AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾವೀರ್ ನರಸಿಂಹ’ ಫೈಟ್ ಸೀನ್​​ ಕಾಪಿಯಾ ಅಥವಾ ಸ್ಪೂರ್ತಿಯಾ?

Mahavatar Narsimha: ‘ಮಹಾವತಾರ್ ನರಸಿಂಹ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಈ ಸಿನಿಮಾವನ್ನು ಕ್ಲೀಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿತ್ತು. ಕಿರಿಯರು, ಹಿರಿಯರು ಮುಗಿಬಿದ್ದು ಈ ಸಿನಿಮಾ ನೋಡಿದ್ದರು. ಆದರೆ ಇದೀಗ ಈ ಸಿನಿಮಾ ಮೇಲೆ ಕೆಲವರು ನಕಲು ಮಾಡಿರುವ ಆರೋಪ ಮಾಡಿದ್ದಾರೆ.

‘ಮಹಾವೀರ್ ನರಸಿಂಹ’ ಫೈಟ್ ಸೀನ್​​ ಕಾಪಿಯಾ ಅಥವಾ ಸ್ಪೂರ್ತಿಯಾ?
Mahavatar Narasimha
ಮಂಜುನಾಥ ಸಿ.
|

Updated on:Jan 27, 2026 | 6:48 PM

Share

ಕಳೆದ ವರ್ಷ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ (Box Office) ಭಾರಿ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಅನಿಮೇಷನ್ ಸಿನಿಮಾ ‘ಮಹಾತಾರ್ ನರಸಿಂಹ’ ಸಹ ಒಂದು. ಮಾತ್ರವಲ್ಲದೆ ಭಾರತ ಬಾಕ್ಸ್ ಆಫೀಸ್​​ನಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಮೊದಲ ಅನಿಮೇಷನ್ ಸಿನಿಮಾ ಸಹ ‘ಮಹಾವತಾರ್ ನರಸಿಂಹ’. ಕ್ಲೀಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ವಿತರಣೆ ಮಾಡಿತ್ತು. ಕಿರಿಯರು, ಹಿರಿಯರು ಮುಗಿಬಿದ್ದು ಈ ಸಿನಿಮಾ ನೋಡಿದ್ದರು. ಆದರೆ ಇದೀಗ ಈ ಸಿನಿಮಾ ಮೇಲೆ ಕೆಲವರು ನಕಲು ಮಾಡಿರುವ ಆರೋಪ ಮಾಡಿದ್ದಾರೆ.

‘ಮಹಾವೀರ್ ನರಸಿಂಹ’ ಸಿನಿಮಾದ ಕೆಲವು ದೃಶ್ಯಗಳು, ಆಕ್ಷನ್ ಪೀಸ್​​ಗಳನ್ನು ಹಾಲಿವುಡ್ ಸಿನಿಮಾ ಮತ್ತು ಗೇಮುಗಳಿಂದ ನಕಲು ಮಾಡಲಾಗಿದೆ ಎನ್ನಲಾಗುತ್ತಿದೆ. ‘ಮಹಾವತಾರ್ ನರಸಿಂಹ’ ಸಿನಿಮಾದ ಒಂದು ಫೈಟ್ ಸೀನ್​​ ಅನ್ನು ‘ಗಾಡ್ ಆಫ್ ವಾರ್’ ನೋಡಿ ನಕಲು ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ‘ಮಹಾವತಾರ್ ನರಸಿಂಹ’ ಮತ್ತು ‘ಗಾಡ್ ಆಫ್ ವಾರ್’ನ ಫೈಟ್ ದೃಶ್ಯಗಳನ್ನು ಕಂಪೇರ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಡಿಯೋ ಗಮನಿಸಿದಲ್ಲಿ ‘ಮಹಾವತಾರ್ ನರಸಿಂಹ’ ಮತ್ತು ‘ಗಾಡ್ ಆಫ್ ವಾರ್’ ಫೈಟ್ ದೃಶ್ಯ ಯಥಾವತ್ತು ಒಂದೇ ರೀತಿ ಇದೆ. ಆದರೆ ಹಿನ್ನೆಲೆ ಮತ್ತು ಫೈಟ್ ಮಾಡುತ್ತಿರುವ ಪಾತ್ರಗಳಷ್ಟೆ ಬದಲಾಗಿವೆ. ‘ಮಹಾವತಾರ್ ನರಸಿಂಹ’ ಸಿನಿಮಾದ ಮತ್ತೊಂದು ದೃಶ್ಯ, ಮಾರ್ವೆಲ್​​ನ ‘ಇಂಕ್ರೆಡಿಬಲ್ ಹಲ್ಕ್’ನ ದೃಶ್ಯದಿಂದ ಸ್ಪೂರ್ತಿ ಪಡೆದು ಮಾಡಲಾಗಿದೆ ಎಂಬ ಆರೋಪವೂ ಇದ್ದು, ಅದಕ್ಕೆ ಸಂಬಂಧಿಸಿದ ಕೆಲ ವಿಡಿಯೋಗಳು ಸಹ ಹರಿದಾಡುತ್ತಿವೆ.

‘ಮಹಾವತಾರ್ ನರಸಿಂಹ’ ಸಿನಿಮಾವನ್ನು ಬಹಳ ಕಡಿಮೆ ಬಜೆಟ್​​ನಲ್ಲಿ ನಿರ್ಮಿಸಲಾಗಿದೆ. ಕೇವಲ 15 ಕೋಟಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಹೊಂಬಾಳೆ ಫಿಲಮ್ಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದು, ಸಿನಿಮಾದ ಅಭೂತಪೂರ್ವ ಗೆಲುವಿನ ಹಿಂದೆ ಹೊಂಬಾಳೆಯ ಶ್ರಮ ಸಾಕಷ್ಟಿದೆ.

‘ಮಹಾವತಾರ್ ನರಸಿಂಹ’ ಸಿನಿಮಾದ ನಿರ್ಮಾಪಕರು ಮತ್ತು ನಿರ್ದೇಶಕ ಈಗಾಗಲೇ ಸಿನಿಮಾದ ಸೀಕ್ವೆಲ್​​ಗಳನ್ನು ಘೋಷಿಸಿದ್ದಾರೆ. ವಿಷ್ಣುವಿನ ಹಲವು ಅವತಾರಗಳ ಬಗೆಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ದು, ‘ಮಹಾವತಾರ್ ಪರಶುರಾಮ್’, ‘ಮಹಾವತಾರ್ ರಘುನಂದನ’, ‘ಮಹಾವತಾರ್ ದ್ವಾರಕಾದೀಶ’, ‘ಮಹಾವತಾರ್ ಗೋಕುಲನಂದ’, ‘ಮಹಾವತಾರ್ ಕಲ್ಕಿ 1’, ‘ಮಹಾವತಾರ್ ಕಲ್ಕಿ 2’ ಸಿನಿಮಾಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Tue, 27 January 26