಿಕಾ ಕೈನಲ್ಲಿ ಸಾಲು ಸಾಲು ಚಿತ್ರಗಳಿವೆ. ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ನಟ ಪ್ರಭಾಸ್ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ಜೊತೆಯಾಗಿ ಮಾಡುತ್ತಿರುವ ಸಿನಿಮಾಗೆ ದೀಪಿಕಾ ನಾಯಕಿ. ಹೃತಿಕ್ ನಟನೆಯ ಫೈಟರ್ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ರಿಲೀಸ್ಗೆ ರೆಡಿ ಇರುವ ‘83’ ಚಿತ್ರದಲ್ಲಿ ದೀಪಿಕಾ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ನಟ ರಣವೀರ್ ಸಿಂಗ್ಗೆ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!
ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ಗೆ ಸಿಕ್ಕ ಮೊದಲ ಸಂಬಳ ಎಷ್ಟು? ಖರೀದಿಸಿದ್ದು ಏನು?
Published On - 8:33 pm, Mon, 28 June 21