‘ಕತೆ ಬರೆಯೋದು ಒಂದು, ಶೂಟ್ ಮಾಡೋದು ಒಂದು’: ಗೀತೂ ಮೋಹನ್​​ದಾಸ್ ಹಳೆ ವಿಡಿಯೋ ವೈರಲ್

Geethu Mohandas movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಮಹಿಳೆಯೊಬ್ಬರು ನಿರ್ದೇಶಿಸಿದ ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ಇದು ಮೊದಲನೇ ಬಾರಿ. ಸಿನಿಮಾ ದೊಡ್ಡ ಗಳಿಕೆ ಮಾಡುತ್ತಿರುವ ಜೊತೆಗೆ ಅಲ್ಲಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟುಗಳು ಸಹ ಹರಿದಾಡುತ್ತಿವೆ. ಇದರ ನಡುವೆ ಗೀತೂ ಮೋಹನ್​ದಾಸ್ ಅವರ ಹಳೆಯ ವಿಡಿಯೋ ಒಂದು ಸಹ ವೈರಲ್ ಆಗಿದೆ.

‘ಕತೆ ಬರೆಯೋದು ಒಂದು, ಶೂಟ್ ಮಾಡೋದು ಒಂದು’: ಗೀತೂ ಮೋಹನ್​​ದಾಸ್ ಹಳೆ ವಿಡಿಯೋ ವೈರಲ್
Geethu Toxic

Updated on: Aug 27, 2026 | 11:29 AM

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ಮೊದಲ ದಿನ ಒಳ್ಳೆ ಗಳಿಕೆ ಮಾಡಿದೆ.
  • ಈ ನಡುವೆ ನಿರ್ದೇಶಕಿ ಗೀತೂ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
  • ತಮ್ಮ ಸಿನಿಮಾ ಮೇಕಿಂಗ್ ಸ್ಟೈಲ್ ಬಗ್ಗೆ ಅವರು ಮಾತನಾಡಿದ್ದಾರೆ.

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ನಿನ್ನೆ (ಆಗಸ್ಟ್ 26) ಭಾರಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮೊದಲ ದಿನವೇ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 140 ಕೋಟಿ ರೂ ಮೊತ್ತ ಗಳಿಕೆ ಮಾಡಿದೆ. ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಇನ್ನು ಕೆಲವೆಡೆ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗುತ್ತಿವೆ. ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು, ಅಭಿಪ್ರಾಯಗಳು ಹರಿದಾಡುತ್ತಿವೆ. ಹೀಗಿರುವಾಗ ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡಿರುವ ಗೀತೂ ಮೋಹನ್​​ದಾಸ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕಿ ಗೀತೂ ಮೋಹನ್​​ದಾಸ್, ತಮ್ಮ ಸಿನಿಮಾ ಮಾಡುವ ಶೈಲಿಯ ಬಗ್ಗೆ ಮಾತನಾಡಿದ್ದಾರೆ. ‘ನಾನು ಚಿತ್ರಕತೆ ಬರೆಯುವುದು ಒಂದು, ಶೂಟ್ ಮಾಡುವುದು ಒಂದು, ಬಳಿಕ ಎಡಿಟ್ ಮಾಡುವುದೇ ಒಂದು ಕೊನೆಗೆ ಪ್ರೇಕ್ಷಕರು ನೋಡುವುದೇ ಇನ್ನೊಂದು’ ಎಂದಿದ್ದಾರೆ ಗೀತೂ ಮೋಹನ್​​ದಾಸ್. ಇದೀಗ ‘ಟಾಕ್ಸಿಕ್’ ಸಿನಿಮಾ ಇಷ್ಟವಾಗದ ಕೆಲವರು ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಿರ್ದೇಶಕಿಯ ಟ್ರೋಲ್ ಮಾಡುತ್ತಿದ್ದಾರೆ.

‘ನಾನು ಏನು ಅಂದುಕೊಂಡಿರುತ್ತೇನೋ ಅದನ್ನು ಸಿನಿಮಾ ಮಾಡುವುದಿಲ್ಲ. ನಿರ್ಮಾಪಕರು, ನಟರೊಟ್ಟಿಗೆ ಚರ್ಚೆ ಮಾಡುವಾಗ ನಾನು ಇದೇ ವಿಷಯವನ್ನು ಪದೇ ಪದೇ ಹೇಳುತ್ತೇನೆ. ಏಕೆಂದರೆ ನನಗೆ ಇದು ಸಮಸ್ಯೆ ಆಗುತ್ತದೆ. ನಾನು ಹೇಳಿರುವುದೇ ಒಂದು ಹೇಳಿರುತ್ತೇನೆ ಅಂತಿಮವಾಗಿ ಶೂಟ್ ಮಾಡುವುದೇ ಬೇರೆ ಆಗಿರುತ್ತದೆ’ ಎಂದು ಗೀತೂ ಹಿಂದೊಮ್ಮೆ ಯಾವುದೋ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ:ಟಾಕ್ಸಿಕ್’ ಕಲೆಕ್ಷನ್ ಲೆಕ್ಕಾಚಾರ; ಹಿಂದಿಯಲ್ಲಿ ದೊಡ್ಡ ಜಾಕ್‌ಪಾಟ್ ಹೊಡೆದಿದ್ದು ಹೇಗೆ?

‘ಟಾಕ್ಸಿಕ್’ ಸಿನಿಮಾಕ್ಕೆ ಮುಂಚೆ ಗೀತೂ ಮೊಹನ್​​ದಾಸ್ ಅವರು ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ನಿವಿನ್ ಪೌಲಿ ನಟನೆಯ ಮಲಯಾಳಂ ಸಿನಿಮಾ ‘ಮೂತನ್’ ಮತ್ತು ಹಿಂದಿಯ ‘ಲೈಯರ್ಸ್ ಡೈರಿ’. ಈ ಎರಡೂ ಸಿನಿಮಾಗಳು ವಿಮರ್ಶಕರ ಮೆಚ್ಚುಗೆ ಗಳಿಸಿದ್ದವು. ‘ಮೂತನ್​’ ಸಿನಿಮಾಕ್ಕೆ ಸಾಕಷ್ಟು ಪ್ರಶಸ್ತಿಗಳು ಸಹ ದೊರಕಿದ್ದವು. ಇದೀಗ ಮೊದಲ ಬಾರಿಗೆ ಕಮರ್ಶಿಯಲ್, ಮಾಸ್ ಮಸಾಲ ಸಿನಿಮಾ ‘ಟಾಕ್ಸಿಕ್’ ನಿರ್ದೇಶನ ಮಾಡಿದ್ದಾರೆ ಗೀತೂ ಮೊಹನ್​​ದಾಸ್. ಸಿನಿಮಾ ಮೊದಲ ದಿನವೇ ಒಳ್ಳೆಯ ಗಳಿಕೆ ಮಾಡಿದೆ, ಆದರೆ ಸಿನಿಮಾದ ಬಗ್ಗೆ ಅಲ್ಲಲ್ಲಿ ನೆಗೆಟಿವ್ ಕಮೆಂಟುಗಳ ಸಹ ಹರಿದಾಡುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Thu, 27 August 26

Loading...
Unable to load recommendations.
Follow Us