ಪತಿ, ಮಕ್ಕಳೊಡನೆ ಪ್ಯಾರಿಸ್ನಲ್ಲಿ ಮಜಾ ಮಾಡಿದ ನಯನತಾರಾ
Nayanthara-Vignesh Shivan: ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರುಗಳು ಪ್ಯಾರಿಸ್ ಪ್ರವಾಸಕ್ಕೆ ತೆರಳಿದ್ದಾರೆ. ಮಕ್ಕಳನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಈ ದಂಪತಿ ಅಲ್ಲಿಯೇ ಕುಟುಂಬದ ಎಲ್ಲರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪ್ಯಾರಿಸ್ ನಗರದಲ್ಲಿ ಬಹಳ ಸಮಯ ಕಳೆದಿರುವ ಈ ಕುಟುಂಬ, ಐಫಲ್ ಟವರ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದೆ.
Updated on:Dec 25, 2024 | 7:27 PM

ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ನಯನತಾರಾ ಇತ್ತೀಚೆಗಷ್ಟೆ ಪತಿ ಹಾಗೂ ಮಕ್ಕಳೊಡನೆ ಪ್ಯಾರಿಸ್ ಸೇರಿದಂತೆ ಯೂರೋಪ್ನ ಇನ್ನಿತರೆ ನಗರಗಳಲ್ಲಿ ಸುತ್ತಾಟ ನಡೆಸಿದ್ದಾರೆ.

ನಯನತಾರಾ, ವಿಘ್ನೇಶ್ ಶಿವನ್ ಇಬ್ಬರು ಮುದ್ದಾದ ಮಕ್ಕಳು ಯೂರೋಪ್ ಪ್ರವಾಸ ಕೈಗೊಂಡಿದ್ದಾರೆ. ಪ್ಯಾರಿಸ್ ನಗರದಲ್ಲಿ ಬಹಳ ಸಮಯ ಕಳೆದಿರುವ ಈ ಕುಟುಂಬ, ಐಫಲ್ ಟವರ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದೆ.

ಪ್ಯಾರಿಸ್ ನಲ್ಲಿ ನಯನತಾರಾ, ವಿಘ್ನೇಷ್ ಮತ್ತು ಮಕ್ಕಳು ಎಲ್ಲರ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ. ಎಲ್ಲರೂ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ಜಿಟಿ ಹಾಲಿಡೇಸ್ ವತಿಯಿಂದ ಪ್ರವಾಸವನ್ನು ನಯನತಾರಾ ಕೈಗೊಂಡಿದ್ದು, ಜಿಟಿ ಹಾಲಿಡೇಸ್ ಅನ್ನು ಕೊಂಡಾಡಿದ್ದಾರೆ. ನಯನತಾರಾ ಹಾಗೂ ವಿಘ್ನೇಷ್ ಶಿವನ್ ಇಬ್ಬರೂ ಜಿಟಿ ಹಾಲಿಡೇಸ್ ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ.

ಇತ್ತೀಚೆಗಷ್ಟೆ ನಯನತಾರಾ ಅವರ ಡಾಕ್ಯುಮೆಂಟರಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಿತ್ತು. ಡಾಕ್ಯುಮೆಂಟರಿಯಲ್ಲಿ ವಿಘ್ನೇಶ್ ಮತ್ತು ನಯನತಾರಾ ತಮ್ಮ ಪ್ರೇಮಕತೆಗಳ ಬಗ್ಗೆ ಮಾತನಾಡಿಕೊಂಡಿದ್ದರು. ಅವರ ಮದುವೆಯ ದೃಶ್ಯಗಳು ಸಹ ಇದ್ದವು.

ಡಾಕ್ಯುಮೆಂಟರಿ ಬಿಡುಗಡೆ ಸಂದರ್ಭದಲ್ಲಿಯೇ ನಯನತಾರಾ ಅವರು ನಟ ಧನುಶ್ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಉದ್ದನೆಯ ಆರೋಪಣಾ ಪತ್ರವನ್ನು ಬರೆದಿದ್ದರು. ಧನುಶ್ ಒಬ್ಬ ಗೋಮುಖ ವ್ಯಾಘ್ರ ಎಂದು ಸಹ ನಯನತಾರಾ ಬರೆದುಕೊಂಡಿದ್ದರು.

ನಯನತಾರಾ ಇದೀಗ ಬಾಲಿವುಡ್ ಮತ್ತು ದಕ್ಷಿಣಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕಿಯೂ ಆಗಿರುವ ನಯನತಾರಾ ಕೆಲವು ಹೊಸ ನಿರ್ದೇಶಕರ ಸಿನಿಮಾಗಳ ಮೇಲೆ ಬಂಡವಾಳ ಸಹ ಹೂಡಿದ್ದಾರೆ.
Published On - 7:26 pm, Wed, 25 December 24



















