ವಾರದ ದಿನ ಪಾತಾಳ ಕಂಡ ‘ಕಣ್ಣಪ್ಪ’ ಬಾಕ್ಸ್ ಆಫೀಸ್ ಕಲೆಕ್ಷನ್
ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಂತೆ ಗಳಿಕೆ ಮಾಡಲು ವಿಫಲವಾಗಿದೆ. ಸೋಮವಾರದ ಕಡಿಮೆ ಗಳಿಕೆಯು ಚಿತ್ರದ ಭವಿಷ್ಯಕ್ಕೆ ಕಪ್ಪು ನೆರಳನ್ನು ಬೀರಿದೆ. ಪೌರಾಣಿಕ ಕಥೆಗೆ ಆಧುನಿಕ ಅಂಶಗಳನ್ನು ಸೇರಿಸಿದ್ದು ಚಿತ್ರಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ. 300 ಕೋಟಿ ಬಜೆಟ್‌ನ ಚಿತ್ರ ಕೇವಲ 25 ಕೋಟಿ ಗಳಿಕೆ ಮಾಡಿದ್ದು ನಿರ್ಮಾಪಕರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.

ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಸಿನಿಮಾ (Kannappa Movie) ಈಗ ಸೋಮವಾರದ ಪರೀಕ್ಷೆಯಲ್ಲಿ ಫೇಲ್ ಆಗಿದೆ. ಸಾಮಾನ್ಯವಾಗಿ ಹಲವು ಸಿನಿಮಾಗಳು ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತವೆ. ಆದರೆ, ವಾರದ ದಿನಗಳಲ್ಲಿ ಸಿನಿಮಾಗಳ ಕಲೆಕ್ಷನ್ ಹೀನಾಯ ಮಟ್ಟ ತಲುಪುತ್ತದೆ. ವಾರದ ಮೊದಲ ದಿನವಾದ ಸೋಮವಾರ ಚಿತ್ರದ ಗಳಿಕೆ ಒಂದು ಹಂತಕ್ಕೆ ಆದರೆ ಸಿನಿಮಾ ಗೆದ್ದಂತೆ. ಆದರೆ, ‘ಕಣ್ಣಪ್ಪ’ ಸಿನಿಮಾ ಈ ಅಡೆ-ತಡೆಯನ್ನು ದಾಟಲು ವಿಫಲವಾಗಿದೆ. ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.
ಶಿವನ ಭಕ್ತ ಕಣ್ಣಪ್ಪನ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ. ಪೌರಾಣಿಕ ಕಥೆಯ ಜೊತೆ ಸಿನಿಮಾಗೆ ಮಾಡರ್ನ್ ಟಚ್ ಕೊಟ್ಟಿದ್ದು ಸಿನಿಮಾಗೆ ಹಿನ್ನಡೆ ಆಗಿದೆ. ಈ ಮೊದಲು ‘ಆದಿಪುರುಷ್’ ಚಿತ್ರದಲ್ಲೂ ಹಾಗೆಯೇ ಆಗಿತ್ತು. ಈ ಕಾರಣದಿಂದಲೇ ಚಿತ್ರದ ಗಳಿಕೆ ದಿನ ಕಳೆದಂತೆ ತಳಮಟ್ಟ ತಲುಪುತ್ತಿದೆ. ಈ ಚಿತ್ರ ಸೋಮವಾರವೂ ಅಂಥ ದೊಡ್ಡ ಗಳಿಕೆ ಏನೂ ಮಾಡಿಲ್ಲ. ಇದು ಚಿತ್ರತಂಡಕ್ಕೆ ಸಾಕಷ್ಟು ಚಿಂತೆಯನ್ನು ಉಂಟು ಮಾಡಿದೆ.
ಸೋಮವಾರ (ಜೂನ್ 30) ಈ ಸಿನಿಮಾ ಕೇವಲ 1.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಸುಮಾರು 25 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿ. ಹೀಗಿರುವಾಗ ಚಿತ್ರ ಇಷ್ಟು ಕಡಿಮೆ ಮೊತ್ತ ಕಲೆಕ್ಷನ್ ಮಾಡುತ್ತದೆ ಎಂದರೆ ನಿರ್ಮಾಪಕರಿಗೆ ಅದೆಷ್ಟು ದೊಡ್ಡ ನಷ್ಟ ಉಂಟಾಗಿರಬಹುದು ಎಂದು ನೀವೇ ಊಹಿಸಿ.
ಇದನ್ನೂ ಓದಿ: ಭಾನುವಾರವೂ ಹೆಚ್ಚಿಲ್ಲ ‘ಕಣ್ಣಪ್ಪ’ ಕಲೆಕ್ಷನ್; ನೂರಾರು ಕೋಟಿ ರೂ. ನೀರಲ್ಲಿ ಹೋಮ
‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕಣ್ಣಪ್ಪನ ಪಾತ್ರ ಮಾಡಿದ್ದಾರೆ. ಪ್ರಭಾಸ್ ರುದ್ರನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ಪ್ರಭಾಸ್, ಮೋಹನ್ಲಾಲ್ ಅವರು ಈ ಚಿತ್ರಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗಿದೆ.
ವಿಷ್ಣು ಮಂಚು ಅವರು ಸಿನಿಮಾ ರಿಲೀಸ್ಗೂ ಮೊದಲೇ ಎಲ್ಲರಿಗೂ ಎಚ್ಚರಿಕೆ ನೀಡಿದ್ದರು. ಸಿನಿಮಾ ಬಗ್ಗೆ ಟ್ರೋಲ್ ಮಾಡಿದರೆ ಕ್ರಮ ಕೈಗೊಳ್ಳೋದಾಗಿ ಹೇಳಿದ್ದರು. ಆದರೆ, ಯಾರೊಬ್ಬರೂ ಟ್ರೋಲ್ ಮಾಡೋದನ್ನು ನಿಲ್ಲಿಸಿಲ್ಲ. ಈ ಚಿತ್ರದಿಂ ವಿಷ್ಣುಗೆ ನಷ್ಟ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:33 am, Tue, 1 July 25







