AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟಿಗನ ಜತೆ ಹಸೆಮಣೆ ಏರುತ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕನ ಮಗಳು

ರಜನಿಕಾಂತ್ ನಟನೆಯ ‘ಇಂದಿರನ್’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್’ ನಂಥ ಹಿಟ್ ಚಿತ್ರಗಳನ್ನು ನೀಡಿದ ಎಸ್.ಶಂಕರ್ ಮಗಳು ಐಶ್ವರ್ಯಾ ಹಸೆಮಣೆ ಎರುತ್ತಿದ್ದಾರೆ.

ಕ್ರಿಕೆಟಿಗನ ಜತೆ ಹಸೆಮಣೆ ಏರುತ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕನ ಮಗಳು
ಐಶ್ವರ್ಯಾ-ರೋಹಿತ್​-ಶಂಕರ್
TV9 Web
| Edited By: |

Updated on:Jun 26, 2021 | 7:13 PM

Share

ಕ್ರಿಕೆಟ್ ಜಗತ್ತಿಗೂ ಹಾಗೂ ಚಿತ್ರರಂಗಕ್ಕೆ ಎಲ್ಲಿಲ್ಲದ ನಂಟು. ಈ ಮೊದಲು ಕ್ರಿಕೆಟ್ ಆಟಗಾರರು ಸಿನಿಮಾ ರಂಗದವರನ್ನು ವರಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಆಗಿದ್ದು ಇತ್ತೀಚಿನ ವರ್ಷಗಳ ಉದಾಹರಣೆ. ಈಗ ಖ್ಯಾತ ನಿರ್ದೇಶಕನ ಮಗಳು ಕ್ರಿಕೆಟಿಗನನ್ನು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ರಜನಿಕಾಂತ್ ನಟನೆಯ ‘ಎಂದಿರನ್’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್’ ನಂಥ ಹಿಟ್ ಚಿತ್ರಗಳನ್ನು ನೀಡಿದ ಎಸ್.ಶಂಕರ್ ಮಗಳು ಐಶ್ವರ್ಯಾ ಹಸೆಮಣೆ ಎರುತ್ತಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಆಟಗಾರ ರೋಹಿತ್ ದಾಮೋದರನ್ ಅವರನ್ನು ಜೂನ್ 27ರಂದು ಐಶ್ವರ್ಯಾ ಮಹಾಬಲಿಪುರಂನಲ್ಲಿ ವರಿಸುತ್ತಿದ್ದಾರೆ ಎನ್ನಲಾಗಿದೆ. ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್ಪಿಎಲ್ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ.

ಕೊವಿಡ್ ಎರಡನೇ ಅಲೆ ಜೋರಾಗಿದೆ. ಈ ಕಾರಣಕ್ಕೆ ತಮಿಳುನಾಡಿನಲ್ಲಿ ಮದುವೆಯನ್ನು ಅದ್ದೂರಿಯಾಗಿ ನಡೆಸುವಂತಿಲ್ಲ. ಹೀಗಾಗಿ, ಆಪ್ತರ ಸಮ್ಮುಖದಲ್ಲಿ ರೋಹಿತ್-ಐಶ್ವರ್ಯಾ ಮದುವೆ ನಡೆಯಲಿದೆ. ಶಂಕರ್ ನಿರ್ದೇಶನದ ಸಿನಿಮಾಗಳು ಅದ್ದೂರಿಯಾಗಿ ಸಿದ್ಧಗೊಳ್ಳುತ್ತವೆ. ಇನ್ನು, ಚಿತ್ರದ ಸೆಟ್​ಗಳು ಕೂಡ ದೊಡ್ಡ ಮಟ್ಟದಲ್ಲಿ ಹಾಕಲಾಗುತ್ತದೆ. ಆದರೆ, ಮಗಳ ಮದುವೆಯನ್ನು ಯಾವುದೇ ಆಡಂಬರವಿಲ್ಲದೆ ಶಂಕರ್ ನೆರವೇರಿಸುತ್ತಿದ್ದಾರೆ.

1993ರಲ್ಲಿ ತೆರೆಗೆ ಬಂದ ‘ಜಂಟಲ್ಮ್ಯಾನ್’ ಸಿನಿಮಾ ಮೂಲಕ ಶಂಕರ್ ನಿರ್ದೇಶನಕ್ಕೆ ಕಾಲಿಟ್ಟರು. ವೃತ್ತಿಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗಿದೆ. 2010ರಲ್ಲಿ ತೆರೆಗೆ ಬಂದ ‘ಎಂದಿರನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸದ್ಯ, ಅವರು ‘ಇಂಡಿಯನ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಕಮಲ್ ಹಾಸನ್ ಈ ಚಿತ್ರದ ನಾಯಕ. ‘ಇಂಡಿಯನ್’ ಚಿತ್ರದ ಮುಂದಿನ ಭಾಗ ಇದಾಗಿದೆ.

ಇದನ್ನೂ ಓದಿ: Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್​; ಅವರ ಕೊನೆಯ ಚಿತ್ರ ಯಾವುದು?

ಕೊವಿಡ್​ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್​; ಕಾರಣ ಏನು?

Published On - 5:54 pm, Sat, 26 June 21

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?