AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಸಿನಿಮಾ ಹಿಂದಿಕ್ಕಿ ನಂಬರ್ 1 ಆದ ‘ಧುರಂಧರ್ 2’

Dhurandhar 2 Movie: ‘ಧುರಂಧರ್ 2’ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ‘ಧುರಂಧರ್ 2’ ಸಿನಿಮಾ ಶಾರುಖ್ ಖಾನ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪಠಾಣ್’ವನ್ನು ಹಿಂದಿಕ್ಕಿ ನಂಬರ್ ಎನಿಸಿಕೊಂಡಿದೆ. ಅಸಲಿಗೆ ಭಾರತದಲ್ಲಿ ಕೆಲ ವಾರದ ಹಿಂದೆಯೇ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಹಿಂದಿಕ್ಕಿದೆ ಆದರೆ ಈ ಬಾರಿ ಯುನೈಟೆಡ್ ಕಿಂಗ್​​ಡಮ್​​ನಲ್ಲೂ ಸಹ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಸಿನಿಮಾ ಸೋಲಿಸಿದೆ.

ಶಾರುಖ್ ಖಾನ್ ಸಿನಿಮಾ ಹಿಂದಿಕ್ಕಿ ನಂಬರ್ 1 ಆದ ‘ಧುರಂಧರ್ 2’
Srk Ranveer
ಮಂಜುನಾಥ ಸಿ.
|

Updated on: Apr 22, 2026 | 3:32 PM

Share

ರಣವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ಹಲವು ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅದು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ‘ಧುರಂಧರ್ 2’ ಸಿನಿಮಾ ಶಾರುಖ್ ಖಾನ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪಠಾಣ್’ವನ್ನು ಹಿಂದಿಕ್ಕಿ ನಂಬರ್ ಎನಿಸಿಕೊಂಡಿದೆ. ಅಸಲಿಗೆ ಭಾರತದಲ್ಲಿ ಕೆಲ ವಾರದ ಹಿಂದೆಯೇ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಹಿಂದಿಕ್ಕಿದೆ ಆದರೆ ಈ ಬಾರಿ ಯುನೈಟೆಡ್ ಕಿಂಗ್​​ಡಮ್​​ನಲ್ಲೂ ಸಹ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಸಿನಿಮಾ ಸೋಲಿಸಿದೆ.

‘ಧುರಂಧರ್ 2’ ಸಿನಿಮಾ ಯುಕೆಯಲ್ಲಿ ಬಿಡುಗಡೆಯಾಗಿ 33 ದಿನಗಳಲ್ಲಿ ಸುಮಾರು 55.63 ಕೋಟಿ ರೂ ಗಳಿಕೆ ಮಾಡಿದೆ. 2023 ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ಅವರ ‘ಪಠಾಣ್’ ಯುಕೆಯಲ್ಲಿ 55 ಕೋಟಿ ರೂಪಾಯಿ ಗಳಿಕೆ ಮಾಡಿ, ಯುಕೆ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಆ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿದು ಹಾಕಿದೆ.

ಇದನ್ನೂ ಓದಿ:ಆಮಿರ್ ಮಾತಿಗೆ ಮಣಿದ ರಣವೀರ್ ಸಿಂಗ್; 10 ಕೋಟಿ ಮರಳಿಸಿದ ‘ಧುರಂಧರ್’ ನಟ

ಈ ಚಿತ್ರವು ಕೇವಲ ಯುಕೆಯಲ್ಲಿ ಮಾತ್ರವಲ್ಲದೆ, ಇನ್ನೂ ಕೆಲವು ದೇಶಗಳಲ್ಲಿ ಸಹ ದಾಖಲೆ ಮೊತ್ತದ ಗಳಿಕೆ ಮಾಡಿದೆ. ಉತ್ತರ ಅಮೇರಿಕಾದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಉತ್ತರ ಅಮೆರಿಕನಲ್ಲಿ ಮುರಿದಿದೆ ‘ಧುರಂಧರ್ 2’. ಮತ್ತು ಜರ್ಮನಿಯಲ್ಲೂ ಸಹ ಗಳಿಕೆಯಲ್ಲಿ ದಾಖಲೆಯನ್ನು ಈ ಸಿನಿಮಾ ಬರೆದಿದೆ.

ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶ್ವದಾದ್ಯಂತ ಈ ಚಿತ್ರವು ಈಗಾಗಲೇ ಸುಮಾರು 1,787 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದ್ದು, ಶೀಘ್ರದಲ್ಲೇ ‘ಬಾಹುಬಲಿ 2’ ಚಿತ್ರದ ಒಟ್ಟು ಗಳಿಕೆಯನ್ನು ಮೀರಿಸುವತ್ತ ಮುನ್ನುಗ್ಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us