- Kannada News Photo gallery Chaithra Kundapura decided to Not Enter Hospital after rajat Tont cinema News in Kannada
ರಜತ್ನಿಂದ ಕೊಂಕು ಮಾತು; ಇನ್ಮುಂದೆ ಆಸ್ಪತ್ರೆ ಮೆಟ್ಟಿಲು ಹತ್ತದಿರಲು ಚೈತ್ರಾ ನಿರ್ಧಾರ
ಚೈತ್ರಾ ಕುಂದಾಪುರ ಹಾಗೂ ರಜತ್ ಮಧ್ಯೆ ಕಿರಿಕ್ ದಿನ ಕಳೆದಂತೆ ಜೋರಾಗುತ್ತಲೇ ಇದೆ. ಇವರ ಮಧ್ಯೆ ಸಾಕಷ್ಟು ವೈಮನಸ್ಸು ಮೂಡುತ್ತಿದೆ. ಈಗ ಚೈತ್ರಾ ಅವರು ರಜತ್ ವಿರುದ್ಧ ಧ್ವನಿ ಎತ್ತಿದ್ದಾರೆ. ಇನ್ಮುಂದೆ ಆಸ್ಪತ್ರೆ ಮೆಟ್ಟಿಲು ಹತ್ತದಿರಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ರಜತ್ ಅವರ ಮಾತುಗಳು. ಆ ಬಗ್ಗೆ ಇಲ್ಲಿದೆ ವಿವರ.
Updated on:Dec 25, 2024 | 11:51 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಪದೇ ಪದೇ ಅನಾರೋಗ್ಯ ತಪ್ಪುತ್ತಿದ್ದಾರೆ. ಇದರಲ್ಲಿ ಪ್ಯಾಟರ್ನ್ ಕಾಣುತ್ತಿದೆ ಎಂದು ಸುದೀಪ್ ಅವರು ಈ ಮೊದಲು ಅಭಿಪ್ರಾಯಪಟ್ಟಿದ್ದರು. ಈಗ ಈ ವಿಚಾರವಾಗಿ ರಜತ್ ಅವರು ಕೊಂಕು ತೆಗೆದಿದ್ದಾರೆ. ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಚೈತ್ರಾ ಕುಂದಾಪುರ ಅವರು ಆ್ಯಕ್ಟೀವ್ ಆಗಿ ಮಾತನಾಡುತ್ತಾ, ಕೂಗಾಡುತ್ತಿದ್ದರು. ಇದನ್ನು ನೋಡಿದ ರಜತ್ ಅವರು ಚೈತ್ರಾನ ಟಾರ್ಗೆಟ್ ಮಾಡಿದ್ದಾರೆ. ಅವರ ಆರೋಗ್ಯದ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಅವರಿಗೆ ಅನಾರೋಗ್ಯ ಆಗಿದ್ದರೂ ಇಷ್ಟು ಆ್ಯಕ್ಟೀವ್ ಆಗಿ ಇದ್ದಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

‘ಸೋಮವಾರ ಯಾರಿಗೋ ಚಳಿ ಜ್ವರ ಬಂದಿತ್ತಲ್ಲ. ಈಗ ನೋಡಿದ್ರೆ ಆ್ಯಕ್ಟೀವ್ ಆಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಬಹುಶಃ ಸ್ಟೋವ್ನಿಂದ ಬಿಸಿ ತೆಗೆದುಕೊಳ್ಳುತ್ತಾ ಇರಬಹುದು’ ಎಂದು ರಜತ್ ಅವರು ಚೈತ್ರಾನ ಕಾಲೆಳೆಯುವ ಪ್ರಯತ್ನ ಮಾಡಿದರು. ಇದು ಚೈತ್ರಾ ಅವರ ಕೋಪಕ್ಕೆ ಕಾರಣ ಆಗಿದೆ.

ಆ ಬಳಿಕ ಚೈತ್ರಾ ಅವರು ಅಳುತ್ತಾ ಕೂತರು. ಈ ವೇಳೆ ಭವ್ಯಾ ಅವರು ಚೈತ್ರಾನ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಚೈತ್ರಾ ಅವರು ಸಮಾಧಾನ ಆಗಲೇ ಇಲ್ಲ. ಅವರ ದುಃಖ ಮತ್ತಷ್ಟು ಹೆಚ್ಚಾಯಿತು. ಈ ವೇಳೆ ಅವರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡರು.

‘ನನ್ನನ್ನು ನಾನು ಸಾಬೀತು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಯಾವ ಆರೋಪಕ್ಕೆ ನನ್ನ ಈ ರೀತಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಆರೋಗ್ಯವಾಗಿದ್ದರೆ ಗಂಟೆಗಟ್ಟಲೆ ಡ್ರಿಪ್ ಯಾಕೆ ಹಾಕುತ್ತಿದ್ದರು? ನಾನು ಆಸ್ಪತ್ರೆಗೆ ನಾಳೆ ಹೋಗಲ್ಲ. ವೈದ್ಯರಿಗೆ ಹೋಗಿ ಹೇಳಿ ಬರುತ್ತೇನೆ. ಇಲ್ಲಿಂದ ಆಚೆಗೆ ಯಾವುದನ್ನೂ ಸಹಿಸಿಕೊಳ್ಳಲ್ಲ’ ಎಂದು ಚೈತ್ರಾ ಹೇಳಿದ್ದಾರೆ.
Published On - 11:50 am, Wed, 25 December 24



















