‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್​? ರಶ್ಮಿಕಾ, ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಹೊಸ ಗುಸುಗುಸು

Samantha: ನಾಗ ಚೈನತ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಸಮಂತಾ ಆಯ್ಕೆಗಳು ಬದಲಾಗಿವೆ. ಸಿನಿಮಾ ವಿಚಾರದಲ್ಲಿ ಅವರು ಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್​? ರಶ್ಮಿಕಾ, ಅಲ್ಲು ಅರ್ಜುನ್​ ಸಿನಿಮಾ ಬಗ್ಗೆ ಹೊಸ ಗುಸುಗುಸು
ಸಮಂತಾ, ರಶ್ಮಿಕಾ ಮಂದಣ್ಣ
Follow us
| Edited By: ಮದನ್​ ಕುಮಾರ್​

Updated on: Nov 14, 2021 | 1:24 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಪುಷ್ಪ’ (Pushpa Movie) ಕೂಡ ಮುಂಚೂಣಿಯಲ್ಲಿದೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅಲ್ಲು ಅರ್ಜುನ್​ (Allu Arjun) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಡಿ.17ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಪುಷ್ಪ’ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬುದು ಕೂಡ ಗೊತ್ತಾಗಿದೆ. ಆದರೆ ಒಂದು ವಿಚಾರವನ್ನು ಮಾತ್ರ ಚಿತ್ರತಂಡ ಗುಟ್ಟಾಗಿಯೇ ಉಳಿಸಿದೆ. ‘ಪುಷ್ಪ’ ಚಿತ್ರದಲ್ಲಿ ಒಂದು ಐಟಂ ಸಾಂಗ್​ ಇರಲಿದೆ. ಆ ಹಾಡಿನಲ್ಲಿ ಯಾವ ನಟಿ ಡ್ಯಾನ್ಸ್​ ಮಾಡುತ್ತಾರೆ ಎಂಬುದು ಎಲ್ಲಿಯೂ ಬಹಿರಂಗ ಆಗಿಲ್ಲ. ಟಾಲಿವುಡ್​ ಅಂಗಳದಿಂದ ಹೊಸ ಗಾಸಿಪ್​ ಹಬ್ಬಿದ್ದು, ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಸಮಂತಾ (Samantha) ಹೆಜ್ಜೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ.

ನಾಗ ಚೈನತ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಸಮಂತಾ ಆಯ್ಕೆಗಳು ಬದಲಾಗಿವೆ. ಸಿನಿಮಾ ವಿಚಾರದಲ್ಲಿ ಅವರು ಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡಲು ಅವರು ಒಪ್ಪಿಕೊಂಡಿದ್ದಾರೆ ಎಂಬ ಗಾಸಿಪ್​ ಕೇಳಿಬಂದಿದೆ. ಈ ಬಗ್ಗೆ ನಿರ್ದೇಶಕ ಸುಕುಮಾರ್​ ಅವರಾಗಲಿ, ಸಮಂತಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸುಕುಮಾರ್ ಮತ್ತು ಸಮಂತಾ ನಡುವೆ ಉತ್ತಮ ಒಡನಾಟ ಇದೆ. ಈ ಹಿಂದೆ ಸುಕುಮಾರ್​ ನಿರ್ದೇಶನ ಮಾಡಿದ್ದ ‘ರಂಗಸ್ಥಲಂ’ ಸಿನಿಮಾದಲ್ಲಿ ಸಮಂತಾ ಹೀರೋಯಿನ್​ ಆಗಿದ್ದರು. ಈಗ ‘ಪುಷ್ಪ’ ಚಿತ್ರದಲ್ಲಿ ಐಟಂ ಡ್ಯಾನ್ಸ್​ ಮಾಡುವಂತೆ ಸುಕುಮಾರ್​ ಕೇಳಿಕೊಂಡರೆ ಸಮಂತಾ ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂಬುದು ಗಾಸಿಪ್​ ಮಂದಿಯ ವಾದ.

ಈ ಮೊದಲು ಇದೇ ಹಾಡಿಗಾಗಿ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಮತ್ತು ತೆಲುಗು ಬೆಡಗಿ ಪೂಜಾ ಹೆಗ್ಡೆ ಅವರಿಗೆ ಆಫರ್​ ನೀಡಲಾಗಿತ್ತು ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಯಾವುದರ ಬಗ್ಗೆಯೂ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಒಂದು ಮೂಲದ ಪ್ರಕಾರ ಬಾಲಿವುಡ್ ನಟಿ​ಯೊಬ್ಬರು ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಅಂತೆ-ಕಂತೆಗಳಿಗೆ ‘ಪುಷ್ಪ’ ಚಿತ್ರತಂಡದವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಸಿನಿಮಾ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್​ ಮಾತ್ರ ಬಿಡುಗಡೆ ಆಗುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಮತ್ತು ಟೀಸರ್​ಗಳು ಭಾರಿ ಹೈಪ್ ಸೃಷ್ಟಿ ಮಾಡಿವೆ.

ಇದನ್ನೂ ಓದಿ:

ರಶ್ಮಿಕಾ ಕೈ ಚರ್ಮದ ಬಣ್ಣ ಚೇಂಜ್​ ಆಗಿದ್ದೇಕೆ? ಪರದೆ ಹಿಂದಿನ ಕಹಾನಿ ಬಿಚ್ಚಿಟ್ಟ ಒಂದು ಫೋಟೋ

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

ತಾಜಾ ಸುದ್ದಿ
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್