
ಈ ಮೊದಲು ರಿಲೀಸ್ ಆಗಿ ಫ್ಲಾಪ್ ಎನಿಸಿಕೊಂಡಿದ್ದ ‘ಥಗ್ ಲೈಫ್’ (Thuf Life Movie) ಚಿತ್ರ ಮೊದಲ ದಿನ 15 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾ ನಂತರದ ದಿನಗಳಲ್ಲಿ ಹೀನಾಯ ಕಲೆಕ್ಷನ್ ಮಾಡಿತು. ಈ ಚಿತ್ರ ಇನ್ನೂ 50 ಕೋಟಿ ರೂಪಾಯಿ ಗಳಿಸಲು ಸಾಧ್ಯವಾಗಿಲ್ಲ. ಈ ಸಿನಿಮಾ ರಿಲೀಸ್ ಆದ ಎರಡು ವಾರಗಳ ಬಳಿಕ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಜೂನ್ 20ರಂದು ಧನುಶ್ ನಟನೆಯ ‘ಕುಬೇರ’ ಹಾಗೂ ಆಮಿರ್ ಖಾನ್ ಅಭಿನಯದ ‘ಸಿತಾರೇ ಜಮೀನ್ ಪರ್’ ಸಿನಿಮಾಗಳು ತೆರೆಗೆ ಬಂದಿವೆ. ಈ ಎರಡೂ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ನಲ್ಲಿ ‘ಥಗ್ ಲೈಫ್’ ಚಿತ್ರವನ್ನು ಹಿಂದಿಕ್ಕಿಲ್ಲ.
ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಮೊದಲಾದವರು ನಟಿಸಿರೋ ‘ಕುಬೇರ’ ಸಿನಿಮಾ ಜೂನ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 13 ಕೋಟಿ ರೂಪಾಯಿ. ಈ ಮೂಲಕ ಧನುಶ್ ಚಿತ್ರ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ.
‘ಕುಬೇರ’ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ರೇಟಿಂಗ್ ನೀಡಿದ್ದು, 8.7 ರೇಟಿಂಗ್ ಸಿಕ್ಕಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಚಿತ್ರ ಅನಾಯಾಸವಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಭಿಕ್ಷುಕನ ವೇಷ ಧರಿಸಲು ಕೋಟಿ ಕೋಟಿ ಸಂಭಾವನೆ ಪಡೆದ ಧನುಶ್
ಆಮಿರ್ ಖಾನ್ ನಟನೆಯ ‘ಸಿತಾರೇ ಜಮೀನ್ ಪರ್’ ಚಿತ್ರ ಕೂಡ ಶುಕ್ರವಾರ ತೆರೆಗೆ ಬಂದಿದೆ. ಈ ಸಿನಿಮಾ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಈ ಸಿನಿಮಾ ಮೊದ ದಿನ 11.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆಮಿರ್ ಖಾನ್ ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆದವರು. ಈ ರೀತಿಯ ಭಿನ್ನ ಪ್ರಯೋಗ ಮಾಡಿದಾಗ ಸಿನಿಮಾದ ಗಳಿಕೆ ಆಗಲು ಹೆಚ್ಚಿನ ಸಮಯ ಬೇಕಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.