ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  

| Updated By: ರಾಜೇಶ್ ದುಗ್ಗುಮನೆ

Updated on: Aug 16, 2021 | 2:56 PM

ಅಪ್ಘಾನಿಸ್ತಾನದ ಸಾಕಷ್ಟು ಪ್ರಾಂತ್ಯಗಳು ತಾಲೀಬಾನಿಗಳ ವಶವಾಗಿದೆ. ಸಾಕಷ್ಟು ಜನರು ಹತ್ಯೆಗೊಳಗಾಗಿದ್ದಾರೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಕಂಡ ಕಂಡಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ.

ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  
ಪ್ರಾಣ ಉಳಿಸಿಕೊಳ್ಳಲು ಅಫ್ಘಾನಿಸ್ತಾನದ ರಸ್ತೆಗಳಲ್ಲಿ ಭಯದಿಂದ ಓಡಿದ ನಿರ್ದೇಶಕಿ; ವಿಡಿಯೋ ವೈರಲ್​  
Follow us on

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದಾದ ಬೆನ್ನಲ್ಲೇ ಅಫ್ಘಾನಿಸ್ತಾನ ಅಲ್ಲೋಲ ಕಲ್ಲೋಲವಾಗಿದೆ. ಅಪ್ಘಾನಿಸ್ತಾನವನ್ನು ತಾಲೀಬಾನ್​ ಉಗ್ರರು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಆಫ್ಘನ್​ ರಾಜಧಾನಿ ಕಾಬೂಲ್​ಅನ್ನು ವಶಕ್ಕೆ ಪಡೆಯುವ ಮೊದಲು ನಮ್ಮನ್ನು ರಕ್ಷಿಸಿ ಎಂದು ಅಲ್ಲಿನ ನಿರ್ದೇಶಕಿ ಪರಿಪರಿಯಾಗಿ ಮನವಿ ಮಾಡಿದ್ದಾರೆ. ಅಲ್ಲದೆ, ಸ್ವತಃ ಅವರೇ ರಸ್ತೆಗೆ ಇಳಿದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಅಪ್ಘಾನಿಸ್ತಾನದ ಸಾಕಷ್ಟು ಪ್ರಾಂತ್ಯಗಳು ತಾಲೀಬಾನಿಗಳ ವಶವಾಗಿದೆ. ಸಾಕಷ್ಟು ಜನರು ಹತ್ಯೆಗೊಳಗಾಗಿದ್ದಾರೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಕಂಡ ಕಂಡಲ್ಲಿ ಅತ್ಯಾಚಾರ ಮಾಡಲಾಗುತ್ತಿದೆ. ಅನೇಕ ಶಾಲೆಗಳು ನೆಲಸಮಗೊಂಡಿವೆ. ಈಗ ಅಪ್ಘಾನಿಸ್ತಾನದ ನಿರ್ದೇಶಕಿ ಸಹ್ರಾ ಕರೀಮಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದುಕೊಂಡು ಸಹಾಯ ಕೇಳಿದ್ದಾರೆ. ‘ಚಲನಚಿತ್ರ ನಿರ್ಮಾತೃರರನ್ನು ತಾಲೀಬಾನ್​ನಿಂದ ರಕ್ಷಿಸಬೇಕು ಎಂದು ನಾನು ನೋವಿನಿಂದ ಕೇಳಿಕೊಳ್ಳುತ್ತಿದ್ದೇನೆ. ಕಳೆದ ಕೆಲವು ವಾರಗಳಲ್ಲಿ ಹಲವು ಪ್ರಾಂತ್ಯಗಳ ಮೇಲೆ ತಾಲೀಬಾನ್‌ ಉಗ್ರರು ನಿಯಂತ್ರಣ ಸಾಧಿಸಿದ್ದಾರೆ. ಅವರು ಇಲ್ಲಿ ಹತ್ಯಾಕಾಂಡ ಮಾಡುತ್ತಿದ್ದಾರೆ. ಅನೇಕ ಮಕ್ಕಳನ್ನು ಅವರು ಅಪಹರಿಸಿದ್ದಾರೆ. ಹುಡುಗಿಯರನ್ನು ಮಾರಿದ್ದಾರೆ’ ಎಂದು ಪತ್ರ ಆರಂಭಿಸಿದ್ದಾರೆ ಸಹ್ರಾ.

‘ಮಾಧ್ಯಮಗಳು, ಸರ್ಕಾರಗಳು ಮತ್ತು ವಿಶ್ವ ಮಾನವ ಹಕ್ಕುಗಳ ರಕ್ಷಣಾ ಸಂಘಟನೆಗಳು ಮೌನವಾಗಿವೆ. ತಾಲೀಬಾನ್ ಜೊತೆಗಿನ ಈ ಶಾಂತಿ ಒಪ್ಪಂದ ಎಂದಿಗೂ ಕಾನೂನುಬದ್ಧವಾಗಿರಲಿಲ್ಲ. ನಮ್ಮ ಜನರನ್ನು ತಾಲೀಬಾನ್ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ. ತಾಲೀಬಾನ್​ಗಳು ಕಾಬೂಲ್​ಅನ್ನು ವಶಪಡಿಸಿಕೊಳ್ಳುವ ಮೊದಲು ದಯವಿಟ್ಟು ನಮಗೆ ಸಹಾಯ ಮಾಡಿ. ನಮಗೆ ಸ್ವಲ್ಪ ಸಮಯವಿದೆ, ಬಹುಶಃ ಒಂದು ದಿನ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇನ್ನು, ರಸ್ತೆಗಿಳಿದು ವಿಡಿಯೋ ಕೂಡ ಮಾಡಿ ಹಾಕಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ತಾಲೀಬಾನಿಗಳು ಕಾಬೂಲ್​ ಪ್ರವೇಶಿಸಿ ಅಲ್ಲಿನ ಕಾಬೂಲ್​ ವಿಶ್ವವಿದ್ಯಾಲಯವನ್ನು ವಶಕ್ಕೆ ಪಡೆದಿದ್ದರು. ಆದರೆ, ಕಾಬೂಲ್​ಅನ್ನು ನಾವು ಎಂದಿಗೂ ವಶಕ್ಕೆ ಪಡೆಯುವುದಿಲ್ಲ. ಅಲ್ಲಿ ಜನರು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಎಂದು ತಾಲೀಬಾನಿ ಸಂಘಟನೆ ಹೇಳಿತ್ತು.

ಇದನ್ನು ಓದಿ: ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಲಷ್ಕರ್ ಗಹ್, ಕಂದಹಾರ್ ವಶಪಡಿಸಿಕೊಂಡ ತಾಲೀಬಾನ್

ಅಪ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ: ಸೈನ್ಯ ಹಿಂಪಡೆಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ ಜೋ ಬೈಡನ್​