ಈ ಹಾಲಿವುಡ್ ನಟಿಗೆ ‘ಆರ್​ಆರ್​ಆರ್’ ಸಿನಿಮಾ ಅಚ್ಚು-ಮೆಚ್ಚು, ದಿನಾ ನೋಡುತ್ತಾರಂತೆ

ಆರ್​ಆರ್​ಆರ್ ಸಿನಿಮಾವನ್ನು ವಿದೇಶಿ ಪ್ರೇಕ್ಷಕರು ಮಾತ್ರವಲ್ಲ ಖ್ಯಾತ ನಟ, ನಟಿಯರು ತಂತ್ರಜ್ಞರು ಸಹ ಮೆಚ್ಚಿ ಕೊಂಡಾಡಿದ್ದಾರೆ. ಇದೀಗ ಬ್ರಿಟೀಷ್-ಹಾಲಿವುಡ್ ನಟಿಯೊಬ್ಬರು ಆರ್​ಆರ್​ಆರ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಈ ಹಾಲಿವುಡ್ ನಟಿಗೆ ‘ಆರ್​ಆರ್​ಆರ್’ ಸಿನಿಮಾ ಅಚ್ಚು-ಮೆಚ್ಚು, ದಿನಾ ನೋಡುತ್ತಾರಂತೆ
Follow us
ಮಂಜುನಾಥ ಸಿ.
|

Updated on: Oct 11, 2024 | 11:52 AM

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ವಿಶ್ವಮಟ್ಟದಲ್ಲಿ ಭಾರತೀಯ ಚಿತ್ರರಂಗಕ್ಕೆ ಹೊಸ ಗುರುತು ತಂದುಕೊಟ್ಟಿತು. ಆಸ್ಕರ್​ ಅಂಗಳಕ್ಕೆ ಹೋದ ಈ ಸಿನಿಮಾ ಅದಕ್ಕೂ ಮುಂಚೆಯೇ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಯ್ತು. ವಿದೇಶಿ ಜನ ಮುಗಿಬಿದ್ದು ‘ಆರ್​ಆರ್​ಆರ್’ ಸಿನಿಮಾ ನೋಡಿದರು. ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲದೆ, ದೊಡ್ಡ ದೊಡ್ಡ ಹಾಲಿವುಡ್ ತಂತ್ರಜ್ಞರು, ನಿರ್ಮಾಪಕರು, ಸಿನಿಮಾ ತಾರೆಯರು ಸಹ ‘ಆರ್​ಆರ್​ಆರ್’ ಸಿನಿಮಾ ನೋಡಿದ್ದು ಮಾತ್ರವೇ ಅಲ್ಲದೆ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ಹಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಬ್ರಿಟೀಷ್​ ತಾರೆಯೊಬ್ಬರು ‘ಆರ್​ಆರ್​ಆರ್’ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಎಎನ್​ಐ ಜೊತೆ ಮಾತನಾಡಿರುವ ನಟಿ ಮೈನಿ ಡ್ರೈವರ್, ‘ಆರ್​ಆರ್​ಆರ್ ನನಗೆ ಹಾಗೂ ನನ್ನ ಮಗನಿಗೆ ಬಹಳ ಇಷ್ಟದ ಸಿನಿಮಾ. ಅದು ಮೂರು ಗಂಟೆಯ ಸಿನಿಮಾ ಆಗಿದ್ದರೂ ಸಹ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ನಾನು ಹಾಗೂ ನನ್ನ ಪುತ್ರ ಕುಳಿತು ಆ ಸಿನಿಮಾ ನೋಡುತ್ತೇವೆ. ಇತ್ತೀಚೆಗಿನ ವರ್ಷಗಳಲ್ಲಿ ನಾನು ನೋಡಿದ ಅದ್ಭುತವಾದ ಸಿನಿಮಾ ಅದು’ ಎಂದಿದ್ದಾರೆ ಮೈನಿ.

ಇದನ್ನೂ ಓದಿ:ಮೈಸೂರು ದಸರಾ 2024: ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಲೈವ್​ ಆಗಿ ನೋಡಿ

ಭಾರತದ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆಯೂ ಮಾತನಾಡಿರುವ ಮೈನಿ ಡ್ರೈವರ್, ‘ಜನಪ್ರಿಯ ಶೆಫ್ ರೋಮಿ ಗಿಲ್ ನನ್ನ ಆತ್ಮೀಯ ಗೆಳತಿ. ಆಕೆಯಿಂದ ಭಾರತದ ಬಗ್ಗೆ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಭಾರತೀಯ ಆಹಾರಗಳ ರುಚಿ ನೋಡಿದ್ದೇನೆ. ಪಂಜಾಬಿ, ಪಶ್ಚಿಮ ಬಂಗಾಳದ ಪರಿಚಯ ನನಗೆ ಇದೆ. ನನಗೆ ಭಾರತವನ್ನು ಸುತ್ತುವ, ಅದರ ಅನುಭೂತಿಯನ್ನು ಪಡೆಯುವ ಆಸೆಯಿದೆ. ಆದಷ್ಟು ಶೀಘ್ರವಾಗಿ ಆ ಆಸೆಯನ್ನು ಈಡೇರಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

‘ಆರ್​ಆರ್​ಆರ್’ ಸಿನಿಮಾ ಅಮೆರಿಕದಲ್ಲಿ ಬಿಡುಗಡೆ ಆದಾಗ ಬ್ಲಾಕ್ ಬಸ್ಟರ್ ಆಗಿತ್ತು. ಆಸ್ಕರ್​ನಲ್ಲಿ ಪ್ರದರ್ಶಿಸುವಾಗಂತೂ ಸ್ಟಿಫಲ್ ಸ್ಪೀಲ್​ಬರ್ಜ್, ಜೇಮ್ಸ್ ಕ್ಯಾಮರನ್ ಅಂಥಹಾ ವಿಶ್ವಶ್ರೇಷ್ಠ ನಿರ್ದೇಶಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಲ್ಲದೆ, ನಿರ್ದೇಶಕ ರಾಜಮೌಳಿಗೆ ಹಾಲಿವುಡ್​ನಲ್ಲಿ ಸಿನಿಮಾ ನಿರ್ದೇಶಿಸಲು ಆಹ್ವಾನ ಸಹ ನೀಡಿದರು. ಜೇಮ್ಸ್ ಅಂತೂ ತಾವೇ ಪ್ರೊಡಕ್ಷನ್ ಹೌಸ್ ಜೊತೆ ಮಾತನಾಡುವುದಾಗಿ ಹೇಳಿದರು. ನೆಟ್​ಫ್ಲಿಕ್ಸ್​ ಸಿಇಓ ಸಹ ‘ಆರ್​ಆರ್​ಆರ್’ ಸಿನಿಮಾವನ್ನು ಹಲವು ಬಾರಿ ವೀಕ್ಷಿಸಿದ್ದಾಗಿ ಹೇಳಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ