AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್​ ಬಾಬು ಕೆನ್ನೆಗೆ ಮುತ್ತಿಟ್ಟ ಶ್ರೀಲೀಲಾ; ‘ಗುಂಟೂರು ಖಾರಂ’ ಚಿತ್ರದಿಂದ ಸಿಗಲಿದೆ ಇನ್ನಷ್ಟು ಸರ್ಪ್ರೈಸ್​

ಕನ್ನಡದ ಹುಡುಗಿ ಶ್ರೀಲೀಲಾ ಅವರು ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಅಲ್ಲಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ರಶ್ಮಿಕಾ ಮಂದಣ್ಣ ರೀತಿಯೇ ಟಾಲಿವುಡ್​ನಲ್ಲಿ ಸ್ಟಾರ್​ ಹೀರೋಯಿನ್​ ಆಗಿ ಶ್ರೀಲೀಲಾ ಗಮನ ಸೆಳೆಯುತ್ತಿದ್ದಾರೆ. ‘ಗುಂಟೂರು ಖಾರಂ’ ಸಿನಿಮಾದಲ್ಲಿ ಅವರು ಮಹೇಶ್​ ಬಾಬು ಜೊತೆ ನಟಿಸಿದ್ದಾರೆ.

ಮಹೇಶ್​ ಬಾಬು ಕೆನ್ನೆಗೆ ಮುತ್ತಿಟ್ಟ ಶ್ರೀಲೀಲಾ; ‘ಗುಂಟೂರು ಖಾರಂ’ ಚಿತ್ರದಿಂದ ಸಿಗಲಿದೆ ಇನ್ನಷ್ಟು ಸರ್ಪ್ರೈಸ್​
ಮಹೇಶ್​ ಬಾಬು, ಶ್ರೀಲೀಲಾ
ಮದನ್​ ಕುಮಾರ್​
|

Updated on: Dec 10, 2023 | 7:56 AM

Share

ಟಾಲಿವುಡ್​ ನಟ ಮಹೇಶ್​ ಬಾಬು ಅಭಿನಯದ ‘ಗುಂಟೂರು ಖಾರಂ’ (Guntur Kaaram) ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಹಾಗಾಗಿ ಈ ಸಿನಿಮಾಗೆ ಭರ್ಜರಿಯಾಗಿ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಅನಾವರಣ ಆಗಿರುವ ಪೋಸ್ಟರ್​ಗಳು ಗಮನ ಸೆಳೆದಿವೆ. ಈ ಚಿತ್ರದಲ್ಲಿ ಮಹೇಶ್​ ಬಾಬು (Mahesh Babu) ಜೊತೆ ಕನ್ನಡದ ನಟಿ ಶ್ರೀಲೀಲಾ ಅವರು ಅಭಿನಯಿಸಿದ್ದಾರೆ. ಮಹೇಶ್​ ಬಾಬು ಅವರ ಕೆನ್ನೆಗೆ ಶ್ರೀಲೀಲಾ (Sreeleela) ಮುತ್ತಿಡುತ್ತಿರುವ ಪೋಸ್ಟರ್​ ವೈರಲ್​ ಆಗಿದೆ. ಅಭಿಮಾನಿಗಳಿಗಾಗಿ ಈ ಸಿನಿಮಾದಿಂದ ಇನ್ನಷ್ಟು ಸರ್ಪ್ರೈಸ್​ ಸಿಗಲಿವೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

‘ಗುಂಟೂರು ಖಾರಂ’ ಸಿನಿಮಾ ಸಖತ್​ ಮಾಸ್​ ಆಗಿ ಮೂಡಿಬರಲಿದೆ. ಅದಕ್ಕೆ ಮಹೇಶ್​ ಬಾಬು ಅವರ ಫಸ್ಟ್​ ಲುಕ್ ಪೋಸ್ಟರ್ ಸಾಕ್ಷಿ. ಮಾಸ್​ ಅಂಶಗಳ ಜೊತೆ ಪ್ರೀತಿ-ಪ್ರೇಮಕ್ಕೂ ಈ ಸಿನಿಮಾದಲ್ಲಿ ಜಾಗ ಇರಲಿದೆ. ಈ ಚಿತ್ರದಿಂದ ಎರಡನೇ ಹಾಡು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಆ ಬಗ್ಗೆ ‘ಗುಂಟೂರು ಖಾರಂ’ ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ.

View this post on Instagram

A post shared by Sreeleela (@sreeleela14)

ಬಹುನಿರೀಕ್ಷಿತ ‘ಗುಂಟೂರು ಖಾರಂ’ ಸಿನಿಮಾದಿಂದ ‘ಓಹ್​ ಮೈ ಬೇಬಿ..’ ಎಂಬ ಹಾಡನ್ನು ರಿಲೀಸ್​ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದನ್ನು ತಿಳಿಸುವ ಸಲುವಾಗಿ ಶ್ರೀಲೀಲಾ ಕೂಡ ಒಂದು ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದರಲ್ಲಿ ಮಹೇಶ್​ ಬಾಬು ಕೆನ್ನೆಗೆ ಶ್ರೀಲೀಲಾ ಅವರು ಕಿಸ್​ ಮಾಡುತ್ತಿರುವ ದೃಶ್ಯ ಇದೆ. ಈ ಹಾಡಿನ ಪ್ರೋಮೋ ಡಿಸೆಂಬರ್​ 11ರಂದು ಸಂಜೆ 4 ಗಂಟೆಗೆ ಬಿಡುಗಡೆ ಆಗಲಿದೆ. ಪೂರ್ತಿ ಹಾಡು ಡಿಸೆಂಬರ್​ 13ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ನಟಿ ಶ್ರೀಲೀಲಾ?

ಕನ್ನಡದ ಹುಡುಗಿ ಶ್ರೀಲೀಲಾ ಅವರು ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಅಲ್ಲಿ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ರಶ್ಮಿಕಾ ಮಂದಣ್ಣ ರೀತಿಯೇ ಟಾಲಿವುಡ್​ನಲ್ಲಿ ಸ್ಟಾರ್​ ಹೀರೋಯಿನ್​ ಆಗಿ ಶ್ರೀಲೀಲಾ ಗಮನ ಸೆಳೆಯುತ್ತಿದ್ದಾರೆ. ಅವರು ನಟಿಸಿರುವ ‘ಗುಂಟೂರು ಖಾರಂ’ ಸಿನಿಮಾ 2024ರ ಜನವರಿ 12ರಂದು ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ