
ರಾಮ್ ಚರಣ್, ಕಿಯಾರಾ ಅಡ್ವಾಣಿ ನಟನೆಯ, ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಚಿತ್ರವು ಅನುಭವಿಸಿದ ನಷ್ಟ ತುಂಬಾನೇ ದೊಡ್ಡದು. ಚಿತ್ರದ ನಿರ್ಮಾಪಕ ದಿಲ್ ರಾಜು ಅವರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿತು. ಈ ಸಿನಿಮಾ ಮೊದಲು ಘೋಷಣೆ ಆದಾಗ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಈ ಚಿತ್ರಕ್ಕೆ ಎರಡೂವರೆ ವರ್ಷಗಳ ಕಾಲ ವಿವಿಧ ಹಂತಗಳಲ್ಲಿ ಶೂಟ್ ಮಾಡಿದನ್ನು ನೀವು ಗಮನಿಸಿರಬಹುದು. ಆದರೆ, ಈ ಚಿತ್ರದಿಂದ ದೊಡ್ಡ ನಷ್ಟ ಆಗಿದೆ ಎಂದು ದಿಲ್ ರಾಜು ಒಪ್ಪಿಕೊಂಡಿದ್ದಾರೆ.
ದಿಲ್ ರಾಜು ಅವರು ‘ಗೇಮ್ ಚೇಂಜರ್’ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಿದರು. ಆದಾಗ್ಯೂ ಸಿನಿಮಾದ ಮೇಕಿಂಗ್ ಹಾಗೂ ಕಳಪೆ ಕಥೆಯ ಕಾರಣಕ್ಕೆ ಗೆಲ್ಲಲಿಲ್ಲ. ನೆಗೆಟಿವ್ ಟಾಕ್ ಚಿತ್ರಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿತು. ಈ ಚಿತ್ರದಿಂದ ಅವರಿಗೆ 100 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.
ದಿಲ್ ರಾಜು ಯಾವಾಗಲೂ ಎಚ್ಚರಿಕೆಯಿಂದ ಸಿನಿಮಾ ಮಾಡಲು ಫೇಮಸ್ ಆದವರು. ಆದರೆ, ಈ ಚಿತ್ರದಿಂದ ಅವರು ನಷ್ಟ ಅನುಭವಿಸಿದರು. ಈ ಚಿತ್ರದ ನೋಡಿದ ತಕ್ಷಣ ಸಿನಿಮಾ ಕೈ ಹಿಡಿಯೋದಿಲ್ಲ ಅನ್ನೋದು ಗೊತ್ತಾಯಿತು. ಹೀಗಾಗಿ, ಮಾನಸಿಕವಾಗಿ ಈ ನಷ್ಟ ಎದುರಿಸಲು ಅವರು ಸಿದ್ಧರಿದ್ದರು.
‘ಗೇಮ್ ಚೇಂಜರ್’ ಸಂಕ್ರಾಂತಿಗೆ ರಿಲೀಸ್ ಆಯಿತು. ವಿಶೇಷ ಎಂದರೆ ದಿಲ್ ರಾಜು ಬ್ಯಾನರ್ನಲ್ಲೇ ಸಿದ್ಧವಾದ ‘ಸಂಕ್ರಾಂತಿಕಿ ವಸ್ತುನ್ನಾನು’ ಕೂಡ ಅದೇ ಸಮಯದಲ್ಲಿ ಬಿಡುಗಡೆ ಆಯಿತು. ಈ ಚಿತ್ರವನ್ನು ಜನರು ಇಷ್ಟಪಟ್ಟರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು.
ದಿಲ್ ರಾಜು ಅವರು ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾದಿಂದ ಬಂದ ಲಾಭವನ್ನು ಹಂಚಿಕೆದಾರರಿಗೆ ನೀಡಿದ್ದಾರೆ. ಅವರಿಗೆ ‘ಗೇಮ್ ಚೇಂಜರ್’ ಹಂಚಿಕೆ ಮಾಡಿ ನಷ್ಟ ಆಗಿತ್ತು. ಆ ನಷ್ಟವನ್ನು ದಿಲ್ ರಾಜು ಅವರು ಭರಿಸಿಕೊಟ್ಟರು. ಇದರಿಂದ ದಿಲ್ ರಾಜು ಅವರು ಎಲ್ಲರ ಮನ ಗೆದ್ದರು.
ಇದನ್ನೂ ಓದಿ: 7 ಗಂಟೆ ಇತ್ತು ‘ಗೇಮ್ ಚೇಂಜರ್’ ಸಿನಿಮಾ ಅವಧಿ; ಶಂಕರ್ ಕೆಟ್ಟ ನಿರ್ದೇಶಕ ಎಂದ ಎಡಿಟರ್
‘ಗೇಮ್ ಚೇಂಜರ್’ ಸಿನಿಮಾ ರಿಲೀಸ್ ವೇಳೆ ‘ಸಂಕ್ರಾಂತಿಕಿ ವಸ್ತುನ್ನಾಮ್’ ರಿಲೀಸ್ ಮಾಡಲು ರಾಮ್ ಚರಣ್ ಹಾಗೂ ಚಿರಂಜೀವಿ ಓಕೆ ಎಂದರು. ಈ ಕಾರಣಕ್ಕೆ ಅವರಿಗೆ ದಿಲ್ ರಾಜು ಧನ್ಯವಾದ ಹೇಳಿದರು. ಹೀಗಾಗಿ, ಎಲ್ಲವೂ ಈಗ ಬ್ಯಾಲೆನ್ಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.