ಅಕ್ಷಯ್ ಕುಮಾರ್ ಮೊದಲ ಸಂಭಾವನೆ ಇಷ್ಟೇನಾ? ಮೊಬೈಲ್ ಕೂಡ ಬರಲ್ಲ
ಅಕ್ಷಯ್ ಕುಮಾರ್ ಅವರ ಯಶಸ್ವಿ ಚಲನಚಿತ್ರ ಜೀವನದ ಕಥೆಯನ್ನು ಈ ಲೇಖನ ವಿವರಿಸುತ್ತದೆ. ಅವರ ಮೊದಲ ಚಿತ್ರಕ್ಕೆ ಕೇವಲ 5001 ರೂಪಾಯಿ ಸಂಭಾವನೆ ಪಡೆದಿದ್ದ ಅಕ್ಷಯ್, ಇಂದು 90 ಕೋಟಿ ರೂಪಾಯಿಗಳನ್ನು ಪಡೆಯುವಷ್ಟು ಯಶಸ್ವಿಯಾಗಿದ್ದಾರೆ. ಅವರ ಕಠಿಣ ಪರಿಶ್ರಮ ಇದಕ್ಕೆ ಕಾರಣ.

ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್ನ ಯಶಸ್ವಿ ನಟರಲ್ಲಿ ಒಬ್ಬರು. ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರು ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಅದೇ ರೀತಿ ಅತಿ ಹೆಚ್ಚು ತೆರಿಗೆ ಪಾವತಿಸೋ ಹೀರೋಗಳಲ್ಲೂ ಒಬ್ಬರಾಗಿದ್ದಾರೆ. ಅವರು ಆರಂಭದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿರಲಿಲ್ಲ. ಆಗ ಅವರಿಗೆ ಸಿಗುತ್ತಿದ್ದ ಸಂಭಾವನೆಯೂ ಕಡಿಮೆ ಆಗಿತ್ತು.
ಅಕ್ಷಯ್ ಕುಮಾರ್ ಅವರು ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬುದನ್ನು ಹೇಳಿದ್ದಾರೆ. ‘ನಾನು ಮೊದಲು ಪಡೆದ ಸಂಭಾವನೆ 5001 ರೂಪಾಯಿ. ಈ ಚೆಕ್ನ ನನಗೆ ನೀಡಲಾಯಿತು. ಈ ಚೆಕ್ ದೀದಾರ್ ಸಿನಿಮಾಗೆ ನೀಡಲಾಗಿತ್ತು’ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
ಅಕ್ಷಯ್ ಕುಮಾರ್ ವೃತ್ತಿ ಜೀವನಕ್ಕೆ 33 ವರ್ಷಗಳ ಮೇಲಾಗಿದೆ. 5 ಸಾವಿ ರೂಪಾಯಿಯಿಂದ ಆರಂಭವಾದ ಅವರ ಜರ್ನಿ ಅವರು 90 ಕೋಟಿ ರೂಪಾಯಿ ತೆಗೆದುಕೊಳ್ಳುವವರೆಗೆ ಬೆಳೆದು ನಿಂತಿದೆ. ಅವರು ಅನೇಕರಿಗೆ ಮಾದರಿ ಆಗಿದೆ.
‘ಅದೃಷ್ಟ ಅನ್ನೋದು ಶೇ.70ರಷ್ಟು ಕೆಲಸ ಮಾಡಿದರೆ, ಶೇ.30 ನಮ್ಮ ಶ್ರಮ ಕೆಲಸ ಮಾಡುತ್ತದೆ. ಹಾಗಂತ ಮಾಡುವ ಕೆಲಸವನ್ನು ಯಾವಾಗಲೂ ನಿಲ್ಲಿಸಬಾರದು’ ಎಂದು ಅವರು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ದುಬಾರಿ ನಟ ಎಂಬ ಪಟ್ಟ ಪಡೆದುಕೊಂಡಿದ್ದಾರೆ. ಅವರು ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುತ್ತಾರೆ. ಇದರಿಂದಲೇ ಅವರ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ ಎಂಬ ಥಿಯರಿ ಕೂಡ ಇದೆ. ಆದರೆ, ಇದನ್ನು ಒಪ್ಪಲು ಅವರು ರೆಡಿ ಇಲ್ಲ. ಏನೇ ಮಾಡದಿರೂ ಮನಸ್ಸಿನಿಂದ ಮಾಡಬೇಕು ಎಂಬುದು ಅವರ ಥಿಯರಿ.
ಇದನ್ನೂ ಓದಿ: ‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರು ಇತ್ತೀಚಿನ ಸಿನಿಮಾಗಳಿಗೆ ಸಂಭಾವನೆ ಪಡೆದುಕೊಳ್ಳೋದನ್ನು ಕೂಡ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಅವರ ಸಿನಿಮಾಗಳು ಸೋಲುತ್ತಿರುವುದರಿಂದ ನಿರ್ಮಾಪಕರಿಗೆ ನಷ್ಟ ಉಂಟಾಗುತ್ತಿದೆ. ಆ ನಷ್ಟವನ್ನು ಅವರ ಮೇಲೆ ಮಾತ್ರ ಹಾಕೋದು ಬೇಡ ಎನ್ನುವ ಕಾರಣಕ್ಕೆ ಅಕ್ಷಯ್ ಕುಮಾರ್ ಅವರು ಸಂಭಾವನೆಯನ್ನು ಪಡೆದುಕೊಳ್ಳುತ್ತಿಲ್ಲ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







