ಮುಖಕ್ಕೆ ಪರದೆ ಹಾಕಿಕೊಂಡು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ ಮಹಿಳೆಯರು: ಕಾರಣ?

Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು ಪವನ್ ಕಲ್ಯಾಣ್ ಅಭಿಮಾನಿಗಳು ಅದ್ಧೂರಿಯಾಗಿ ಸಿನಿಮಾ ಅನ್ನು ಸ್ವಾಗತಿಸಿದ್ದಾರೆ. ಆದರೆ ಮಹಿಳೆಯರ ಗುಂಪೊಂದು ಮುಖಕ್ಕೆ ಪರದೆ ಹಾಕಿಕೊಂಡು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ್ದಾರೆ. ಮಹಿಳೆಯರು ಹೀಗೆ ಮಾಡಿದ್ದಕ್ಕೆ ಕಾರಣವೇನು?

ಮುಖಕ್ಕೆ ಪರದೆ ಹಾಕಿಕೊಂಡು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ ಮಹಿಳೆಯರು: ಕಾರಣ?
Hari Hara Veera Mallu

Updated on: Jul 25, 2025 | 10:55 AM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿನ್ನೆ (ಜುಲೈ 24) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಸಿನಿಮಾ ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿದೆ. ವರ್ಷಗಳ ಬಳಿಕ ಪವನ್ ಕಲ್ಯಾಣ್ ತೆರೆಯ ಮೇಲೆ ಕಾಣಿಸಿಕೊಂಡಿರುವ ಕಾರಣ ಸಹಜವಾಗಿಯೇ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾ ಅನ್ನು ಬರಮಾಡಿಕೊಂಡಿದ್ದಾರೆ. ಪವನ್ ಅವರ ರಾಜಕೀಯ ಪಕ್ಷದ ಧ್ವಜ ಹಿಡಿದು, ಕೆಂಪು ಟವೆಲ್ ಹೆಗಲ ಮೇಲೆ ಹಾಕಿಕೊಂಡು ಹೀಗೆ ನಾನಾ ವಿಧವಾಗಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ.

ಆದರೆ ಕೆಲವು ಮಹಿಳೆಯರು ಮುಖಕ್ಕೆ ಪರದೆ ಹಾಕಿಕೊಂಡು ಬಂದು ಮೊದಲ ದಿನ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ. ಕೆಂಪು ಬಣ್ಣದ ಪರದೆಗಳನ್ನು ಮುಖಕ್ಕೆ ಹಾಕಿಕೊಂಡು ಒಟ್ಟಿಗೆ ಚಿತ್ರಮಂದಿರಕ್ಕೆ ಬಂದು, ಇಡೀ ಸಿನಿಮಾ ಅನ್ನು ಪರದೆ ಧರಿಸಿಯೇ ಸಿನಿಮಾ ನೋಡಿದ್ದಾರೆ ಮಹಿಳೆಯರು. ಹೀಗೆ ಮಹಿಳೆಯರು ಪರದೆ ಹಾಕಿಕೊಂಡು ಸಿನಿಮಾ ನೋಡಿರುವ ಚಿತ್ರ, ವಿಡಿಯೋ ವೈರಲ್ ಆಗಿದ್ದು, ಮಹಿಳೆಯರು ಹೀಗೇಕೆ ಮಾಡಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.

ಮಹಿಳೆಯರು ಪ್ರತಿಭಟನೆಯ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ಹಾಗೇನೂ ಇಲ್ಲ. ಸಿನಿಮಾ ಒಂದರ ಪ್ರಚಾರಕ್ಕಾಗಿ ಚಿತ್ರತಂಡವೇ ಹೀಗೆ ಪರದೆ ಹಾಕಿಕೊಂಡು ಬಂದು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ್ದಾರೆ. ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ‘ಪರದ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾದ ಪ್ರಚಾರಕ್ಕಾಗಿ ಈಗ ಕೆಲ ಮಹಿಳೆಯರು ಪರದೆ ಧರಿಸಿ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ:ನಿಧಿ ಅಗರ್ವಾಲ್​ ಅದೃಷ್ಟ ತಂದುಕೊಡುತ್ತಾ ‘ಹರಿ ಹರ ವೀರ ಮಲ್ಲು’

ಕೆಲ ವರ್ಷಗಳ ಹಿಂದೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿ ಜನಪ್ರೇಮ ಗಳಿಸಿದ್ದ ‘ಸಿನಿಮಾ ಬಂಡಿ’ ಸಿನಿಮಾದ ನಿರ್ದೇಶಕ ಪ್ರವೀಣ್ ಕಂದ್ರೆಗುಲಾ ‘ಪರದ’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಮಹಿಳೆಯರ ಸ್ವಾತಂತ್ರ್ಯದ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಆಗಸ್ಟ್ 22 ರಂದು ತೆರೆಗೆ ಬರಲಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಆರಂಭಿಸಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾದ ಮೂಲಕ ಭಿನ್ನವಾಗಿ ‘ಪರದ’ ಚಿತ್ರತಂಡ ಸಿನಿಮಾ ತಮ್ಮ ಸಿನಿಮಾದ ಪ್ರಚಾರವನ್ನು ಮಾಡಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ