Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು ಧರಿಸಿರುವ ಟಿ-ಶರ್ಟ್ ಬೆಲೆ ಎಷ್ಟು ಗೊತ್ತೆ?

Mahesh Babu: ಮಹೇಶ್ ಬಾಬು ಅವರ ಇತ್ತೀಚೆಗಿನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚಿತ್ರದಲ್ಲಿ ಮಹೇಶ್ ಬಾಬು ಧರಿಸಿರುವ ಟಿ-ಶರ್ಟ್ ಸಹ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಆ ಟಿ-ಶರ್ಟ್ ಬೆಲೆ ಎಷ್ಟು ಗೊತ್ತೆ?

ಮಹೇಶ್ ಬಾಬು ಧರಿಸಿರುವ ಟಿ-ಶರ್ಟ್ ಬೆಲೆ ಎಷ್ಟು ಗೊತ್ತೆ?
ಮಹೇಶ್ ಬಾಬು
Follow us
ಮಂಜುನಾಥ ಸಿ.
|

Updated on: Nov 07, 2023 | 5:56 PM

ನಟ ಮಹೇಶ್ ಬಾಬು (Mahesh Babu), ತೆಲುಗಿನ ಅತ್ಯಂತ ದುಬಾರಿ ನಟರಲ್ಲಿ ಒಬ್ಬರು. ಪ್ರತಿ ಸಿನಿಮಾಕ್ಕೆ ಸುಮಾರು 70 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಭಾರಿ ಸಂಭಾವನೆ ಪಡೆಯುವ ಮಹೇಶ್ ಬಾಬು ಜೀವನ ಶೈಲಿಯೂ ಐಶಾರಾಮಿಯಾಗಿದೆ. ಕುಟುಂಬದೊಡನೆ ವಿದೇಶ ಪ್ರವಾಸ, ಐಶಾರಾಮಿ ಕಾರು ಕಲೆಕ್ಷನ್ ಹೊಂದಿದ್ದಾರೆ. ಹಲವು ಉದ್ಯಮಗಳ ಮೇಲೆ ಬಂಡವಾಳವನ್ನೂ ಹೂಡಿದ್ದಾರೆ. ಭಾರತದ ಅತ್ಯಂತ ಸ್ಪುರದ್ರೂಪಿ ನಟರಾಗಿರುವ ಮಹೇಶ್ ಬಾಬು ತಮ್ಮ ಫಿಟ್​ನೆಸ್, ಅಂದ, ಫ್ಯಾಷನ್​ಗೂ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡುತ್ತಾರೆ. ಇತ್ತೀಚೆಗೆ ಮಹೇಶ್ ಬಾಬು ಕಾರ್ಯಕ್ರಮವೊಂದರಲ್ಲಿ ನಟ ವೆಂಕಟೇಶ್​ ಜೊತೆ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಧರಿಸಿದ್ದ ಟಿ-ಶರ್ಟ್ ನೆಟ್ಟಿಗರ ಗಮನ ಸೆಳೆದಿತ್ತು. ಆ ಟಿ-ಶರ್ಟ್​ನ ಬೆಲೆ ಎಷ್ಟೆಂಬುದು ಈಗ ಬಹಿರಂಗಗೊಂಡಿದೆ.

ನಟ ಮಹೇಶ್ ಬಾಬು ಕ್ಲಬ್ ಒಂದರ ಉದ್ಘಾಟನೆಯಲ್ಲಿ ನಟ ವೆಂಕಟೇಶ್ ಜೊತೆಗೆ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಟಿ-ಶರ್ಟ್ ಅಥವಾ ಸ್ವೆಟ್ ಶರ್ಟ್ ಅನ್ನು ಧರಿಸಿದ್ದರು. ಆ ಶರ್ಟ್ ಮೇಲೆ ಒಂದು ಚಿತ್ರ ಸಹ ಇತ್ತು. ಆ ಶರ್ಟ್​ನ ಡಿಸೈನ್ ಅನ್ನು ಬಹಳಷ್ಟು ಮಂದಿ ಇಷ್ಟಪಟ್ಟಿದ್ದರು. ಅದು ಯಾವ ಬ್ರ್ಯಾಂಡ್​ನ ಶರ್ಟ್, ಅದರ ಬೆಲೆ ಎಷ್ಟಿರಬಹುದು ಎಂಬ ಚರ್ಚೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು.

ಇದನ್ನೂ ಓದಿ:ಮಹೇಶ್ ಬಾಬು ಪತ್ನಿ ನಟಿಸಿರುವ ಏಕೈಕ ಕನ್ನಡ ಸಿನಿಮಾ ಹೆಸರೇನು ಗೊತ್ತೆ?

ಅಂದಹಾಗೆ ಮಹೇಶ್ ಬಾಬು ಆಂದು ಧರಿಸಿದ್ದು ಹರ್ಮೀಸ್ ಬ್ರ್ಯಾಂಡ್​ನ ಸ್ವೆಟ್ ಶರ್ಟ್. ಆ ಅಂಗಿಯ ಬೆಲೆ ಬರೋಬ್ಬರಿ ಸರಿ ಸುಮಾರು 90 ಸಾವಿರ ರೂಪಾಯಿಗಳು. ಹರ್ಮೀಸ್​ನ ವೆಬ್ ಸೈಟ್​ನಲ್ಲಿ ಸಹ ಆ ಶರ್ಟ್​ನ ಜಾಹೀರಾತಿದೆ. ಅದರಲ್ಲಿ ಬೆಲೆಯನ್ನೂ ನಮೂದು ಮಾಡಲಾಗಿದೆ. ಮಹೇಶ್ ಬಾಬು ಕಾರ್ಯಕ್ರಮದಲ್ಲಿ ಧರಿಸಿದ ಶರ್ಟ್​ ಮೇಲಿನ ಡಿಸೈನ್ ಅನ್ನು ಹೊಂದಿರುವ ಇನ್ನೂ ಕೆಲವು ಬೇರೆ-ಬೇರೆ ಶರ್ಟ್​ಗಳನ್ನು ಸಹ ಹರ್ಮೀಸ್ ತನ್ನ ವೆಬ್​ಸೈಟ್​ನಲ್ಲಿ ಮಾರಾಟಕ್ಕಿದೆ. ಮಹೇಶ್ ಬಾಬುಗೆ ಖಾಸಗಿ ಫ್ಯಾಷನ್ ಡಿಸೈನರ್ ಅಥವಾ ಸ್ಟೈಲ್ ಮ್ಯಾನೇಜರ್ ಇದ್ದಾರೆ. ಮಹೇಶ್​ ಬಾಬು ಲುಕ್​ಗೆ ಒಪ್ಪುವ ಬಟ್ಟೆಗಳನ್ನು ಅವರೇ ಆರಿಸುತ್ತಾರೆ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಮಹೇಶ್ ಯಾವ ಬಟ್ಟೆಗಳನ್ನು ಧರಿಸಬೇಕು ಎಂದು ನಿರ್ಣಯಿಸುವುದು ಸಹ ಅವರೇ.

ಇನ್ನು ಮಹೇಶ್ ಬಾಬು ಧರಿಸಿರುವ ಟಿ-ಶರ್ಟ್​ನ ಚಿತ್ರವಷ್ಟೆ ವೈರಲ್ ಆಗಿಲ್ಲ. ಆ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಮಾಡಿದ ‘ಕು’ಕಾರ್ಯವೂ ಸುದ್ದಿಯಾಗಿದೆ. ಕ್ಲಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹೇಶ್ ಬಾಬು, ಆ ಕಾರ್ಯಕ್ರಮದಲ್ಲಿ ನಟ ವಿಕ್ಟರಿ ವೆಂಕಟೇಶ್ ಜೊತೆ ಸೇರಿಕೊಂಡು ಇಸ್ಪೀಟ್ ಆಟ ಆಡಿದ್ದಾರೆ. ಅದೂ ಹಣ ಬಾಜಿ ಕಟ್ಟಿ. ಮಹೇಶ್ ಬಾಬು ಹಾಗೂ ವೆಂಕಟೇಶ್ ಇಸ್ಪೀಟ್ ಆಟ ಆಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಣ ಕಟ್ಟಿ ಜೂಜು ಆಡಿದ ನಟರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆಗಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಮಹೇಶ್ ಬಾಬು ಪ್ರಸ್ತುತ ‘ಗುಂಟೂರು ಖಾರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ. ಈ ಸಿನಿಮಾದ ಬಳಿಕ ರಾಜಮೌಳಿ ಜೊತೆಗಿನ ಸಿನಿಮಾದ ಚಿತ್ರೀಕರಣವನ್ನು ಮಹೇಶ್ ಬಾಬು ಆರಂಭಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ