ಹೀಗೊಂದು ಮದುವೆ; ರಾಜ್​ಕುಮಾರ್​ ಸ್ಮಾರಕದ ಎದುರೇ ಹಾರ ಬದಲಿಸಿಕೊಂಡ ಐದು ಜೋಡಿಗಳು

| Updated By: ರಾಜೇಶ್ ದುಗ್ಗುಮನೆ

Updated on: Jul 11, 2021 | 4:15 PM

ಈ ಐದು ನವ ಜೋಡಿಗಳು ರಾಜ್​ಕುಮಾರ್​ ಸಮಾಧಿ ಎದುರು ಮದುವೆ ಆಗಬೇಕು ಎಂದುಕೊಂಡಿದ್ದರು. ಅದಕ್ಕೆ ಸಿದ್ಧತೆ ಕೂಡ ಆಗಿತ್ತು.

ಹೀಗೊಂದು ಮದುವೆ; ರಾಜ್​ಕುಮಾರ್​ ಸ್ಮಾರಕದ ಎದುರೇ ಹಾರ ಬದಲಿಸಿಕೊಂಡ ಐದು ಜೋಡಿಗಳು
ಹೀಗೊಂದು ಮದುವೆ; ರಾಜ್​ಕುಮಾರ್​ ಸ್ಮಾರಕದ ಎದುರೇ ಹಾರ ಬದಲಿಸಿಕೊಂಡ ಐದು ಜೋಡಿಗಳು
Follow us on

ಡಾ. ರಾಜ್​ಕುಮಾರ್​ ಅವರು ನಿಧನರಾಗಿ ಸಾಕಷ್ಟು ವರ್ಷಗಳೇ ಕಳೆದಿವೆ. ಆದರೆ, ಅವರ ಅಭಿಮಾನಿ ಬಳಗ ಮಾತ್ರ ಕಡಿಮೆ ಆಗಿಲ್ಲ. ಅವರನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಇದ್ದಾರೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಐದು ಯುವ ಜೋಡಿಗಳು ರಾಜ್​ಕುಮಾರ್​ ಸಮಾಧಿ ಎದುರೇ ಹಾರ ಬದಲಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಮದುವೆ ವಿಚಾರದಲ್ಲಿ ಎಲ್ಲರೂ ನಾನಾ ರೀತಿಯ ಕನಸು ಕಂಡಿರುತ್ತಾರೆ. ಕೆಲವರಿಗೆ ಅದ್ದೂರಿಯಾಗಿ ಮದುವೆ ಆಗಬೇಕು ಎನ್ನುವ ಆಸೆ ಇರುತ್ತದೆ. ಇನ್ನೂ ಕೆಲವರಿಗೆ ಮದುವೆ ಸಿಂಪಲ್​ ಆಗಿ ನಡೆದರೆ ಸಾಕು. ಇನ್ನು, ನೀರಿನ ಮಧ್ಯೆ, ಬೆಟ್ಟದ ತುದಿಯಲ್ಲಿ ಮದುವೆ ಆಗಬೇಕು ಎಂದು ಕನಸು ಕಂಡವರೂ ಇದ್ದಾರೆ. ಆದರೆ, ಈ ಐದು ನವ ಜೋಡಿಗಳು ರಾಜ್​ಕುಮಾರ್​ ಸಮಾಧಿ ಎದುರು ಮದುವೆ ಆಗಬೇಕು ಎಂದುಕೊಂಡಿದ್ದರು. ಅದಕ್ಕೆ ಸಿದ್ಧತೆ ಕೂಡ ಆಗಿತ್ತು.

ಅದಾಗಲೇ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಈ ಐದೂ ಜೋಡಿಗಳು ಮನೆಯಲ್ಲೇ ಮದುವೆ ಆಗಬೇಕೆನ್ನುವ ನಿರ್ಧಾರಕ್ಕೆ ಬಂದರು. ಲಾಕ್ ಡೌನ್ ಸಮಯದಲ್ಲೇ ಸರಳವಾಗಿ ಮದುವೆಯಾದರು. ಈಗ ಅನ್ ಲಾಕ್ ಆದ ನಂತರದಲ್ಲಿ ಅಣ್ಣಾವ್ರ ಸ್ಮಾರಕಕ್ಕೆ ಈ ಐದು ಜೋಡಿಗಳು ಭೇಟಿ ನೀಡಿವೆ.

ವಧು, ವರರಂತೆಯೇ ಹೊಸ ಬಟ್ಟೆ, ಪೇಟ ಧರಿಸಿಕೊಂಡು ಅಣ್ಣಾವ್ರ ಸಮ್ಮುಖದಲ್ಲಿ ಈ ಜೋಡಿ ಹಾರ ಬದಲಿಸಿಕೊಂಡಿದೆ. ಸದ್ಯ, ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಎಲ್ಲರೂ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2006ರ ಏಪ್ರಿಲ್​ 12ರಂದು ರಾಜ್​ಕುಮಾರ್​ ನಿಧನ ಹೊಂದಿದ್ದರು. ಈ ವೇಳೆ ಅಪಾರ ಅಭಿಮಾನಿಗಳು ಬೇಸರ ಹೊರ ಹಾಕಿದ್ದರು. ಪ್ರತಿ ವರ್ಷ ಅವರ ಪುಣ್ಯತಿಥಿ ಹಾಗೂ ಜನ್ಮದಿನದಂದು ಅಭಿಮಾನಿಗಳು ರಾಜ್​ಕುಮಾರ್​ ಹೆಸರಲ್ಲಿ ಅಭಿಮಾನಿಗಳು ಸಾಕಷ್ಟು ಸಮಾಜಸೇವೆಗಳನ್ನು ಮಾಡುತ್ತಾರೆ.

ಇದನ್ನೂ ಓದಿ: Dvitva: ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ; ಬಿಗ್​ ನ್ಯೂಸ್​ ನೀಡಿದ ಹೊಂಬಾಳೆ

ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​