AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Godfather: ಪ್ರಭುದೇವ, ಸಲ್ಲು, ಚಿರು ಇದ್ದರೂ ಆಗಲಿಲ್ಲ ಮ್ಯಾಜಿಕ್​; ‘ಥಾರ್​ ಮಾರ್​..’ ಹಾಡಿಗೆ ಫ್ಯಾನ್ಸ್​ ಬೇಸರ

Thaar Maar Thakkar Maar: ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಇದು ಚಿತ್ರಕ್ಕೆ ನೆಗೆಟಿವ್​ ಪರಿಣಾಮ ಬೀರಿದರೂ ಅಚ್ಚರಿ ಏನಿಲ್ಲ.

Godfather: ಪ್ರಭುದೇವ, ಸಲ್ಲು, ಚಿರು ಇದ್ದರೂ ಆಗಲಿಲ್ಲ ಮ್ಯಾಜಿಕ್​; ‘ಥಾರ್​ ಮಾರ್​..’ ಹಾಡಿಗೆ ಫ್ಯಾನ್ಸ್​ ಬೇಸರ
ಸಲ್ಮಾನ್ ಖಾನ್, ಪ್ರಭುದೇವ, ಚಿರಂಜೀವಿ
TV9 Web
| Updated By: ಮದನ್​ ಕುಮಾರ್​|

Updated on:Sep 22, 2022 | 12:01 PM

Share

‘ಮೆಗಾ ಸ್ಟಾರ್​’ ಚಿರಂಜೀವಿ ನಟನೆಯ ‘ಗಾಡ್​ ಫಾದರ್​’ (Godfather) ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನಟ ಸಲ್ಮಾನ್​ ಖಾನ್​ ಕೂಡ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ರಿಯಲ್​ ಲೈಫ್​ನಲ್ಲಿ ಚಿರಂಜೀವಿ ಮತ್ತು ಸಲ್ಮಾನ್​ ಖಾನ್​ (Salman Khan) ನಡುವೆ ಉತ್ತಮ ಸ್ನೇಹ ಇದೆ. ಈಗ ಅವರಿಬ್ಬರು ಜೊತೆಯಾಗಿ ನಟಿಸಿರುವುದರಿಂದ ಫ್ಯಾನ್ಸ್​ ವಲಯದಲ್ಲಿ ಹೈಪ್​ ಕ್ರಿಯೇಟ್​ ಆಗಿದೆ. ಹಾಗಿದ್ದರೂ ಕೂಡ ಒಂದು ವಿಚಾರಕ್ಕೆ ಈ ಸಿನಿಮಾವನ್ನು ಟ್ರೋಲ್​ (Troll) ಮಾಡಲಾಗುತ್ತಿದೆ. ‘ಗಾಡ್​ ಫಾದರ್​’ ಸಿನಿಮಾದಿಂದ ‘ಥಾರ್​ ಮಾರ್​ ಥಕ್ಕರ್​ ಮಾರ್​..’ ಸಾಂಗ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಪ್ರಚಾರಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಆದರೆ ಇದರ ಲಿರಿಕಲ್​ ವಿಡಿಯೋ ನೋಡಿದ ಅಭಿಮಾನಿಗಳಿಗೆ ಡ್ಯಾನ್ಸ್​ ಸ್ಟೆಪ್ಸ್​ ಇಷ್ಟ ಆಗಿಲ್ಲ.

ಖ್ಯಾತ ಕೊರಿಯೋಗ್ರಾಫರ್​ ಪ್ರಭುದೇವ ಅವರು ‘ಥಾರ್​ ಮಾರ್​ ಥಕ್ಕರ್​ ಮಾರ್​..’ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಡ್ಯಾನ್ಸ್​ ವಿಚಾರದಲ್ಲಿ ಪ್ರಭುದೇವ ಎಷ್ಟು ಫೇಮಸ್​ ಎಂಬುದು ಎಲ್ಲರಿಗೂ ಗೊತ್ತು. ಆದರೆ ‘ಥಾರ್​ ಮಾರ್​ ಥಕರ್​ ಮಾರ್​..’ ಹಾಡಿನಲ್ಲಿ ಅವರು ಯಾವುದೇ ಮ್ಯಾಜಿಕ್​ ಮಾಡಿಲ್ಲ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.

ಸದ್ಯಕ್ಕೆ ಬಿಡುಗಡೆ ಆಗಿರುವುದು ಲಿರಿಕಲ್​ ವಿಡಿಯೋ ಆದ್ದರಿಂದ ಹೆಚ್ಚಿನ ಸ್ಟೆಪ್ಸ್​ ರಿವೀಲ್​ ಆಗಿಲ್ಲ. ಕಾಣಿಸಿರುವ ಕೆಲವೇ ಸ್ಟೆಪ್ಸ್​ ಕೂಡ ಅಭಿಮಾನಿಗಳಿಗೆ ರುಚಿಸಿಲ್ಲ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಇದು ಚಿತ್ರಕ್ಕೆ ನೆಗೆಟಿವ್​ ಪರಿಣಾಮ ಬೀರಿದರೂ ಅಚ್ಚರಿ ಏನಿಲ್ಲ. ಪ್ರಭುದೇವ ಕೊರಿಯೋಗ್ರಫಿ ಮಾಡುತ್ತಾರೆ ಎಂದರೆ ನಿರೀಕ್ಷೆ ಹೆಚ್ಚುವುದು ಸಹಜ. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ‘ಥಾರ್​ ಮಾರ್​ ಥಕ್ಕರ್​ ಮಾರ್​..’ ಹಾಡು ವಿಫಲವಾಗಿದೆ.

ಇದನ್ನೂ ಓದಿ
Image
Megastar Chiranjeevi: ‘ಮೆಗಾ ಸ್ಟಾರ್​’ ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಗಾಡ್​ ಫಾದರ್​’ ಟೀಸರ್​; ಕೆಲವೇ ಗಂಟೆಗಳಲ್ಲಿ ಆದ ವೀಕ್ಷಣೆ ಎಷ್ಟು?
Image
Chiranjeevi: ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾಯಿಸಿಕೊಂಡ ‘ಮೆಗಾ ಸ್ಟಾರ್​’ ಚಿರಂಜೀವಿ; ಇದೆಲ್ಲಾ ವರ್ಕ್​ ಆಗತ್ತಾ?
Image
ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್​ ಚಿರಂಜೀವಿ; ಚಿಂತೆಗೊಳಗಾದ ಫ್ಯಾನ್ಸ್​
Image
ಚಿರಂಜೀವಿ ಸಿನಿಮಾ ರಿಜೆಕ್ಟ್​ ಮಾಡಿದ್ದ ಸಾಯಿ ಪಲ್ಲವಿ; ಖುಷಿಯಿಂದ ಥ್ಯಾಂಕ್ಸ್​ ಹೇಳಿದ ಮೆಗಾಸ್ಟಾರ್​

ವಿಡಿಯೋ ಸಾಂಗ್​ ಬಿಡುಗಡೆ ಆದ ಬಳಿಕ ಅದರಲ್ಲಿ ಯಾವ ರೀತಿ ಸ್ಟೆಪ್ಸ್​ ಇದೆ ಎಂಬುದನ್ನು ನೋಡಬೇಕು. ಇಲ್ಲವಾದರೆ ಚಿತ್ರಮಂದಿರದಲ್ಲೇ ಹಾಡು ನೋಡಿ ತಿಳಿಯಬೇಕು. ಅಕ್ಟೋಬರ್​ 5ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಡಿಫರೆಂಟ್​ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದಾರೆ. ಈ ವರ್ಷ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಸೋಲುಂಡಿತ್ತು. ಹಾಗಾಗಿ ‘ಗಾಡ್​ ಫಾದರ್​’ ಚಿತ್ರ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಇದು ಮಲಯಾಳಂನ ‘ಲೂಸಿಫರ್​’ ಸಿನಿಮಾದ ರಿಮೇಕ್​. ತೆಲುಗು ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಸಲ್ಮಾನ್​ ಖಾನ್​ ನಟಿಸಿರುವುದರಿಂದ ಉತ್ತರ ಭಾರತದ ಪ್ರೇಕ್ಷಕರಿಗೂ ಈ ಚಿತ್ರದ ಮೇಲೆ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Thu, 22 September 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು