AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್’ ಸಿನಿಮಾದ ಸೀಕ್ವೆಲ್​ಗೆ ಸ್ಕ್ರಿಪ್ಟ್ ಪೂಜೆ; ಪ್ರಾಣ ಪ್ರತಿಷ್ಠಾಪನೆ ದಿನ ಒಳ್ಳೆಯ ಕಾರ್ಯ

ತೇಜ ಸಜ್ಜಾ ನಟನೆಯ, ಪ್ರಶಾಂತ್ ವರ್ಮಾ ನಿರ್ದೇಶನದ ‘ಹನುಮಾನ್’ ಸಿನಿಮಾ ಜನವರಿ 12ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

‘ಹನುಮಾನ್’ ಸಿನಿಮಾದ ಸೀಕ್ವೆಲ್​ಗೆ ಸ್ಕ್ರಿಪ್ಟ್ ಪೂಜೆ; ಪ್ರಾಣ ಪ್ರತಿಷ್ಠಾಪನೆ ದಿನ ಒಳ್ಳೆಯ ಕಾರ್ಯ
ಜೈ ಹನುಮಾನ್
ರಾಜೇಶ್ ದುಗ್ಗುಮನೆ
|

Updated on: Jan 23, 2024 | 8:30 AM

Share

ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ರಂದು ಅದ್ದೂರಿಯಾಗಿ ನೆರವೇರಿದೆ. ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಸಾಕ್ಷಿ ಆಯಿತು. ಈ ಶುಭ ದಿನದಂದು ರಾಮಾಯಣಕ್ಕೆ ಸಂಬಂಧಿಸಿದ ಸಿನಿಮಾಗಳು ಸೆಟ್ಟೇರಿವೆ. ‘ಶ್ರೀ ರಾಮ್ ಜೈ ಹನುಮಾನ್’ ಹೆಸರಿನ ಸಿನಿಮಾ ಸೆಟ್ಟೇರಿತ್ತು. ಅದೇ ರೀತಿ ‘ಹನುಮಾನ್’ (Hanuman Movie) ಚಿತ್ರದ ಸೀಕ್ವೆಲ್ ‘ಜೈ ಹನುಮಾನ್’ ಸ್ಕ್ರಿಪ್ಟ್ ಪೂಜೆ ನಡೆದಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಸೀಕ್ವೆಲ್ ಬಗ್ಗೆ ಆಸಕ್ತಿ ತೋರಿಸಿದ್ದಾರೆ.

ಪ್ರಶಾಂತ್ ವರ್ಮಾ ನಿರ್ದೇಶನದ, ತೇಜ ಸಜ್ಜಾ ನಟನೆಯ ‘ಹನುಮಾನ್’ ಸಿನಿಮಾ ಜನವರಿ 12ರಂದು ರಿಲೀಸ್ ಆಯಿತು. ವರಲಕ್ಷ್ಮಿ ಶರತ್‌ಕುಮಾರ್, ಕನ್ನಡದ ನಟಿ ಅಮೃತ ಅಯ್ಯರ್ ಮತ್ತು ವಿನಯ್ ರೈ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ನಿರ್ದೇಕರು ‘ಜೈ ಹನುಮಾನ್’ ಚಿತ್ರದ ಕೆಲಸ ಆರಂಭಿಸಿದ್ದಾರೆ.

‘ಹನುಮಾನ್’ ಸಿನಿಮಾ ಮೂಲಕ ನಿರ್ದೇಶಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಖ್ಯಾತಿ ಪಡೆದಿದ್ದಾರೆ. ಈಗ ರೆಡಿ ಆಗುತ್ತಿರುವ ಸಿನಿಮಾ ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ಅಡಿಯಲ್ಲಿ ಸಿದ್ಧವಾಗಲಿದೆ. ಈಗಾಗಲೇ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ ಮಾಡಲಾಗಿದೆ. ಹೈದರಾಬಾದ್‌ನ ಹನುಮಾನ್ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ತಂಡ ಮಾಹಿತಿ ನೀಡಲಿದೆ.

‘ಹನುಮಾನ್’ ಕಥೆ

ಒಂದು ಗ್ರಾಮದ ಸಾಮಾನ್ಯ ವ್ಯಕ್ತಿಗೆ ಹನುಮಂತನಿಂದ ಸೂಪರ್ ಪವರ್ ಸಿಗುತ್ತದೆ. ಇದರಿಂದ ಅವನು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಾನೆ. ಈ ಚಿತ್ರ ಸಂಕ್ರಾಂತಿ ಸಂದರ್ಭದಲ್ಲೇ ರಿಲೀಸ್ ಆಗಿದ್ದರಿಂದ ಜನರು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದರು. ಈ ಸಿನಿಮಾ ಮೂಲಕ ತೇಜ ಸಜ್ಜಾ ಗೆಲುವಿನ ನಗೆ ಬೀರಿದರು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಪೂರ್ಣಗೊಳ್ಳಲು ಇನ್ನೆಷ್ಟು ಕೆಲಸ ಬಾಕಿ ಇವೆ? ಇಲ್ಲಿದೆ ಮಾಹಿತಿ

ರಾಮ ಮಂದಿರಕ್ಕೆ ಹಣ

ಮಾರಾಟವಾಗುವ ಪ್ರತಿ ಟಿಕೆಟ್​ ಮೇಲೆ ಐದು ರೂಪಾಯಿ ಹಣವನ್ನು ರಾಮ ಮಂದಿರಕ್ಕೆ ನೀಡಲಾಗುವುದು ಎಂದು ತಂಡ ಘೋಷಣೆ ಮಾಡಿತ್ತು. ಈ ಸಿನಿಮಾದ 53.28 ಲಕ್ಷ ಟಿಕೆಟ್​ಗಳು ಮಾರಾಟ ಆಗಿವೆ. ಈ ಮೂಲಕ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ. ಇದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ