ಸೂಪರ್ ಹಿಟ್ ಚಿತ್ರದ ಕಥೆ ಕದ್ದರಾ ‘ರಾಧೆ ಶ್ಯಾಮ್’ ಸಿನಿಮಾ ನಿರ್ದೇಶಕರು? ಶುರುವಾಯ್ತು ಚರ್ಚೆ

‘ಬಾಹುಬಲಿ’ ಸಿನಿಮಾ ನಂತರದಲ್ಲಿ ಪ್ರಭಾಸ್​ ಬೇಡಿಕೆ ಹೆಚ್ಚಿದೆ. ‘ಬಾಹುಬಲಿ 2’ ಬಳಿಕ ತೆರೆಕಂಡ ‘ಸಾಹೋ’ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಹುಸಿಯಾಗಿತ್ತು. ಈಗ ‘ರಾಧೆ ಶ್ಯಾಮ್​’ ಚಿತ್ರದಿಂದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ.

ಸೂಪರ್ ಹಿಟ್ ಚಿತ್ರದ ಕಥೆ ಕದ್ದರಾ ‘ರಾಧೆ ಶ್ಯಾಮ್’ ಸಿನಿಮಾ ನಿರ್ದೇಶಕರು? ಶುರುವಾಯ್ತು ಚರ್ಚೆ
ಮುರಾರಿ-ರಾಧೆ ಶ್ಯಾಮ್
TV9kannada Web Team

| Edited By: Rajesh Duggumane

Mar 12, 2022 | 8:18 AM

ಪ್ರಭಾಸ್ (Prabhas) ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ (Radhe Shyam Movie) ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ವಿಮರ್ಶಕರಿಂದ ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಸಿನಿಮಾ ಬೋರಿಂಗ್​ ಆಗಿದೆ ಎಂದು ಸ್ವತಃ ಪ್ರಭಾಸ್​ ಅಭಿಮಾನಿಗಳು ಬೈದುಕೊಳ್ಳುತ್ತಿದ್ದಾರೆ. ಚಿತ್ರದ ಬಜೆಟ್​ 300 ಕೋಟಿ ರೂಪಾಯಿ ದಾಟಿದ್ದು, ಈ ಸಿನಿಮಾ ಅಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡೋದು ಅನುಮಾನ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹೀಗಿರುವಾಗಲೇ, ‘ರಾಧೆ ಶ್ಯಾಮ್​’ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಈ ಮೊದಲು ತೆಲುಗಿನಲ್ಲಿ ತೆರೆ ಕಂಡ ಸೂಪರ್ ಹಿಟ್​ ಚಿತ್ರದ ಕಥೆಯನ್ನೇ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ ಎಂದು ಒಂದು ವರ್ಗದ ಜನರು​ ಆರೋಪ ಮಾಡುತ್ತಿದ್ದಾರೆ.

2001ರಲ್ಲಿ ತೆರೆಗೆ ಬಂದ ಮಹೇಶ್​ ಬಾಬು ನಟನೆಯ ‘ಮುರಾರಿ’ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಈ ಚಿತ್ರವನ್ನು ಎಲ್ಲರೂ ಕೊಂಡಾಡಿದ್ದರು. ‘ರಾಧೆ ಶ್ಯಾಮ್​’ ಸಿನಿಮಾದ ಒಂದೆಳೆ ಈ ಚಿತ್ರದ ಕಥೆಯನ್ನು ಹೋಲುತ್ತದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

‘ರಾಧೆ ಶ್ಯಾಮ್’ ಚಿತ್ರದಲ್ಲಿ ಕಥಾ ನಾಯಕ ಭವಿಷ್ಯವನ್ನು ಸಂಪೂರ್ಣವಾಗಿ ನಂಬುತ್ತಾನೆ. ಆದರೆ, ಕ್ಲೈಮ್ಯಾಕ್ಸ್​ನಲ್ಲಿ ತನ್ನ ಹಣೆಬರಹ ಬದಲಾಯಿಸಿಕೊಳ್ಳುತ್ತಾನೆ. ಮಹೇಶ್ ಬಾಬು ನಟನೆಯ ‘ಮುರಾರಿ’ ಸಿನಿಮಾ ಕೂಡ ಇದೇ ರೀತಿಯ ಕಥೆಯನ್ನು ಹೊಂದಿತ್ತು. ಆದರೆ, ಸಿನಿಮಾ ನಿರೂಪಣೆ ಅದ್ಭುತವಾಗಿದ್ದರಿಂದ ಜನರು ಮೆಚ್ಚಿಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಒಂದು ತಪ್ಪಿನಿಂದ ಮುರಾರಿ ಕುಟುಂಬದವರು ಶಾಪ ಎದುರಿಸುತ್ತಿರುತ್ತಾರೆ. ಆದರೆ, ಕೊನೆಯಲ್ಲಿ ಮುರಾರಿ ಇದನ್ನು ಬದಲಾಯಿಸುತ್ತಾನೆ. ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಶಾಪದ ವಿಚಾರ ಇಲ್ಲ. ಆದರೆ, ಕ್ಲೈಮ್ಯಾಕ್ಸ್​​ನಲ್ಲಿ ಕಥಾ ನಾಯಕ ಹಣೆಬರಹವನ್ನೇ ಬದಲಾಯಿಸಿಕೊಳ್ಳುತ್ತಾನೆ. ಈ ವಿಚಾರದಲ್ಲಿ ಹೋಲಿಕೆ ಮಾಡಿ ಚರ್ಚೆಗಳು ನಡೆಯುತ್ತಿವೆ.

‘ಬಾಹುಬಲಿ’ ಸಿನಿಮಾ ನಂತರದಲ್ಲಿ ಪ್ರಭಾಸ್​ ಬೇಡಿಕೆ ಹೆಚ್ಚಿದೆ. ‘ಬಾಹುಬಲಿ 2’ ಬಳಿಕ ತೆರೆಕಂಡ ‘ಸಾಹೋ’ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಹುಸಿಯಾಗಿತ್ತು. ಈಗ ‘ರಾಧೆ ಶ್ಯಾಮ್​’ ಚಿತ್ರದಿಂದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ. ಮೊದಲ ದಿನ ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣೋದಕ್ಕೆ ವಿಫಲವಾಗಿದೆ. ಸಿನಿಮಾದಲ್ಲಿ ಯಾವುದೇ ಫೈಟ್ ಇಲ್ಲದೆ ಇರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಂಗನಾಗೆ ಗೊತ್ತಾಗಿತ್ತು ಮುಂದಿನ ಭವಿಷ್ಯ; ಅಚ್ಚರಿ ವಿಚಾರ ಬಿಚ್ಚಿಟ್ಟ ಪ್ರಭಾಸ್

‘ರಾಧೆ ಶ್ಯಾಮ್’ ವಿಮರ್ಶೆ​: ಭವಿಷ್ಯ ಹೇಳುವ ವ್ಯಕ್ತಿಯ ಕೈಯಲ್ಲಿ ಇಲ್ಲ ಮನರಂಜನೆಯ ರೇಖೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada