Vivek Agnihotri: ‘ಹೇಳೋಕೆ ಏನೂ ಇಲ್ಲ’; ಆಸ್ಕರ್ಗೆ ‘ಕಾಶ್ಮೀರ್ ಫೈಲ್ಸ್’ ಆಯ್ಕೆ ಆಗದಿದ್ದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ
The Kashmir Files | Oscar Award: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ಚಿತ್ರದ ಆಸ್ಕರ್ ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲ ಆಗಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಮೂಡಿಬಂತು. ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು ಆ ಚಿತ್ರವನ್ನು ಹೊಗಳಿದರು. ಈ ಎಲ್ಲ ಕಾರಣದಿಂದ 95ನೇ ಸಾಲಿನ ಆಸ್ಕರ್ ಪ್ರಶಸ್ತಿಯ (Oscar Award) ಸ್ಪರ್ಧಾ ಕಣಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಅರ್ಹತೆ ಪಡೆಯಬಹುದು ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಯಿತು. ಈ ಕುರಿತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸಿನಿಮಾ ಆಸ್ಕರ್ಗೆ ಸೆಲೆಕ್ಟ್ ಆಗಿಲ್ಲ ಎಂಬ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರಿಗೆ ಹೆಚ್ಚೇನೂ ಬೇಸರ ಇಲ್ಲ. ಅವರು ‘ಚೆಲ್ಲೋ ಶೋ’ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಆಸ್ಕರ್ ಸ್ಪರ್ಧೆಗೆ ಭಾರತದಿಂದ ಆಯ್ಕೆ ಆದ ಚೆಲ್ಲೋ ಶೋ ಸಿನಿಮಾದ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. 2023ರ ಆಸ್ಕರ್ನಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಸಿಗಲಿ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಬೆಂಬಲ ನೀಡಿದ ಹಿತೈಷಿಗಳು ಮತ್ತು ಮಾಧ್ಯಮದವರಿಗೆ ನನ್ನ ಧನ್ಯವಾದಗಳು’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಎಲ್ಲ ಬೆಳವಣಿಗೆಗಳ ಬಗ್ಗೆ ‘ಹಿಂದುಸ್ತಾನ್ ಟೈಮ್ಸ್’ಗೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ‘ಹೇಳಲು ಏನೂ ಇಲ್ಲ. ಚೆಲ್ಲೋ ಶೋ ತಂಡಕ್ಕೆ ಶುಭ ಕೋರುತ್ತೇನೆ. ಸದ್ಯಕ್ಕೆ ನಾನು ಮುಂದಕ್ಕೆ ಬಂದು ಬೇರೆ ಸಿನಿಮಾ ಮಾಡುತ್ತಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸ್ವತಂತ್ರವಾಗಿ ಆಸ್ಕರ್ಗೆ ಕಳಿಸಬೇಕೋ ಬೇಡವೋ ಎಂಬುದು ನಿರ್ಮಾಪಕರಿಗೆ ಬಿಟ್ಟ ಬಿಚಾರ. ಅದರಿಂದ ನನಗೆ ಯಾವುದೇ ವ್ಯತ್ಯಾಸ ಎನಿಸುವುದಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
A big congratulations to the entire team of #LastFilmShow (Chhello Show) for being selected as India’s official entry. Wishing them the best film award at the #Oscars2023
I thank all the well wishers and specially media which was rooting for #TheKashmirFiles. ??? pic.twitter.com/nNjOe2Fv3D
— Vivek Ranjan Agnihotri (@vivekagnihotri) September 20, 2022
ಭಾರತದಿಂದ ಆಸ್ಕರ್ ರೇಸ್ಗೆ ಆಯ್ಕೆ ಆಗಬೇಕು ಎಂಬ ಪೈಪೋಟಿಯಲ್ಲಿ ಒಟ್ಟು 13 ಸಿನಿಮಾಗಳು ಇದ್ದವು. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಕೂಡ ಇತ್ತು. ಆದರೆ ಆ ಸಿನಿಮಾ ಆಯ್ಕೆ ಆಗಿಲ್ಲ. ಆ ಬಗ್ಗೆ ಕೆಲವರಿಗೆ ಬೇಸರ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.