ತಮಿಳುನಾಡಿನಲ್ಲಿ ‘ಗೇಮ್ ಚೇಂಜರ್’ ಬಿಡುಗಡೆಗೆ ಅಡೆ-ತಡೆ

|

Updated on: Jan 07, 2025 | 2:42 PM

Game Changer Movie: ರಾಮ್ ಚರಣ್ ನಟಿಸಿ ಎಸ್ ಶಂಕರ್ ನಿರ್ದೇಶನ ಮಾಡಿರುವ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆಗೆ ಎಲ್ಲವೂ ಸಿದ್ಧಗೊಂಡಿರುವಾಗ ತಮಿಳುನಾಡಿನಲ್ಲಿ ಸಿನಿಮಾದ ವಿರುದ್ಧ ದೂರೊಂದು ದಾಖಲಾಗಿದ್ದು, ಸಿನಿಮಾದ ಬಿಡುಗಡೆ ಬಗ್ಗೆ ಅನುಮಾನ ಎಬ್ಬಿಸಿತ್ತು.

ತಮಿಳುನಾಡಿನಲ್ಲಿ ‘ಗೇಮ್ ಚೇಂಜರ್’ ಬಿಡುಗಡೆಗೆ ಅಡೆ-ತಡೆ
Game Changer
Follow us on

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ‘ಗೇಮ್ ಚೇಂಜರ್’ ಸಿನಿಮಾ ಈ ವರ್ಷದ ಬಹುದೊಡ್ಡ ಸಂಕ್ರಾಂತಿ ರಿಲೀಸ್ ಸಿನಿಮಾ ಆಗಲಿದೆ. ಬಹು ಅದ್ಧೂರಿಯಾಗಿ ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು, ಸಿನಿಮಾದ ಬಿಡುಗಡೆಗೆ ಮುನ್ನ ಅದ್ಧೂರಿ ಪ್ರಚಾರ ಕಾರ್ಯಕ್ರಮಗಳನ್ನು ಸಹ ಮಾಡಲಾಗಿದೆ. ಇತ್ತೀಚೆಗೆ ನಡೆದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ವತಃ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು. ಸಿನಿಮಾದ ಮೇಲೆ ರಾಮ್ ಚರಣ್ ಮತ್ತು ತಂಡ ಬಲು ನಿರೀಕ್ಷೆ ಇರಿಸಿಕೊಂಡಿದೆ. ಇದರ ನಡುವೆ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆಗೆ ಅಡೆ-ತಡೆ ಉಂಟಾಗಲು ಆ ಸಿನಿಮಾದ ನಿರ್ದೇಶಕ ಶಂಕರ್ ಕಾರಣ. ಶಂಕರ್ ನಿರ್ದೇಶನ ಮಾಡಿದ್ದ ‘ಇಂಡಿಯನ್ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಲೈಕಾ, ‘ಗೇಮ್ ಚೇಂಜರ್’ ಸಿನಿಮಾವನ್ನು ತಮಿಳು ನಾಡಿನಲ್ಲಿ ಬಿಡುಗಡೆ ಮಾಡಬಾರದು ಎಂದು ನಿರ್ಮಾಪಕರ ಕೌನ್ಸಿಲ್​ಗೆ ದೂರು ನೀಡಿತ್ತು. ಶಂಕರ್, ಲೈಕಾ ನಿರ್ಮಾಣ ಸಂಸ್ಥೆಯ ಜೊತೆ ಮಾಡಿಕೊಂಡಿದ್ದ ಒಪ್ಪಂದ ಉಲ್ಲಂಘನೆ ಮಾಡಿದ್ದು, ನಿಯಮದಂತೆ ನಮಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳುವವರೆಗೆ ಶಂಕರ್ ನಿರ್ದೇಶನದ ಯಾವುದೇ ಸಿನಿಮಾವನ್ನು ತಮಿಳುನಾಡಿನಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದೆಂದು ಲೈಕಾ ಆಗ್ರಹಿಸಿತ್ತು.

‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣದ ಸಮಯದಿಂದಲೂ ಶಂಕರ್ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್ ನಡುವೆ ವಿವಾದಗಳು ನಡೆಯುತ್ತಲೇ ಇವೆ. ಪ್ರಕರಣ ಕೋರ್ಟ್ ಮೆಟ್ಟಿಲು ಸಹ ಏರಿತ್ತು. ಕೊನೆಗೂ ಶಂಕರ್, ಲೈಕಾ ಪ್ರೊಡಕ್ಷನ್ ನಿರ್ಮಾಣದ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ಸಿನಿಮಾ ಬಿಡುಗಡೆಯೂ ಆಯ್ತು ಆದರೆ ಬಾಕ್ಸ್ ಆಫೀಸ್​ನಲ್ಲಿ ಫ್ಲಾಪ್ ಆಯ್ತು. ಲೈಕಾ ನಿರ್ಮಾಣ ಸಂಸ್ಥೆ ಈಗ, ಶಂಕರ್ ‘ಇಂಡಿಯನ್ 3’ ಸಿನಿಮಾ ನಿರ್ದೇಶನ ಮಾಡಿಕೊಡಬೇಕು ಎಂದು ಶಂಕರ್ ಹಿಂದೆ ಬಿದ್ದಿದೆ. ಹಾಗಾಗಿಯೇ ಈಗ ‘ಗೇಮ್ ಚೇಂಜರ್’ ಬಿಡುಗಡೆ ತಡೆಯುವಂತೆ ಮನವಿ ಮಾಡಿದೆ.

ಇದನ್ನೂ ಓದಿ:ಮಗಳ ಮುಖ ತೋರಿಸುವುದು ಯಾವಾಗ? ಉತ್ತರ ಕೊಟ್ಟ ರಾಮ್ ಚರಣ್

ಆದರೆ ಶಂಕರ್, ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು, ಕಮಲ್ ಹಾಸನ್ ಅವರುಗಳು ಲೈಕಾ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ಆಡಿದ್ದು, ವಿವಾದವನ್ನು ಬಗೆಹರಿಸಿದ್ದಾರೆ. ಹಾಗಾಗಿ ‘ಗೇಮ್ ಚೇಂಜರ್’ ಸಿನಿಮಾ ತಮಿಳುನಾಡಿನಲ್ಲಿ ಯಾವುದೇ ಅಡೆ-ತಡೆ ಇಲ್ಲದೆ ಜನವರಿ 10 ರಂದು ಬಿಡುಗಡೆ ಆಗಲಿದೆ. ತಮಿಳುನಾಡಿನ ಬಲು ದೊಡ್ಡ ಸಂಕ್ರಾಂತಿ ರಿಲೀಸ್ ಸಿನಿಮಾ ಆಗಲಿದೆ ‘ಗೇಮ್ ಚೇಂಜರ್’.

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಾಯಕಿ. ಎಸ್​ಜೆ ಸೂರ್ಯ ವಿಲನ್, ಸುನಿಲ್ ಹಾಸ್ಯ ನಟ. ಎಸ್ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಸಿನಿಮಾ ಜನವರಿ 10 ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ