Yash Net Worth: ರಾಕಿಂಗ್ ಸ್ಟಾರ್ ಒಟ್ಟೂ ಆಸ್ತಿ ಎಷ್ಟು? ಅವರ ಕಾರ್ ಕಲೆಕ್ಷನ್ ಹೇಗಿದೆ?
ವರು ಪ್ರತಿ ವರ್ಷ 6-7 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ ಮತ್ತು ಹಲವಾರು ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಇದರಿಂದ ಅವರಿಗೆ ಹಣ ಬರುತ್ತದೆ. ಅವರ ಬಳಿ ಐಷಾರಾಮಿ ಕಾರುಗಳ ಸಂಗ್ರಹವಿದೆ ಮತ್ತು ಬೆಂಗಳೂರಿನಲ್ಲಿ ದುಬಾರಿ ಮನೆಯನ್ನು ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು (ಜನವರಿ 8) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸದ್ಯ ಯಶ್ ಅವರು ವಿದೇಶದಲ್ಲಿ ಇದ್ದಾರೆ. ‘ಟಾಕ್ಸಿಕ್’ ಸಿನಿಮಾ ಶೂಟ್ಗಾಗಿ ಅವರು ಬೇರೆ ದೇಶಕ್ಕೆ ತೆರಳಿದ್ದಾರೆ. ಬಸ್ ಡ್ರೈವರ್ ಮಗ ಆಗಿದ್ದ ಯಶ್ ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಅವರು ಜೀ ಕನ್ನಡದ ‘ವೀಕೆಂಡ್ ವಿತ್ ರಮೇಶ್’ನ ಸಾಧಕರ ಸೀಟ್ನಲ್ಲಿ ಕುಳಿತಿದ್ದಾರೆ. ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟೂ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಯಶ್ ಅವರಿಗೆ ‘ರಾಕಿಂಗ್ ಸ್ಟಾರ್’, ‘ರಾಕಿ ಭಾಯ್’ ಸೇರಿ ಅನೇಕ ನಿಕ್ ನೇಮ್ಗಳು ಇವೆ. ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಬಾಸ್ ಎಂದು ಕೂಡ ಕರೆಯುತ್ತಾರೆ. 2000ನೇ ಇಸ್ವಿಯಲ್ಲಿ ಯಶ್ ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಿರಿತೆರೆಗೆ ಕಾಲಿಟ್ಟ ಅವರು ‘ಮೊಗ್ಗಿನ ಮನಸು’, ‘ಕಿರಾತಕ’, ‘ರಾಜಹುಲಿ’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು.
ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿ ಪ್ರಕಾರ ಯಶ್ ಅವರ ಆಸ್ತಿ 53 ಕೋಟಿ ರೂಪಾಯಿ. ಅವರು ಪ್ರತಿ ವರ್ಷ 6ರಿಂದ 7 ಕೋಟಿ ಸಂಪಾದಿಸುತ್ತಾರೆ. ಈಗ ಅವರು ಸಂಭಾವನೆ ಹೆಚ್ಚಿಸಿಕೊಂಡಿದ್ದು, ಆದಾಯ ಕೂಡ ಹೆಚ್ಚಾಗಿದೆ.
ಯಶ್ ಅವರು ಬ್ರ್ಯಾಂಡ್ಗಳ ಪ್ರಚಾರ ಕೂಡ ಮಾಡುತ್ತಾರೆ. ಈ ಮೊದಲು ಅವರು ಇದಕ್ಕೆ 60 ಲಕ್ಷ ರೂಪಾಯಿ ಪಡೆಯುತ್ತಿದ್ದರು. ಈಗ ಅದು ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗುತ್ತಿದೆ. ಅವರು ಗಾಲ್ಫ್ ರಸ್ತೆ ಸಮೀಪದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ಮನೆ ಹೊಂದಿದ್ದು ಇದರ ಬೆಲೆ 4 ಕೋಟಿ ರೂಪಾಯಿ ಎನ್ನಲಾಗಿದೆ. ವಿದೇಶದಿಂದ ಇದಕ್ಕೆ ವಸ್ತುಗಳನ್ನು ತರಿಸಿ ಇಂಟೀರಿಯರ್ ಮಾಡಿಸಲಾಗಿದೆ.
ಇದನ್ನೂ ಓದಿ: ಯಶ್ ಅಭಿಮಾನಿಗಳು ಮೃತಪಟ್ಟ ಪ್ರಕರಣ; ವರ್ಷ ಕಳೆದರೂ ನಿಂತಿಲ್ಲ ಹೆತ್ತವರ ಕಣ್ಣೀರು
ಯಶ್ ಅವರ ಬಳಿ ರೇಂಜ್ ರೋವರ್ ಕಾರು ಇದೆ. ಇದರಲ್ಲಿ ಅವರು ಓಡಾಡುತ್ತಾರೆ. ಈ ಕಾರಿನ ನೋಂದಣಿ ಸಂಖ್ಯೆ KA 01 NA 8055 ಅನ್ನೋದು ವಿಶೇಷ. ಇದು ಫ್ಯಾನ್ಸಿ ಸಂಖ್ಯೆ ಆಗಿದೆ. 8055 ಅನ್ನೋದು BOSS ಎಂಬ ಪದವನ್ನು ಸೂಚಿಸುತ್ತದೆ. ಅವರು ‘ರಾಮಾಯಣ’ ಚಿತ್ರಕ್ಕೆ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ದುಬಾರಿ ವಿಲನ್ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ. ಅವರು ಈ ಚಿತ್ರಕ್ಕೆ ನಿರ್ಮಾಪಕರೂ ಹೌದು. ಅವರು ಸಂಭಾವನೆ ತೆಗೆದುಕೊಳ್ಳುವ ಬದಲು ಅದನ್ನು ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:00 am, Wed, 8 January 25