ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ; ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ

ಸಮಂತಾ ರುತ್ ಪ್ರಭು ಅವರಿಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಅದರ ವಿಡಿಯೋ ವೈರಲ್ ಆಗಿದೆ. ಸಮಂತಾ ಅವರ 38ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇದೇ ದೇವಸ್ಥಾನದಲ್ಲಿ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ತೆನಾಲಿ ಸಂದೀಪ್ ಎಂಬ ಅಭಿಮಾನಿಯು ಆಂಧ್ರ ಪ್ರದೇಶದಲ್ಲಿ ಸಮಂತಾ ಅವರ ದೇವಾಲಯ ನಿರ್ಮಾಣ ಮಾಡಿದ್ದಾರೆ.

ಸಮಂತಾಗೆ ದೇವಸ್ಥಾನ ಕಟ್ಟಿದ ಅಭಿಮಾನಿ; ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ
Samantha Temple

Updated on: Apr 29, 2025 | 8:59 PM

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ದೇಶಾದ್ಯಂತ ಅವರು ಖ್ಯಾತಿ ಹೊಂದಿದ್ದಾರೆ. ಅವರನ್ನು ಅತಿಯಾಗಿ ಇಷ್ಟಪಡುವ ಅಭಿಮಾನಿಗಳು ಕೂಡ ಇದ್ದಾರೆ. ಅದಕ್ಕೆ ಇಲ್ಲಿದೆ ಲೇಟೆಸ್ಟ್ ಉದಾಹರಣೆ. ಆಂಧ್ರಪ್ರದೇಶದಲ್ಲಿ ಅಭಿಮಾನಿಯೊಬ್ಬರು ಸಮಂತಾ ರುತ್ ಪ್ರಭುಗಾಗಿ ದೇವಸ್ಥಾನ ಕಟ್ಟಿದ್ದಾರೆ. ದೇವಸ್ಥಾನದ (Samantha Temple) ವಿಡಿಯೋ ವೈರಲ್ ಆಗಿದೆ. ಸಮಂತಾಗಾಗಿ ಕಟ್ಟಿದ ದೇವಸ್ಥಾನದಲ್ಲೇ ನಟಿಯ ಬರ್ತ್​ಡೇ ಸೆಲೆಬ್ರೇಟ್ ಮಾಡಲಾಗಿದೆ. ಅಲ್ಲದೇ ಅನ್ನದಾನ ಮಾಡುವ ಮೂಲಕ ಅಭಿಮಾನಿಗಳು ಪುಣ್ಯದ ಕಾರ್ಯ ಮಾಡಿದ್ದಾರೆ.

ಏಪ್ರಿಲ್ 28ರಂದು ಸಮಂತಾ ರುತ್ ಪ್ರಭು ಅವರ ಜನ್ಮದಿನ. ಎಲ್ಲೆಡೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. 38ನೇ ವಯಸ್ಸಿಗೆ ಕಾಲಿಟ್ಟ ಸಮಂತಾ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತೆನಾಲಿ ಸಂದೀಪ್ ಎಂಬ ಅಭಿಮಾನಿ ದೇವಸ್ಥಾನ ನಿರ್ಮಿಸಿದ್ದಾರೆ. ಸಮಂತಾ ಅವರ ಎರಡು ಮೂರ್ತಿಗಳನ್ನು ಇಟ್ಟು ಪೂಜೆ ಮಾಡಲಾಗಿದೆ.

ಇದನ್ನೂ ಓದಿ
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ
ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಸುತ್ತಾಟ
2025ರಲ್ಲಿ ಸಮಂತಾ 2ನೇ ಮದುವೆ, ತಾಯಿ ಆಗುವ ಸೂಚನೆ ನೀಡಿದ ನಟಿ

ಬರೀ ದೇವಸ್ಥಾನ ಕಟ್ಟುವುದು ಮಾತ್ರವಲ್ಲದೇ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ತೆನಾಲಿ ಸಂದೀಪ್ ಅವರು ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ‘ನಾನು ಸಮಂತಾ ಅವರ ದೊಡ್ಡ ಅಭಿಮಾನಿ. ಕಳೆದ ಮೂರು ವರ್ಷದಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಪ್ರತಿ ವರ್ಷ ನಾನು ಕೇಕ್ ಕಟ್ ಮಾಡಿ, ಮಕ್ಕಳಿಗೆ ಊಟ ಹಾಕಿಸುತ್ತೇನೆ. ಸಮಂತಾ ರುತ್ ಪ್ರಭು ಅವರ ಸಮಾಜಮುಖಿ ಕೆಲಸಗಳು ನನಗೆ ಸ್ಫೂರ್ತಿ ಆಗಿವೆ. ಅವರ ಹಾದಿಯನ್ನೇ ನಾನು ಅನುಸರಿಸುತ್ತಿದ್ದೇನೆ’ ಎಂದಿದ್ದಾರೆ ತೆನಾಲಿ ಸಂದೀಪ್. ಸಮಂತಾಗಾಗಿ ಸಂದೀಪ್ ನಿರ್ಮಿಸಿದ ದೇವಸ್ಥಾನದ ವಿಡಿಯೋ ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ಬಾಯ್​ಫ್ರೆಂಡ್ ಜೊತೆ ತಿರುಪತಿಗೆ ಬಂದು ಪೂಜೆ ಸಲ್ಲಿಸಿದ ಸಮಂತಾ

ಸಮಂತಾ ಅವರು ಈಗ ನಿರ್ಮಾಪಕಿ ಕೂಡ ಹೌದು. ‘ಶುಭಂ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಮೇ 9ರಂದು ‘ಶುಭಂ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಹಾರರ್ ಕಹಾನಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.