AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ಸಿನಿಮಾ ನಿರ್ದೇಶಕಿ ವಿಜಯ ಮೆಹ್ತಾ ನಿಧನ

Vijaya Mehta:ದಶಕಗಳ ಹಿಂದೆಯೇ ನಿರ್ದೇಶಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದ ನಿರ್ದೇಶಕಿ ವಿಜಯಾ ಮೆಹ್ತಾ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ನಟಿ ಮತ್ತು ನಿರ್ದೇಶಕಿಯಾಗಿ ಹೆಸರು ಮಾಡಿದ್ದ ವಿಜಯಾ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಮುಂಬೈನ 'ರಂಗಾಯಣ' ರಂಗ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರೊಂದಿಗೆ ಹೆಸರಾಂತ ನಾಟಕಕಾರ ವಿಜಯ್ ತೆಂಡೂಲ್ಕರ್ ಹಾಗೂ ನಟರಾದ ಅರವಿಂದ್ ದೇಶಪಾಂಡೆ ಮತ್ತು ಶ್ರೀರಾಮ್ ಲಾಗೂ ಸಹ ಇದ್ದರು.

ಹಿರಿಯ ಸಿನಿಮಾ ನಿರ್ದೇಶಕಿ ವಿಜಯ ಮೆಹ್ತಾ ನಿಧನ
Vijaya
ಮಂಜುನಾಥ ಸಿ.
|

Updated on: Jul 01, 2026 | 10:50 AM

Share

ಭಾರತೀಯ ಚಿತ್ರರಂಗದಲ್ಲಿ (Indian Cinema) ಈಗಲೂ ಮಹಿಳಾ ನಿರ್ದೇಶಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ದಶಕಗಳ ಹಿಂದೆಯೇ ನಿರ್ದೇಶಕಿಯಾಗಿ ಹೆಸರು, ಗೌರವಗಳನ್ನು ಗಳಿಸಿದ್ದ ವಿಜಯಾ ಮೆಹ್ತಾ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ನಟಿ ಮತ್ತು ನಿರ್ದೇಶಕಿಯಾಗಿ ಹೆಸರು ಮಾಡಿದ್ದ ವಿಜಯಾ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಮುಂಬೈನ ‘ರಂಗಾಯಣ’ ರಂಗ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರೊಂದಿಗೆ ಹೆಸರಾಂತ ನಾಟಕಕಾರ ವಿಜಯ್ ತೆಂಡೂಲ್ಕರ್ ಹಾಗೂ ನಟರಾದ ಅರವಿಂದ್ ದೇಶಪಾಂಡೆ ಮತ್ತು ಶ್ರೀರಾಮ್ ಲಾಗೂ ಸಹ ಇದ್ದರು.

ಮೆಹ್ತಾ ಅವರು ದೆಹಲಿಯ ಪ್ರಖ್ಯಾತ ಮಾರ್ಗದರ್ಶಕ ಇಬ್ರಾಹಿಂ ಅಲ್ಕಾಜಿ ಮತ್ತು ಮುಂಬೈನ ಆದಿ ಮರ್ಜ್‌ಬಾನ್ ಅವರ ಬಳಿ ರಂಗಭೂಮಿಯ ತರಬೇತಿ ಪಡೆದಿದ್ದರು. ರಂಗಭೂಮಿ ನಿರ್ದೇಶನಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, 1975ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ನಂತರ, 1986ರಲ್ಲಿ ಬಿಡುಗಡೆಯಾದ ‘ರಾವ್ ಸಾಹೇಬ್’ ಚಿತ್ರದಲ್ಲಿನ ನಟನೆಗಾಗಿ ಅವರು ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡರು.

80ರ ದಶಕದಲ್ಲಿ ಸಿನಿಮಾ ಮತ್ತು ನಾಟಕ ನಿರ್ದೇಶನ ಪ್ರಾರಂಭಿಸಿದ ವಿಜಯ ಮೆಹ್ತಾ, 1982 ರಲ್ಲಿ ಟಿವಿ ಸಿನಿಮಾ ನಿರ್ದೇಶಿಸಿದರು. ಬಳಿಕ 1985 ರಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ‘ರಾವ್ ಸಾವೇಬ್’ ಸಿನಿಮಾ ನಿರ್ದೇಶಿಸಿದರು. ಆ ಬಳಿಕ 1988 ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ‘ಪೆಸ್ತೂಂಜಿ’ ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾನಲ್ಲಿ ನಸೀರುದ್ದೀನ್ ಶಾ, ಶಬಾನಾ ಆಜ್ಮಿ, ಕಿರಣ್ ಖೇರ್ ಮತ್ತು ಅನುಪಮ್ ಖೇರ್ ನಟಿಸಿದ್ದರು. ವಿಜಯ ಅವರು ಮರಾಠಿ ರಂಗಭೂಮಿ ಅಪಾರವಾದ ಕೊಡುವೆಯನ್ನು ನೀಡಿದ್ದಾರೆ. ಮರಾಠಿ ರಂಗಭೂಮಿಯಲ್ಲಿ ಅವರಿಗೆ ಅಪಾರ ಗೌರವ, ಆದರಗಳು ಇವೆ.

ಇದನ್ನೂ ಓದಿ:ಜಾಲಿಯಾಗಿ ಪ್ರಚಾರ ಮಾಡಿದ ಗ್ರಾಮಾಯಣ ಸಿನಿಮಾ ಟೀಮ್

ಪ್ರೀತಿಯಿಂದ ‘ಭಾಯಿ’ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ ಅವರು ನಿನ್ನೆ (ಜೂನ್ 30) ತಡರಾತ್ರಿ ನಿಧನ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಸೇರಿದಂತೆ ಹಲವಾರು ಮಂದಿ ಸಿನಿಮಾ ಮತ್ತು ರಾಜಕೀಯ ಗಣ್ಯರು ವಿಜಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯಾ ಅವರ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಶ್ರೀಮತಿ ವಿಜಯ ಮೆಹ್ತಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಸಂಸ್ಕೃತಿ ಮತ್ತು ಸಿನಿಮಾ ರಂಗದ ಅತ್ಯುನ್ನತ ವ್ಯಕ್ತಿಗಳಲ್ಲಿ ಒಬ್ಬರಾಗಿ ಅವರನ್ನು ಸ್ಮರಿಸಲಾಗುವುದು. ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ಅವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಬದ್ಧತೆಗೆ ಹೆಸರುವಾಸಿಯಾಗಿದ್ದರು. ಅವರ ಕೆಲಸವು ಪೀಳಿಗೆಗಳ ನಟರು, ನಿರ್ದೇಶಕರು ಮತ್ತು ರಂಗಭೂಮಿ ಪ್ರೇಮಿಗಳಿಗೆ ಸ್ಫೂರ್ತಿ ನೀಡಿತು. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಭಿಮಾನಿಗಳು ಮತ್ತು ಇಡೀ ಕಲಾ ಭ್ರಾತೃತ್ವದೊಂದಿಗೆ ನನ್ನ ಆಲೋಚನೆಗಳು ಇವೆ. ಓಂ ಶಾಂತಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us