ನಯನತಾರಾಗೆ ಮತ್ತೆ ಸಂಕಷ್ಟ, ಧನುಶ್ ಬಳಿಕ ಮತ್ತೊಬ್ಬರಿಂದ ಕೇಸು

Nayanthara: ತಮಿಳಿನ ಸೂಪರ್ ಸ್ಟಾರ್ ಧನುಶ್, ಕೆಲ ದಿನಗಳ ಹಿಂದೆ ನಯನತಾರಾಗೆ ನೊಟೀಸ್ ನೀಡಿದ್ದರು. ತಮ್ಮ ನಿರ್ಮಾಣದ ಸಿನಿಮಾದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದಕ್ಕೆ ಪರಿಹಾರ ನೀಡುವುದಾಗಿ ಆಗ್ರಹಿಸಿದ್ದರು. ಇದೀಗ ಮತ್ತೊಂದು ನಿರ್ಮಾಣ ಸಂಸ್ಥೆ ನಯನತಾರಾಗೆ ನೊಟೀಸ್ ನೀಡಿದ್ದು, 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದೆ.

ನಯನತಾರಾಗೆ ಮತ್ತೆ ಸಂಕಷ್ಟ, ಧನುಶ್ ಬಳಿಕ ಮತ್ತೊಬ್ಬರಿಂದ ಕೇಸು
Nayantara
Follow us
ಮಂಜುನಾಥ ಸಿ.
|

Updated on: Jan 07, 2025 | 12:29 PM

ನಯನತಾರಾ ಹೆಸರು ಕೆಲ ವಾರಗಳ ಹಿಂದೆ ಬಹಳ ಸುದ್ದಿಯಲ್ಲಿತ್ತು, ಅದಕ್ಕೆ ಕಾರಣ ಅವರು ತಮಿಳಿನ ಸ್ಟಾರ್ ನಟ ಧನುಶ್ ಬಗ್ಗೆ ನಯನತಾರಾ, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಬಲು ಸುದೀರ್ಘ ಪತ್ರ. ನಯನತಾರಾ ಕುರಿತ ಡಾಕ್ಯುಮೆಂಟರಿಗೆ ಧನುಶ್ ನಿರ್ಮಾಣದ ಕ್ಲಿಪ್ ಒಂದನ್ನು ಬಳಸಿಕೊಳ್ಳಲಾಗಿತ್ತು. ಕ್ಲಿಪ್ ಬಳಸಿಕೊಳ್ಳಲು ಧನುಶ್ ಅನುಮತಿ ನೀಡಿರಲಿಲ್ಲ. ಇದರಿಂದ ಸಿಟ್ಟಾದ ನಯನತಾರಾ, ಧನುಶ್ ಒಬ್ಬ ಗೋಮುಖ ವ್ಯಾಘ್ರ ಎಂಬರ್ಥ ನೀಡುವ ಸುದೀರ್ಘ ಪತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲದೆ ಧನುಶ್ ಕುರಿತು ಕೆಲವು ಋಣಾತ್ಮಕ ಅಂಶಗಳನ್ನು ಹಂಚಿಕೊಂಡಿದ್ದರು.

ಈ ಪತ್ರ ವೈರಲ್ ಆದ ಬಳಿಕ ನಯನತಾರಾ ಅವರ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿ ವೈರಲ್ ಆಯ್ತು. ಅದಾದ ಬಳಿಕ ನಟ ಧನುಶ್, ನಯನತಾರಾ ವಿರುದ್ಧ ಹಕ್ಕುಚ್ಯುತಿ ಆರೋಪ ಮಾಡಿ, ಹಲವು ಕೋಟಿಗಳ ಪರಿಹಾರ ನೀಡುವಂತೆ ಕೇಸು ದಾಖಲಿಸಿದರು. ಕೇಸು ಇನ್ನೂ ನಡೆಯುತ್ತಿರುವ ಸಮಯದಲ್ಲಿಯೇ ಇದೀಗ ಮತ್ತೊಬ್ಬ ನಿರ್ಮಾಪಕರು ಇದೇ ರೀತಿಯ ಕೇಸೊಂದನ್ನು ನಯನತಾರಾ ಮೇಲೆ ಹಾಕಿದ್ದು, ಐದು ಕೋಟಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ.

ನಯನತಾರಾ ಅವರ ಡಾಕ್ಯುಮೆಂಟರಿಯಲ್ಲಿ ನಯನತಾರಾ ನಟಿಸಿರುವ ಹಲವು ಸಿನಿಮಾಗಳ ಸಣ್ಣ-ಸಣ್ಣ ದೃಶ್ಯಗಳನ್ನು ಬಳಸಿಕೊಳ್ಳಲಾಗಿತ್ತು, ಅವುಗಳಲ್ಲಿ ‘ಚಂದ್ರಮುಖಿ’ ಸಹ ಒಂದು. ರಜನೀಕಾಂತ್ ನಟಿಸಿದ್ದ ‘ಚಂದ್ರಮುಖಿ’ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಆಪ್ತಮಿತ್ರ’ ಸಿನಿಮಾದ ರೀಮೇಕ್ ಇದಾಗಿದ್ದು, ಕನ್ನಡದಲ್ಲಿ ನಟಿ ಪ್ರೇಮಾ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ನಯನತಾರಾ ನಿರ್ವಹಣೆ ಮಾಡಿದ್ದರು. ಈ ಸಿನಿಮಾದ ಕೆಲವು ದೃಶ್ಯಗಳನ್ನು ನಯನತಾರಾ ತಮ್ಮ ಡಾಕ್ಯುಮೆಂಟರಿಯಲ್ಲಿ ಬಳಸಿಕೊಂಡಿದ್ದರು.

ಇದನ್ನೂ ಓದಿ:ಪತಿ, ಮಕ್ಕಳೊಡನೆ ಪ್ಯಾರಿಸ್​ನಲ್ಲಿ ಮಜಾ ಮಾಡಿದ ನಯನತಾರಾ

ಇದೀಗ ‘ಚಂದ್ರಮುಖಿ’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಶಿವಾಜಿ ಎಂಟರ್ಟೈನ್​ಮೆಂಟ್, ನಯನತಾರಾ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಅನುಮತಿ ಇಲ್ಲದೆ ತಾವು ಹಕ್ಕು ಹೊಂದಿರುವ ಸಿನಿಮಾದ ದೃಶ್ಯಗಳನ್ನು ನಯನತಾರಾ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಯನತಾರಾಗೆ ಲೀಗಲ್ ನೊಟೀಸ್ ಕಳಿಸಿದ್ದು, ಐದು ಕೋಟಿ ರೂಪಾಯಿ ಪರಿಹಾರ ಮೊತ್ತವನ್ನು ನೀಡುವಂತೆ ಆಗ್ರಹಿಸಿದ್ದಾರೆ.

ವಿಶೇಷವೆಂರೆ ನಯನತಾರಾ ಅವರ ಡಾಕ್ಯುಮೆಂಟರಿ ಬಿಡುಗಡೆ ಆದಾಗ, ಥ್ಯಾಂಕ್ಸ್​ ನೋಟ್​ನಲ್ಲಿ ‘ಚಂದ್ರಮುಖಿ’ ಸಿನಿಮಾದ ನಿರ್ಮಾಪಕರಿಗೆ ನಯನತಾರಾ ಧನ್ಯವಾದ ಹೇಳಿದ್ದರು. ದೃಶ್ಯಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದರು. ಆದರೆ, ಡಾಕ್ಯುಮೆಂಟರಿ ಬಿಡುಗಡೆ ಆದ ತಿಂಗಳುಗಳ ಬಳಿಕ ಇದೀಗ ನಯನತಾರಾಗೆ ಅದೇ ನಿರ್ಮಾಪಕರು ನೊಟೀಸ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ