ಹೊಸ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಆಲಿಯಾ ಭಟ್​; ಆದರೂ ಮಿತಿ ತಪ್ಪದ ನಟಿ

ಸಾಮಾನ್ಯವಾಗಿ ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಹಾಡಿಗೆ ತುಂಬಾನೇ ಪ್ರಾಮುಖ್ಯತೆ ಇರುತ್ತದೆ. ಈ ಮೊದಲು ಅನೇಕ ಬಾರಿ ಇದು ಸಾಬೀತಾಗಿದೆ. ಈ ಬಾರಿ ಅವರ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಹೊಸ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಆಲಿಯಾ ಭಟ್​; ಆದರೂ ಮಿತಿ ತಪ್ಪದ ನಟಿ
ಆಲಿಯಾ ಭಟ್
Updated By: ರಾಜೇಶ್ ದುಗ್ಗುಮನೆ

Updated on: Feb 15, 2022 | 4:34 PM

ನಟಿ ಆಲಿಯಾ ಭಟ್​ ಅವರು (Alia Bhatt) ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi) ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕೂಡ ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆಲಿಯಾ ಭಟ್​ ಪಾತ್ರ ಹೇಗಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಈಗ ಚಿತ್ರತಂಡದಿಂದ ಒಂದೊಂದಾಗಿ ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ‘ಢೋಲಿಡಾ..’ ಹಾಡು ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡು 3.2 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈಗ ಚಿತ್ರತಂಡದಿಂದ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ರಿಲೀಸ್​ ಆದ ಒಂದು ಗಂಟೆ ಒಳಗೆ ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

‘ಗಲ್ಲಿ ಬಾಯ್​’ ಸೇರಿ ಅನೇಕ ಚಿತ್ರಗಳಲ್ಲಿ ಆಲಿಯಾ ಭಟ್​ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ರಣವೀರ್​ ಸಿಂಗ್ ಜತೆ ಅವರು ತೆರೆಮೇಲೆ ಕಿಸ್ ಕೂಡ ಮಾಡಿದ್ದರು. ಸಿನಿಮಾದ ಕಥೆ ಆ ರೀತಿಯ ದೃಶ್ಯಗಳನ್ನು ಬೇಡಿದರೆ ಆಲಿಯಾ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸೋಕೆ ಯೋಚನೆ ಮಾಡುವುದಿಲ್ಲ. ಈ ಬಾರಿ ಆಲಿಯಾ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರದ ‘ಜಬ್​ ಸಂಯ್ಯಾ..’ ಹಾಡು ರಿಲೀಸ್ ಆಗಿದೆ.

ಈ ಹಾಡಿನಲ್ಲಿ ಆಲಿಯಾ ಭಟ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಎಲ್ಲಿಯೂ ಕಿಸ್ ಮಾಡಿಲ್ಲ. ಕೇವಲ ಕಣ್ಣಿನ ಮೂಲಕ ಎಲ್ಲ ಭಾವನೆಗಳನ್ನು ಹೊರಹಾಕಿದ್ದಾರೆ. ಈ ಹಾಡು ಈಗ ಎಲ್ಲ ಕಡೆಗಳಲ್ಲಿ ಸದ್ದು ಮಾಡುತ್ತಿದೆ. ಈ ಹಾಡಿಗೆ ಸಂಜಯ್​ ಲೀಲಾ ಬನ್ಸಾಲಿ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಾಮಾನ್ಯವಾಗಿ ಸಂಜಯ್​ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಹಾಡಿಗೆ ತುಂಬಾನೇ ಪ್ರಾಮುಖ್ಯತೆ ಇರುತ್ತದೆ. ಈ ಮೊದಲು ಅನೇಕ ಬಾರಿ ಇದು ಸಾಬೀತಾಗಿದೆ. ಈ ಬಾರಿ ಅವರ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಹಾಡುಗಳು ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದರಿಂದ ಸಿನಿಮಾದ ಮೈಲೇಜ್​ ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ.

ಅಸಮಾಧಾನ ಹೊರಹಾಕಿದ್ದ ಕಂಗನಾ 

ಕಿಯಾರಾ ಖನ್ನಾ ಎಂಬ ಬಾಲಕಿ ನೋಡೋಕೆ ಆಲಿಯಾ ಭಟ್​ ರೀತಿಯಲ್ಲಿದ್ದಾಳೆ. ಅವಳದ್ದು ಇನ್ನೂ ಚಿಕ್ಕ ವಯಸ್ಸು. ಆಲಿಯಾ ಭಟ್​ ಹಂಚಿಕೊಂಡ ವಿಡಿಯೋ ಒಂದಕ್ಕೆ ರೀಲ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟಂತೆ ಇವಳು ಕೂಡ ಬಾಯಿಗೆ ಬೀಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಅನೇಕರು ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ, ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದರು.

ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಅವರು ಕಾಮಾಟಿಪುರದ ಡಾನ್​ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್​ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದಕ್ಕೆ ಕಂಗನಾ ಅಸಮಾಧಾನ ಹೊರಹಾಕಿದ್ದರು.  ‘ಚಿಕ್ಕ ಮಕ್ಕಳು ಬಾಯಲ್ಲಿ ಬೀಡಿ ಇಟ್ಟುಕೊಂಡು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುವುದು ಎಷ್ಟು ಸರಿ? ಇಷ್ಟು ಸಣ್ಣ ವಯಸ್ಸಿಗೆ ಅವಳ ಮನಸ್ಸಿನಲ್ಲಿ ಈ ರೀತಿ ವಿಚಾರ ತುಂಬುವುದು ಸರಿಯೇ? ಹಲವು ಚಿಕ್ಕಮಕ್ಕಳು ಇವರನ್ನೇ ಹಿಂಬಾಲಿಸುತ್ತಿರುತ್ತಾರೆ’ ಎಂದು ಕಂಗನಾ ಆತಂಕ ಹೊರ ಹಾಕಿದ್ದರು. ಈ ಪೋಸ್ಟ್​​ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ: Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್​ಗೆ ಹೀಗೊಂದು ಆಸೆ

ಬಾಲಿವುಡ್​ನ​ ಈ ಹೀರೋ ಈಗಲೂ ನನ್ನನ್ನು ಮಗುವಿನಂತೆ ಕಾಣುತ್ತಾರೆ ಎಂದ ಆಲಿಯಾ ಭಟ್​