ಫಹಾದ್ ಫಾಸಿಲ್​ಗೆ ಏನಾಯ್ತು? ವರ್ಮಾ ಜೊತೆ ಕೈಜೋಡಿಸಿದ್ದೇಕೆ?

ಒಂದು ಕಾಲದಲ್ಲಿ ಗ್ರೇಟ್ ನಿರ್ದೇಶಕ ಎನಿಸಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ಈಗ ಕೇವಲ ಕಳಪೆ ಅಭಿರುಚಿಯ ಸಿನಿಮಾಗಳನ್ನು ಮಾತ್ರವೇ ನಿರ್ದೇಶಿಸುತ್ತಿದ್ದಾರೆ. ಆದರೆ ಈಗ ದೇಶದ ಟಾಪ್ ನಟ ಎನಿಸಿಕೊಂಡಿರುವ ಫಹಾದ್ ಫಾಸಿಲ್, ಕಳಪೆ ಅಭಿರುಚಿ ನಿರ್ದೇಶಕ ಎನಿಸಿಕೊಂಡಿರುವ ರಾಮ ಗೋಪಾಲ್ ವರ್ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಫಹಾದ್ ಫಾಸಿಲ್​ಗೆ ಏನಾಯ್ತು? ವರ್ಮಾ ಜೊತೆ ಕೈಜೋಡಿಸಿದ್ದೇಕೆ?
Follow us
|

Updated on: Oct 11, 2024 | 2:51 PM

ರಾಮ್ ಗೋಪಾಲ್ ವರ್ಮಾ, ಭಾರತೀಯ ಸಿನಿಮಾವನ್ನು ಬದಲಾಯಿಸಿದ ನಿರ್ದೇಶಕರಲ್ಲಿ ಒಬ್ಬರು. 90-2000 ದಶಕದಲ್ಲಿ ವರ್ಮಾ ನೀಡಿರುವ ಹಲವು ಸಿನಿಮಾಗಳು ಈಗ ಕಲ್ಟ್ ಸ್ಥಾನ ಪಡೆದುಕೊಂಡಿವೆ. ಅವರ ಸಿನಿಮಾಗಳನ್ನು ಸಿನಿಮಾ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಆದರೆ ಆಗಿನ ವರ್ಮಾ ಈಗಿಲ್ಲ. ಈಗ ಏನಿದ್ದರೂ A ರೇಟೆಡ್, ಕಳಪೆ ಅಭಿರುಚಿಯ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾ ಸಮಯ ದೂಡುತ್ತಿದ್ದಾರೆ. ಆದರೆ ಇಂಥಹಾ ಸಮಯದಲ್ಲಿ ಭಾರತದ ಟಾಪ್ ನಟ ಎಂದೇ ಕರೆಸಿಕೊಳ್ಳುತ್ತಿರುವ ಫಹಾದ್ ಫಾಸಿಲ್, ವರ್ಮಾ ಜೊತೆಗೆ ಕೈ ಜೋಡಿಸಿದ್ದಾರೆ! ಹೀಗೊಂದು ಸುದ್ದಿ ಹರಿದಾಡುತ್ತಿದೆ.

ರಾಮ್ ಗೋಪಾಲ್ ವರ್ಮಾ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಫಹಾದ್ ಫಾಸಿಲ್ ವಿಲನ್ ರೀತಿ ಲುಕ್ ಕೊಡುತ್ತಿರುವ ದೃಶ್ಯವಿದೆ. ಚಿತ್ರದಲ್ಲಿ ಯುವತಿಯೊಬ್ಬಾಕೆ ಕ್ಯಾಮೆರಾಕ್ಕೆ ಬೆನ್ನಮಾಡಿ ಕುಳಿತಿದ್ದಾಳೆ. ಫೋಟೊ ನೋಡಿದರೆ ಯಾವುದೋ ಸೀನ್​ನ ಚಿತ್ರೀಕರಣ ನಡೆಯುತ್ತಿರುವಂತೆ. ಚಿತ್ರ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಫಹಾದ್ ಫಾಸಿಲ್​ ಗಾಗಿ ನಾನು ತೆಗೆದ ಮೊದಲ ಶಾಟ್, ಆತನ ಮುಖದ ಮೇಲಿರುವ ಎಕ್ಸ್​ಪ್ರೆಶನ್ ಅನ್ನು ಆತನೇ ನಿರ್ದೇಶನ ಮಾಡಿಕೊಂಡಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಈ ಫೊಟೊಕ್ಕೆ ಕಮೆಂಟ್ ಮಾಡಿರುವ ಹಲವರು, ಹಳೆಯ ರಾಮ್ ಗೋಪಾಲ್ ವರ್ಮಾ ಮತ್ತು ಫಹಾದ್ ಫಾಸಿಲ್ ಜೋಡಿ ಮೋಡಿ ಮಾಡಲಿದೆ ಎಂದಿದ್ದಾರೆ. ಆದರೆ ಇನ್ನು ಕೆಲವರು ಫಹಾದ್​ಗೆ ಏನಾಗಿದೆ, ಹೋಗಿ-ಹೋಗಿ ರಾಮ್ ಗೋಪಾಲ್ ವರ್ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಆಡಿಕೊಂಡಿದ್ದಾರೆ. ಆದರೆ ಅಸಲಿಗೆ ಇದು ಸಿನಿಮಾ ಶೂಟಿಂಗ್ ಅಲ್ಲ. ಸ್ವತಃ ರಾಮ್ ಗೋಪಾಲ್ ವರ್ಮಾ ತಮ್ಮ ಇನ್ನೊಂದು ಪೋಸ್ಟ್​ನಲ್ಲಿ ಇದನ್ನು ಖಾತ್ರಿಪಡಿಸಿದ್ದು, ಫಹಾದ್ ಫಾಸಿಲ್​, ಹೈದರಾಬಾದ್​ನ ನನ್ನ ಕಚೇರಿಗೆ ಬಂದಿದ್ದರು. ಆ ವೇಳೆ ಸುಮ್ಮನೆ ತೆಗೆದ ಫೋಟೊ ಅದು ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾಗಾಗಿ ಹಲವು ಆಫರ್ ತಿರಸ್ಕರಿಸಿದ್ದ ಊರ್ಮಿಳಾ: ಪ್ರೇಮ ಪಯಣದ ಜರ್ನಿ ಗೊತ್ತಾ?

ಹೈದರಾಬಾದ್​ನಲ್ಲಿ ರಾಮ್ ಗೋಪಾಲ್ ವರ್ಮಾ ಅವರ ದೊಡ್ಡ ಕಚೇರಿ ಇದೆ. ಅದಕ್ಕೆ ಅವರು ಡೆನ್ ಎಂದು ಹೆಸರಿಟ್ಟಿದ್ದಾರೆ. ಚಿತ್ರ ವಿಚಿತ್ರ ವಿನ್ಯಾಸವನ್ನು ಆ ಕಚೇರಿ ಒಳಗೊಂಡಿದೆ. ಅಲ್ಲಿಗೆ ವರ್ಮಾ ಅವರನ್ನು ಭೇಟಿಯಾಗಲು ಹಲವು ಖ್ಯಾತ ನಾಮ ನಟರು ಬರುತ್ತಿರುತ್ತಾರೆ. ಕಳೆದ ತಿಂಗಳು ಬಾಲಿವುಡ್​ನ ಬಾದ್​ ಶಾ ಅಮಿತಾಬ್ ಬಚ್ಚನ್ ಸಹ ರಾಮ್ ಗೋಪಾಲ್ ವರ್ಮಾ ಅವರ ಭೇಟಿಗೆ ಡೆನ್​ಗೆ ಬಂದಿದ್ದರು. ಈಗ ಫಹಾದ್ ಫಾಸಿಲ್​ ಆಗಮಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಈಗ ಎಂಥಹುದೇ ಸಿನಿಮಾಗಳು ತೆಗೆಯುತ್ತಿರಲಿ, ಆದರೆ ಅವರ ಹಳೆಯ ಸಿನಿಮಾಗಳಿಂದಾಗಿ ಅವರಿಗೆ ಗೌರವ ನೀಡುವವರು ಈಗಲೂ ಇದ್ದಾರೆ. ರಾಜಮೌಳಿ, ಸಂದೀಪ್ ರೆಡ್ಡಿ ವಂಗಾ, ನಾಗ್ ಅಶ್ವಿನ್ ಅಂಥಹಾ ಈಗಿನ ಟಾಪ್ ನಿರ್ದೇಶಕರು ಸಹ ವರ್ಮಾ ಅವರನ್ನು ತಮ್ಮ ಆದರ್ಶವಾಗಿ ಇರಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಬಾಗಲಕೋಟೆ: ಮೊಸಳೆ ಬಾಯಿಯಿಂದ ಮಾಲೀಕನನ್ನು ಕಾಪಾಡಿದ ಎತ್ತು
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
ಲೋಕಸಭಾ ಚುನಾವಣೆ ಡಿಬ್ಯಾಕಲ್ ನಂತರ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಸುರೇಶ್
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಶಿವಕುಮಾರ್​​ಗೆ ವಿಶ್ ಮಾಡಲು ಬೆಳಗ್ಗೆಯೇ ಮನೆ ಮುಂದೆ ಅಭಿಮಾನಿಗಳ ದಂಡು
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ
ಸಿದ್ದರಾಮಯ್ಯ ವಾಪಸ್ಸು ಕೊಟ್ಟಿದ್ದು ಅವರ ಸ್ವಂತ ಸೈಟುಗಳಲ್ಲ: ಕುಮಾರಸ್ವಾಮಿ
ಪೂಜೆ ಮತ್ತು ಮಂಗಳಾರತಿ ನಂತರ ಕುಮಾರಸ್ವಾಮಿಗೆ ಪ್ರಧಾನ ಅರ್ಚಕರಿಂದ ಸನ್ಮಾನ
ಪೂಜೆ ಮತ್ತು ಮಂಗಳಾರತಿ ನಂತರ ಕುಮಾರಸ್ವಾಮಿಗೆ ಪ್ರಧಾನ ಅರ್ಚಕರಿಂದ ಸನ್ಮಾನ
ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್​ ಆಗಿ ನೋಡಿ
ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್​ ಆಗಿ ನೋಡಿ
ಖರೀದಿ ಭರಾಟೆ: K.R.ಮಾರ್ಕೆಟ್​ನಿಂದ ಟೌನ್​ಹಾಲ್​​ವರೆಗೆ ಟ್ರಾಫಿಕ್ ಜಾಮ್​
ಖರೀದಿ ಭರಾಟೆ: K.R.ಮಾರ್ಕೆಟ್​ನಿಂದ ಟೌನ್​ಹಾಲ್​​ವರೆಗೆ ಟ್ರಾಫಿಕ್ ಜಾಮ್​
Shocking: ಕ್ರೇನ್ ಮೂಲಕ ನರಕಕ್ಕೆ ಎಂಟ್ರಿಕೊಟ್ಟ ದಾಂಡಿಗರು
Shocking: ಕ್ರೇನ್ ಮೂಲಕ ನರಕಕ್ಕೆ ಎಂಟ್ರಿಕೊಟ್ಟ ದಾಂಡಿಗರು
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ