‘ಐ ಲವ್ ರಶ್ಮಿಕಾ’ ಎಂದರಾ ವಿಜಯ್ ದೇವರಕೊಂಡ, ಬಾಲಕೃಷ್ಣ ಎದುರು ನಾಚಿದ ನಟಿ

Rashmika-Vijay Deverakonda: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆತ್ಮೀಯ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆ ಶೋ ಒಂದರಲ್ಲಿ ರಶ್ಮಿಕಾಗೆ ಕರೆ ಮಾಡಿದ ವಿಜಯ್, ‘ಐ ಲವ್ ಯು ರಶ್ಮಿಕಾ’ ಎಂದಿದ್ದಾರಾ?

‘ಐ ಲವ್ ರಶ್ಮಿಕಾ’ ಎಂದರಾ ವಿಜಯ್ ದೇವರಕೊಂಡ, ಬಾಲಕೃಷ್ಣ ಎದುರು ನಾಚಿದ ನಟಿ
ವಿಜಯ್-ರಶ್ಮಿಕಾ
Follow us
ಮಂಜುನಾಥ ಸಿ.
|

Updated on: Nov 20, 2023 | 6:54 PM

ಆಹಾ ತೆಲುಗು ಒಟಿಟಿಯಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಹೆಸರಿನ ಟಾಕ್ ಶೋ ನಡೆಸುತ್ತಿದ್ದಾರೆ. ನಿಜ ಜೀವನದಲ್ಲಿದ್ದಂತೆ ಯಾವುದೇ ಫಿಲ್ಟರ್ ಇಲ್ಲದೆ ಮಾತನಾಡುವುದು ಬಾಲಕೃಷ್ಣ ಅವರ ಸ್ಟೈಲ್, ಶೋನಲ್ಲಿಯೂ ಅದನ್ನೇ ಮುಂದುವರೆಸುತ್ತಿದ್ದಾರೆ. ಶೋಗೆ ಕರೆಯುವ ಅತಿಥಿಗಳ ಬಳಿ ಖಾಸಗಿಯಾದ ಪ್ರಶ್ನೆಗಳನ್ನು, ವಿವಾದಾತ್ಮಕ ಎನ್ನಿಸುವ ಪ್ರಶ್ನೆಗಳನ್ನು ಸಹ ಯಾವುದೇ ಹಿಂಜರಿಕೆ ಇಲ್ಲದೆ ತಮಾಷೆ ಮಾಡುತ್ತಲೇ ಕೇಳಿ, ಉತ್ತರ ಪಡೆಯುತ್ತಾರೆ ಬಾಲಕೃಷ್ಣ.

ಬಾಲಕೃಷ್ಣರ ‘ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ’ ಇದೀಗ ಆರಂಭಗೊಳ್ಳುತ್ತಿದ್ದು ಹೊಸ ಸೀಸನ್​ನ ಮೊದಲ ಅತಿಥಿಗಳಾಗಿ ಬಾಲಿವುಡ್​ನ ‘ಅನಿಮಲ್’ ಸಿನಿಮಾ ತಂಡ ಬಂದಿದೆ. ರಣ್​ಬೀರ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಶೋಗೆ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ರಶ್ಮಿಕಾರನ್ನು ಚೆನ್ನಾಗಿ ಕಾಲೆಳೆದಿದ್ದಾರೆ ನಂದಮೂರಿ ಬಾಲಕೃಷ್ಣ.

ಇದನ್ನೂ ಓದಿ:Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರಕ್ಕೆ ‘ಭಗವಂತ ಕೇಸರಿ’ ಶೀರ್ಷಿಕೆ; ಟೀಸರ್​ ಬಿಡುಗಡೆಗೆ ಟೈಮ್​ ಫಿಕ್ಸ್​

ರಶ್ಮಿಕಾರ ಅಂದ ಹೊಗಳುತ್ತಾ ಶೋಗೆ ಆಹ್ವಾನ ನೀಡಿದ ಬಾಲಕೃಷ್ಣ, ರಶ್ಮಿಕಾರೊಟ್ಟಿಗೆ ಚಿಕ್ಕದಾಗಿ ಡ್ಯಾನ್ಸ್ ಸಹ ಮಾಡಿದರು. ರಶ್ಮಿಕಾ ಇದೀಗ ನಟಿಸುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ಕೇಳಿ ಪಡೆದುಕೊಂಡರು. ವೇದಿಕೆ ಮೇಲೆ ರಶ್ಮಿಕಾರ ಹೊಸ ಸಿನಿಮಾ ‘ಪುಷ್ಪ 2’ ಕುರಿತಾಗಿಯೂ ತುಸು ಚರ್ಚೆ ನಡೆಯಿತು. ಅದರ ಬಳಿಕ ಬಾಲಕೃಷ್ಣ, ರಶ್ಮಿಕಾರ ‘ಬಾಯ್​ಫ್ರೆಂಡ್’ ವಿಜಯ್ ದೇವರಕೊಂಡಗೆ ಕರೆ ಮಾಡಿದರು.

ವಿಜಯ್​ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಕೈಯಿಂದಲೇ ಕರೆ ಮಾಡಿಸಿದರು ಬಾಲಕೃಷ್ಣ, ರಶ್ಮಿಕಾ ದನಿ ಕೇಳುತ್ತಿದ್ದಂತೆ, ‘ಹೇಳು ರೇ’ ಎಂದು ಪ್ರೀತಿಯಿಂದ ಮಾತನಾಡಿಸಿದರು ವಿಜಯ್. ಆ ಬಳಿಕ ವಿಜಯ್ ದೇವರಕೊಂಡ, ತಮ್ಮ ‘ಅರ್ಜುನ್ ರೆಡ್ಡಿ’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಳಿಯೂ ಮಾತನಾಡಿದರು. ನಂದಮೂರಿ ಬಾಲಕೃಷ್ಣ, ಕೆಲ ಕಾಲ ವಿಜಯ್ ದೇವರಕೊಂಡ ಅವರ ಕಾಲೆಳೆದರು. ಬಳಿಕ ರಶ್ಮಿಕಾ ಐ ಲವ್ ಯೂ ಎಂದು ಹೇಳು ಎಂದು ವಿಜಯ್​ಗೆ ಸವಾಲು ಹಾಕಿದರು. ಆದರೆ ವಿಜಯ್, ‘ಐ ಲವ್ ಯೂ ರಶ್ಮಿಕಾ’ ಎಂದು ಹೇಳಿದರೋ ಇಲ್ಲವೋ ಎಂಬುದು ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ತೋರಿಸಲಾಗಿಲ್ಲ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪ್ರೀತಿಯಲ್ಲಿದ್ದಾರೆ ಎಂದು ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಪ್ರತಿ ಹಬ್ಬವನ್ನು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಿವಾಸದಲ್ಲಿಯೇ ಆಚರಿಸುತ್ತಾರೆ ಎನ್ನಲಾಗುತ್ತದೆ. ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ವಿದೇಶ ಪ್ರವಾಸಕ್ಕೂ ಸಹ ಹೋಗುತ್ತಿರುತ್ತಾರೆ. ಇಬ್ಬರೂ ಪರಸ್ಪರ ಬಹಳ ಆತ್ಮೀಯವಾಗಿದ್ದರು ಸಹ ತಾವು ಬಾಯ್​ಫ್ರೆಂಡ್-ಗರ್ಲ್​ಫ್ರೆಂಡ್ ಎಂದು ಬಹಿರಂಗವಾಗಿ ಹೇಳಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ
ಯತ್ನಾಳ್ ಉಚ್ಚಾಟನೆಗೆ ಬಿಗಿಪಟ್ಟು: ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ
ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಚಂಡಮಾರುತ ಎಫೆಕ್ಟ್: ಫ್ಲೈಓವರ್​ ಮೇಲೆ ಕಾರುಗಳ ಪಾರ್ಕಿಂಗ್
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಫೆಂಗಲ್ ಚಂಡಮಾರುತ ಎಫೆಕ್ಟ್​​: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ಎರಡು ಫ್ಲೋರ್​ಗಳ ನಡುವೆ ನಿಂತ ಲಿಫ್ಟ್​, ಜನರ ಪರದಾಟ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್