AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣ ವೃತ್ತಿ ಏಳಿಗೆಗೆ ಕಾರಣವಾಗಿದ್ದ ಸ್ವಾಮೀಜಿಯಿಂದ ವಿಶೇಷ ಪೂಜೆ ಮಾಡಿಸಿದ ಮತ್ತೊಬ್ಬ ನಟಿ

Venu Swamy: ನಟಿ ರಶ್ಮಿಕಾ ಮಂದಣ್ಣರಿಂದ ವಿಶೇಷ ಪೂಜೆ ಮಾಡಿಸಿ ವೃತ್ತಿ ಬದುಕಿನ ಏಳಿಗೆಗೆ ಕಾರಣರಾದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಇಂದ ಮತ್ತೊಬ್ಬ ನಟಿ ಪೂಜೆ ಮಾಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ವೃತ್ತಿ ಏಳಿಗೆಗೆ ಕಾರಣವಾಗಿದ್ದ ಸ್ವಾಮೀಜಿಯಿಂದ ವಿಶೇಷ ಪೂಜೆ ಮಾಡಿಸಿದ ಮತ್ತೊಬ್ಬ ನಟಿ
ಡಿಂಪಲ್ ಹಯಾತಿ
ಮಂಜುನಾಥ ಸಿ.
|

Updated on:Jul 02, 2023 | 8:59 PM

Share

ಕಿರಿಕ್ ಪಾರ್ಟಿ (Kirik Party) ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಏಕಾ-ಏಕಿ ವೃತ್ತಿಯಲ್ಲಿ ಭಾರಿ ಏರುಗತಿ ಕಂಡರು. ಕಿರಿಕ್ ಪಾರ್ಟಿ ಬಳಿಕ ಕನ್ನಡದಲ್ಲೇ ಎರಡು-ಮೂರು ಸಿನಿಮಾ ಮಾಡಿ ರಕ್ಷಿತ್ ಶೆಟ್ಟಿಯನ್ನು ಮದುವೆಯಾಗಿ ಸೆಟಲ್ ಆಗುವ ಯೋಚನೆಯಲ್ಲಿದ್ದ ರಶ್ಮಿಕಾ ಮಂದಣ್ಣ ಹಠಾತ್ತನೇ ನಿಶ್ಚಿತಾರ್ಥ ಮುರಿದುಕೊಂಡರು, ನಟನೆಯನ್ನು ವೃತ್ತಿಯನ್ನಾಗಿಸಿಕೊಂಡರು, ತೆಲುಗು ಚಿತ್ರರಂಗದಲ್ಲಿ (Tollywood) ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡಿಬಿಟ್ಟರು. ಇದಕ್ಕೆಲ್ಲ ಜ್ಯೋತಿಷಿ ವೇಣು ಸ್ವಾಮಿ ಕಾರಣ ಎನ್ನಲಾಗುತ್ತದೆ. ವೃತ್ತಿ ಜೀವನದ ಆರಂಭದಲ್ಲಿ ವೇಣು ಸ್ವಾಮಿ ನಿರ್ದೇಶನದಂತೆ ವಿಶೇಷ ಪೂಜೆಯನ್ನು ರಶ್ಮಿಕಾ ಮಾಡಿದ್ದರು. ಅದರ ಚಿತ್ರಗಳು ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಇದೀಗ ಮತ್ತೊಬ್ಬ ತೆಲುಗು ನಟಿ ವೇಣು ಸ್ವಾಮಿ ಅವರ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ.

ತೆಲುಗು ಸಿನಿಮಾದಿಂದ ನಟನೆಗೆ ಕಾಲಿಟ್ಟ ಈ ಹೈದರಾಬಾದಿ ಹುಡುಗಿ ಡಿಂಪಲ್ ಹಯಾತಿ ಇದೀಗ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವಿಶೇಷ ಪೂಜೆಯನ್ನು ಕೆಲವು ದಿನಗಳ ಹಿಂದೆಯೇ ಡಿಂಪಲ್ ಹಯಾತಿ ಮಾಡಿದ್ದಾರೆ ಆದರೆ ಅದರ ಚಿತ್ರಗಳು ಈಗ ಬಹಿರಂಗವಾಗಿದೆ. ಈ ವಿಶೇಷ ಪೂಜೆಯನ್ನು ವೃತ್ತಿಯಲ್ಲಿನ ಏಳಿಗೆ ಹಾಗೂ ಖಾಸಗಿ ಬದುಕಿನಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ನಟಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

2017ರಲ್ಲಿ ಡಿಂಪಲ್ ಹಯಾತಿ ತೆಲುಗಿನ ಗಲ್ಫ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರು. ಆ ಬಳಿಕ ವರ್ಷಕ್ಕೆ ಒಂದು ಎರಡರಂತೆ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಈ ವರೆಗೆ ದೊಡ್ಡ ಬ್ಯಾನರ್​ನ ಸಿನಿಮಾಗಳು ಡಿಂಪಲ್​ಗೆ ದೊರಕಿಲ್ಲ. ಹಾಗಾಗಿ ಆರಕ್ಕೇರದ ಮೂರಕ್ಕಿಳಿಯದ ನಾಯಕಿಯಾಗಿ ಡಿಂಪಲ್ ಹಯಾತಿ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಸರುಗಳಿಸಿದ್ದಾರೆ.

ಇದನ್ನೂ ಓದಿ: ಏನೋ ಮಾಡಲು ಹೋಗಿ ಇನ್ನೇನೋ ಆಯ್ತು; ಯುವ ನಟಿಯ ಮುಚ್ಚಿಟ್ಟ ಸಂಬಂಧ ಬಯಲು

ಕೆಲವು ದಿನಗಳ ಹಿಂದಷ್ಟೆ ವಿವಾದವೊಂದರಲ್ಲಿ ನಟಿ ಡಿಂಪಲ್ ಹಯಾತಿ ಹೆಸರು ಕೇಳಿ ಬಂದಿತ್ತು. ಅದೂ ಕ್ಷುಲ್ಲಕ ಕಾರಣಕ್ಕೆ. ಡಿಂಪಲ್ ಹಯಾತಿ ವಾಸವಿದ್ದ ಅಪಾರ್ಟ್​ಮೆಂಟ್​ನಲ್ಲಿಯೇ ವಾಸವಿದ್ದ ಐಪಿಎಸ್ ಅಧಿಕಾರಿಯೊಬ್ಬ ತನ್ನ ಕಾರನ್ನು ಪ್ರತಿಬಾರಿ ಅಡ್ಡಲಾಗಿ ನಿಲ್ಲಿಸುತ್ತಿದ್ದ ಎಂಬ ಕಾರಣಕ್ಕೆ ಡಿಂಪಲ್ ಹಯಾತಿ ಹಾಗೂ ಅವರ ಗೆಳೆಯ ಐಪಿಎಸ್ ಅಧಿಕಾರಿಯ ಸರ್ಕಾರಿ ಕಾರು ಚಾಲಕನ ಮೇಲೆ ಜಗಳ ಮಾಡಿದ್ದರು. ಕೊನೆಗೆ ಕಾರು ಚಾಲಕ ಡಿಂಪಲ್ ಹಯಾತಿ ವಿರುದ್ಧ ದೂರು ನೀಡಿದ್ದ. ಡಿಂಪಲ್ ಹಯಾತಿ ಹಾಗೂ ಅವರ ಗೆಳೆಯನನ್ನು ಪೊಲೀಸರು ವಿಚಾರಣೆ ಮಾಡಿದ್ದರು.

ಬಳಿಕ ಹೊರಬಂದ ವಿಷಯವೆಂದರೆ ಐಪಿಎಸ್ ಅಧಿಕಾರಿ ತನ್ನ ಮೂರು ಕಾರುಗಳನ್ನು ಅಪಾರ್ಟ್​ಮೆಂಟ್​ನ ಪಾರ್ಕಿಂಗ್​ನಲ್ಲಿ ನಿಲ್ಲಿಸುತ್ತಿದ್ದರು. ಅಲ್ಲದೆ ಸಂಚಾರಿ ಇಲಾಖೆ ಬಳಸುತ್ತಿದ್ದ ಸ್ಲಾಬ್​ಗಳನ್ನು ಸಹ ಅಪಾರ್ಟ್​ಮೆಂಟ್​ಗೆ ತಂದು ಇರಿಸಿಕೊಂಡಿದ್ದ. ಒಟ್ಟಾರೆ ಖಾಸಗಿ ಜೀವನ ಹಾಗೂ ವೃತ್ತಿ ಬದುಕಿನಲ್ಲಿ ಡಿಂಪಲ್ ಹಯಾತ್ ಪರಿಸ್ಥಿತಿ ಉತ್ತಮವಾಗಿಲ್ಲ. ಡಿಂಪಲ್ ಕೈಯಲ್ಲಿ ಪ್ರಸ್ತುತ ಈಗ ಯಾವುದೇ ಸಿನಿಮಾ ಎನ್ನಲಾಗುತ್ತಿದೆ. ವೇಣು ಸ್ವಾಮಿ ಅವರ ವಿಶೇಷ ಪೂಜೆ ಬಳಿಕ ರಶ್ಮಿಕಾ ಮಂದಣ್ಣ ರೀತಿ ಡಿಂಪಲ್ ಹಯಾತಿಯ ಬದುಕು ಬದಲಾಗುತ್ತದೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Sun, 2 July 23