Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ಪ್ರಕರಣ: ತೆಲುಗು ನಾಯಕ ನಟನ ಪ್ರೇಯಸಿ ಬಂಧನ

Tollywood Drug case: ತೆಲುಗು ಚಿತ್ರರಂಗದಲ್ಲಿ ಮತ್ತೊಮ್ಮೆ ಡ್ರಗ್ಸ್ ಪ್ರಕರಣ ವರದಿಯಾಗಿದೆ. ತೆಲುಗು ಚಿತ್ರರಂಗದ ಜನಪ್ರಿಯ ಯುವನಟನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಪ್ರಕರಣ: ತೆಲುಗು ನಾಯಕ ನಟನ ಪ್ರೇಯಸಿ ಬಂಧನ
Follow us
ಮಂಜುನಾಥ ಸಿ.
|

Updated on: Jan 31, 2024 | 6:00 PM

ತೆಲುಗು ಚಿತ್ರರಂಗದಿಂದ (Tollywood) ಮತ್ತೊಮ್ಮೆ ಡ್ರಗ್ಸ್ ಸುದ್ದಿ ಹೊರಬಂದಿದೆ. ಈ ಹಿಂದೆ ಹಲವು ಬಾರಿ ತೆಲುಗು ಚಿತ್ರರಂಗವು ಡ್ರಗ್ಸ್ ಕಾರಣಕ್ಕೆ ಸುದ್ದಿಯಾಗಿತ್ತು. ಇದೀಗ ತೆಲುಗು ಚಿತ್ರರಂಗದ ಜನಪ್ರಿಯ ನಾಯಕ ನಟರೊಬ್ಬರ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದು, ಯುವತಿಯಿಂದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸೈದರಾಬಾದ್ ಪೊಲೀಸರು ನಾರಸಿಂಗಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಯುವತಿಯನ್ನು ಬಂಧಿಸಲಾಗಿದೆ. ಎಫ್​ಐಆರ್ ದಾಖಲಾಗಿದೆ.

ನಾರಸಿಂಗಿ ಪೊಲೀಸರು ನೀಡಿದ ಮಾಹಿತಿ ಆಧಾರದಲ್ಲಿ ಸೈದರಾಬಾದ್ ಪೊಲೀಸರ ಎಸ್​ಓಟಿ ವಿಭಾಗವು ಈ ದಾಳಿ ನಡೆಸಿತ್ತು. ಯುವತಿ ಬಳಿಯಿಂದ ನಾಲ್ಕು ಗ್ರಾಂ ಎಂಡಿಎಂಎ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುವನ್ನು ಯುವತಿಯು ಗೋವಾದಲ್ಲಿ ಖರೀದಿಸಿ ತಂದಿದ್ದರು ಎಂಬುದು ತಿಳಿದು ಬಂದಿದೆ. ತನಿಖೆ ವೇಳೆ ಬಂಧಿತ ಯುವತಿ ಟಾಲಿವುಡ್​ನ ಜನಪ್ರಿಯ ಯುವನಟ ರಾಜ್ ತರುಣ್ ಅವರ ಗರ್ಲ್​ಫ್ರೆಂಡ್ ಎಂಬ ಅಂಶ ಬೆಳಗಿದೆ ಬಂದಿದೆ. ಪ್ರಕರಣದೊಂದಿಗೆ ರಾಜ್ ತರುಣ್​ಗೆ ಸಹ ಸಂಬಂಧವಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಪೊಲೀಸರು ರಾಜ್ ತರುಣ್ ಅನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ನಟನ ಮನೆ ಮೇಲೆ ಅಧಿಕಾರಿಗಳ ದಾಳಿ

ರಾಜ್ ತರುಣ್, ಟಾಲಿವುಡ್​ನ ಜನಪ್ರಿಯ ಯುವನಟ. ಕಿರುಚಿತ್ರಗಳಿಂದ ನಟನೆ ಆರಂಭಿಸಿ, ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡ ರಾಜ್ ತರುಣ್, ಕೆಲವು ನೆನಪುಳಿವ ತೆಲುಗು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ಉಯ್ಯಾಲ-ಜಂಪಾಲ’, ‘ಕುಮಾರಿ 21ಎಫ್’, ‘ಸಿನಿಮಾ ಚೂಪಿಸ್ತ ಮಾವ’ ಇನ್ನೂ ಕೆಲವು ಉತ್ತಮ ಹಾಸ್ಯಮಯ ಲವ್ ಸ್ಟೋರಿಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ.

ರಾಜ್ ತರುಣ್, ಸಾಮಾನ್ಯವಾಗಿ ವಿವಾದಗಳಿಂದ ದೂರವೇ ಇರುತ್ತಾರೆ. ಕೋವಿಡ್ ಸಮಯದಲ್ಲಿ ಒಮ್ಮೆ ರಾಜ್ ತರುಣ್ ಹೆಸರು ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ಕಾರು ಅಪಘಾತ ಮಾಡಿ ಸ್ಥಳದಿಂದ ರಾಜ್ ತರುಣ್ ಓಡಿ ಹೋಗುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ಅಪಘಾತದಿಂದ ಜೀವ ಹಾನಿ ಆಗಿರಲಿಲ್ಲ. ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ರಾಜ್ ಹಾಗೆ ಓಡಿಹೋಗಿದ್ದಾರೆಂದು ಹೇಳಲಾಯ್ತು.

ಟಾಲಿವುಡ್​ನಲ್ಲಿ ಡ್ರಗ್ಸ್ ಪ್ರಕರಣ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ದೊಡ್ಡ-ದೊಡ್ಡವರ ಹೆಸರುಗಳು ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಕೇಳಿ ಬಂದಿವೆ. ರವಿತೇಜ ಸಹೋದರ, ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ, ಮುಮೈಥ್ ಖಾನ್ ಇನ್ನೂ ಹಲವರ ಹೆಸರುಗಳು ಪ್ರಕರಣದಲ್ಲಿ ಈ ಹಿಂದೆ ಕೇಳಿ ಬಂದಿತ್ತು. ಕೆಲವು ನಟ, ನಿರ್ಮಾಪಕರ ಬಂಧನವೂ ಸಹ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ