AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dvitva: ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ; ಬಿಗ್​ ನ್ಯೂಸ್​ ನೀಡಿದ ಹೊಂಬಾಳೆ

Hombale Films: ಪವನ್​ ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ ಮೇಲೆ ದೊಡ್ಡ ನಿರೀಕ್ಷೆ ಇದೆ. ಹೊಂಬಾಳೆ ಫಿಲ್ಸ್ಮ್​ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಇಂದು (ಜು.1) ‘ದ್ವಿತ್ವ’ ಎಂದು ಟೈಟಲ್ ಘೋಷಣೆ ಮಾಡಲಾಗಿದೆ.​

Dvitva: ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ; ಬಿಗ್​ ನ್ಯೂಸ್​ ನೀಡಿದ ಹೊಂಬಾಳೆ
ಪುನೀತ್ ರಾಜ್​ಕುಮಾರ್​​-ಪವನ್​ ಕುಮಾರ್​ ಚಿತ್ರಕ್ಕೆ ‘ದ್ವಿತ್ವ’ ಶೀರ್ಷಿಕೆ
ಮದನ್​ ಕುಮಾರ್​
|

Updated on:Jul 01, 2021 | 12:10 PM

Share

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಪವನ್​ ಕುಮಾರ್​ ಜೊತೆಯಾಗಿ ಮಾಡಲಿರುವ ಹೊಸ ಚಿತ್ರಕ್ಕೆ ‘ದ್ವಿತ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್​ ಬ್ಯಾನರ್​ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಗುರುವಾರ (ಜು.1) ಬೆಳಗ್ಗೆ ಟೈಟಲ್​ ಅನೌನ್ಸ್​ ಮಾಡಲಾಗಿದೆ. ಈ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ‘ಕೆಜಿಎಫ್: ಚಾಪ್ಟರ್​ 2​’, ‘ಸಲಾರ್’ ಮುಂತಾದ ದೈತ್ಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಸ್ಮ್​ ಸಂಸ್ಥೆಯಿಂದ ತಯಾರಾಗಲಿರುವ 9ನೇ ಸಿನಿಮಾ ಇದಾಗಿದೆ.

ಸೈಕಲಾಜಿಕಲ್​ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್​ ಕುಮಾರ್​ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್​ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್​ ಆದಂತಹ ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ.

2018ರಲ್ಲಿ ಬಂದ ‘ಯೂ ಟರ್ನ್​’ ಚಿತ್ರದ ಬಳಿಕ ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾವನ್ನು ಪವನ್​ ಕುಮಾರ್​ ನಿರ್ದೇಶನ ಮಾಡಿಲ್ಲ. ದೊಡ್ಡ ಗ್ಯಾಪ್​ ಬಳಿಕ ಅವರು ಕನ್ನಡ ಪ್ರಾಜೆಕ್ಟ್​ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಜೋರಾಗಿದೆ. ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ‘ದ್ವಿತ್ವ’ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಪ್ರೀತಾ ಜಯರಾಮನ್​ ಛಾಯಾಗ್ರಹಣ ಮಾಡಲಿದ್ದಾರೆ. ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಹೊಂಬಾಳೆ ಫಿಲ್ಸ್ಮ್​ ಬ್ಯಾನರ್​ನಲ್ಲಿ ವಿಜಯ್​ ಕಿರಗಂದೂರು ಅವರು ನಿರ್ಮಾಣ ಮಾಡುತ್ತಿರುವ ಎಲ್ಲ ಪ್ರಾಜೆಕ್ಟ್​ಗಳು ಅದ್ದೂರಿಯಾಗಿ ಮೂಡಿಬರುತ್ತಿವೆ. ಆ ಕಾರಣದಿಂದಲೂ ‘ದ್ವಿತ್ವ’ ಬಗ್ಗೆ ಕ್ರೇಜ್​ ಸೃಷ್ಟಿಯಾಗುವಂತಾಗಿದೆ.

ಇದನ್ನೂ ಓದಿ:

ಯಶ್​ ಬೆನ್ನಲ್ಲೇ ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತ ಹೊಂಬಾಳೆ‌ ಫಿಲ್ಮ್ಸ್​

ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ

Published On - 11:55 am, Thu, 1 July 21

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
ಆಂಧ್ರಪ್ರದೇಶದಲ್ಲಿ 158 ಪ್ರಯಾಣಿಕರಿದ್ದ 2 ರೈಲು ಬೋಗಿಗಳಿಗೆ ಬೆಂಕಿ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್