250 ಕೋಟಿ ರೂಪಾಯಿ ಕಲೆಕ್ಷನ್​; ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಾಧನೆ

ಜಾಗತಿಕ ಮಾರುಕಟ್ಟೆಯಲ್ಲಿ ‘ಹನುಮಾನ್​’ ಸಿನಿಮಾಗೆ 250 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂಬ ಮಾಹಿತಿಯನ್ನು ಸ್ವತಃ ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್​ ಶೇರ್​ ಮಾಡಿಕೊಳ್ಳುವ ಮೂಲಕ ನಟ ತೇಜ ಸಜ್ಜಾ, ನಿರ್ದೇಶಕ ಪ್ರಶಾಂತ್​ ವರ್ಮಾ ಅವರು ಸಂಭ್ರಮಿಸಿದ್ದಾರೆ. ಈ ಸಿನಿಮಾದಲ್ಲಿ ‘ಹನುಮಾನ್​’ ಸಿನಿಮಾ ಕನ್ನಡಕ್ಕೂ ಡಬ್​ ಆಗಿ ತೆರೆಕಂಡಿದೆ.

250 ಕೋಟಿ ರೂಪಾಯಿ ಕಲೆಕ್ಷನ್​; ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಾಧನೆ
ಹನುಮಾನ್​ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jan 27, 2024 | 6:11 PM

ಯುವ ನಟ ತೇಜ ಸಜ್ಜಾ (Teja Sajja) ಅಭಿನಯದ ‘ಹನುಮಾನ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕಳೆದ ವರ್ಷ ಈ ಸಿನಿಮಾದ ಟೀಸರ್​ ಬಿಡುಗಡೆ ಆದಾಗಲೇ ಜನರು ವಾವ್​ ಎಂದಿದ್ದರು. ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಕಂಡಿತು. ಪೇಯ್ಡ್​ ಪ್ರೀಮಿಯರ್​ನಲ್ಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ಹನುಮಾನ್​’ ಚಿತ್ರ (Hanuman Movie) ಬಿಡುಗಡೆ ಆಯಿತು. ಜನವರಿ 12ರಂದು ರಿಲೀಸ್​ ಆದ ಈ ಸಿನಿಮಾ 14 ದಿನಕ್ಕೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್​ (Hanuman Collection) ಮಾಡಿದೆ. ಆ ಮೂಲಕ ದೊಡ್ಡ ಸಾಧನೆ ಮಾಡಿದೆ.

ಸೂಪರ್​ ಹೀರೋ ಕಾನ್ಸೆಪ್ಟ್​ ‘ಹನುಮಾನ್​’ ಸಿನಿಮಾದಲ್ಲಿದೆ. ಹನುಮಂತನ ದಯೆಯಿಂದ ಸೂಪರ್​ ಪವರ್​ ಪಡೆಯುವ ಸಾಮಾನ್ಯ ಹಳ್ಳಿ ಹುಡುಗನ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಘಟನೆಗಳನ್ನು ನಿರ್ದೇಶಕ ಪ್ರಶಾಂತ್​ ವರ್ಮಾ ಅವರು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ: ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ‘ಶ್ರೀ ರಾಮ್, ಜೈ ಹನುಮಾನ್’ ಸಿನಿಮಾ ಅನೌನ್ಸ್; ಗಮನ ಸೆಳೆದ ಪೋಸ್ಟರ್

ಸಂಕ್ರಾಂತಿ ಹಬ್ಬದಲ್ಲಿ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳು ಬಿಡುಗಡೆ ಆದವು. ‘ಗುಂಟೂರು ಖಾರಂ’, ‘ನಾ ಸಾಮಿ ರಂಗ’, ‘ಕ್ಯಾಪ್ಟನ್​ ಮಿಲ್ಲರ್​’ ಮುಂತಾದ ಚಿತ್ರಗಳು ತೆರೆಕಂಡಿದ್ದವು. ಅವುಗಳ ಜೊತೆ ‘ಹನುಮಾನ್​’ ಸಿನಿಮಾ ಪೈಪೋಟಿಗೆ ಇಳಿಯಿತು. ಸ್ಟಾರ್​ ನಟರ ಸಿನಿಮಾಗಳಿಗಿಂತಲೂ ತೇಜ ಸಜ್ಜಾ ನಟನೆಯ ‘ಹನುಮಾನ್​’ ಸಿನಿಮಾಗೆ ಪ್ರೇಕ್ಷಕರಿಂದ ಹೆಚ್ಚು ಬೆಂಬಲ ಸಿಕ್ಕಿತು. ಅದರ ಪರಿಣಾಮವಾಗಿ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ‘ಹನುಮಾನ್​’ ಸಿನಿಮಾಗೆ 250 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂಬ ಮಾಹಿತಿಯನ್ನು ಸ್ವತಃ ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್​ ಶೇರ್​ ಮಾಡಿಕೊಳ್ಳುವ ಮೂಲಕ ನಟ ತೇಜ ಸಜ್ಜಾ, ನಿರ್ದೇಶಕ ಪ್ರಶಾಂತ್​ ವರ್ಮಾ ಅವರು ಸಂಭ್ರಮಿಸಿದ್ದಾರೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್​ ಅವರು ನಾಯಕಿಯಾಗಿ ನಟಿಸಿದ್ದಾರೆ. ವಿನಯ್​ ರೈ, ವರಲಕ್ಷ್ಮೀ ಶರತ್​ಕುಮಾರ್, ರಾಜ್​ ದೀಪಕ್​ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡಕ್ಕೂ ಡಬ್​ ಆಗಿ ತೆರೆಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ