AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಯಲ್ಲಿ ಸಿನಿಮಾ ಇಲ್ಲ, ಬಡಾಯಿಗೆ ಬರವೇ ಇಲ್ಲ: ನಟಿ ಹೇಮಾ ಕೊಲ್ಲ ಕತೆ ಕೇಳಿ

Hema Kolla: ತೆಲುಗಿನ ಜನಪ್ರಿಯ ಪೋಷಕ ನಟಿ, ಹಾಸ್ಯ ನಟಿ ಆಗಿದ್ದ ಹೇಮಾ ಕೊಲ್ಲಗೆ ಈಗ ಅವಕಾಶಗಳೇ ಇಲ್ಲದಾಗಿವೆ. ಬೆಂಗಳೂರಿನ ಘಟನೆ ಅವರ ವೃತ್ತಿ ಬದುಕನ್ನೇ ಬದಲಾಯಿಸಿದೆ. ಏನೇ ಆದರು ಹೇಮಾ ಕೊಲ್ಲ ಅವರ ಆಟಿಟ್ಯೂಡ್ ಬದಲಾಗಿಲ್ಲ. ತೆಲುಗು ಚಿತ್ರರಂಗದ ಸ್ಟಾರ್ ನಟರುಗಳೆಲ್ಲ ತಮ್ಮ ಬಲು ಆಪ್ತರು ಎಂದು ಹೇಮಾ ಹೇಳಿಕೊಂಡಿರುವುದು ಇದೀಗ ಟ್ರೋಲ್ ಆಗುತ್ತಿದೆ.

ಕೈಯಲ್ಲಿ ಸಿನಿಮಾ ಇಲ್ಲ, ಬಡಾಯಿಗೆ ಬರವೇ ಇಲ್ಲ: ನಟಿ ಹೇಮಾ ಕೊಲ್ಲ ಕತೆ ಕೇಳಿ
Hema Kolla
ಮಂಜುನಾಥ ಸಿ.
|

Updated on: Jan 16, 2026 | 9:16 AM

Share

ಹೇಮಾ ಕೊಲ್ಲ (Hema Kolla), ತೆಲುಗು ಚಿತ್ರರಂಗದ ಬಲು ಬ್ಯುಸಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದವರು. ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರಗಳಲ್ಲಿ ಹೇಮಾ ಕೊಲ್ಲ ನಟಿಸಿದ್ದಾರೆ. ಬ್ರಹ್ಮಾನಂದಂ ಜೊತೆಗೆ ಹೇಮಾ ನಟಿಸಿರುವ ಕೆಲ ಸಿನಿಮಾಗಳ ದೃಶ್ಯಗಳು ತೆಲುಗು ಪ್ರೇಕ್ಷಕರ ಫೇವರೇಟ್ ಆಗಿವೆ. ಆದರೆ 2024ರ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಅವರ ವೃತ್ತಿ ಜೀವನವನ್ನು ಬದಲಾಯಿಸಿತು. ಈಗ ಹೇಮಾ ಕೈಯಲ್ಲಿ ಸಿನಿಮಾಗಳಿಲ್ಲ, ಆದರೆ ಅವರ ಬಡಾಯಿ ಮಾತ್ರ ಕಡಿಮೆ ಆಗಿಲ್ಲ, ಜೂ ಎನ್​​ಟಿಆರ್, ಬಾಲಕೃಷ್ಣ, ನಾಗಾರ್ಜುನ ಇನ್ನೂ ಕೆಲವು ದೊಡ್ಡ ಸೆಲೆಬ್ರಿಟಿಗಳ ಬಗ್ಗೆ ಹೇಮಾ ಕೊಲ್ಲ ಇದೀಗ ಮಾತನಾಡಿದ್ದಾರೆ.

ಬೆಂಗಳೂರಿನ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹೇಮಾ ಕೊಲ್ಲ ಕೆಲ ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು. ಈಗ ಪ್ರಕರಣದಿಂದ ಮುಕ್ತಿ ಪಡೆದಿದ್ದಾರಾದರೂ ಅವರಿಗೆ ಅವಕಾಶಗಳು ಇಲ್ಲವಾಗಿವೆ. ಆದರೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹೇಮಾ ಕೊಲ್ಲ, ತಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು.

ಇದೀಗ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿರುವ ಹೇಮಾ, ಫೋನ್ ಮಾಡಿದರೆ ಜೂ ಎನ್​​ಟಿಆರ್ ಮನೆಗೆ ಬರುತ್ತಾರೆ, ಅಕ್ಕಿನೇನಿ ನಾಗಾರ್ಜುನ ನನ್ನ ಆಪ್ತ, ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ನನಗೆ ಫೋನ್ ಮಾಡುತ್ತಾರೆ ಎಂದೆಲ್ಲ ಹೇಳಿಕೊಂಡಿದ್ದಾರೆ. ‘ನಿರ್ದೇಶಖ ತ್ರಿವಿಕ್ರಮ್ ಶ್ರೀನಿವಾಸ್ ಅವರು ನನ್ನ ಗಾಡ್​ಫಾದರ್ ನಾನು ಜೀವನದಲ್ಲಿ ಏನೇ ಸಮಸ್ಯೆ ಬಂದರು ಅವರನ್ನು ಭೇಟಿ ಆಗಿ ಚರ್ಚೆ ಮಾಡುತ್ತೀನಿ’ ಎಂದಿದ್ದಾರೆ ಹೇಮಾ ಕೊಲ್ಲ.

ಇದನ್ನೂ ಓದಿ:ಚಿತ್ರರಂಗಕ್ಕೆ ಗುಡ್ ಬೈ ಹೇಳಿದೆ ಬೆಂಗಳೂರು ಡ್ರಗ್ಸ್ ಪ್ರಕರಣ ಆರೋಪಿ ನಟಿ ಹೇಮಾ: ಕಾರಣ?

ಅಷ್ಟು ಮಾತ್ರವಲ್ಲದೆ, ‘ಒಮ್ಮೆ ಜೂ ಎನ್​​ಟಿಆರ್ ಅವರನ್ನು ನೋಡಲು ಮನಸ್ಸಾಗಿ ಅವರ ಮ್ಯಾನೇಜರ್​​ಗೆ ಹೇಳಿದ್ದಷ್ಟೆ ಜೂ ಎನ್​​ಟಿಆರ್ ಸ್ವತಃ ನನ್ನ ಮನೆಗೆ ಬಂದಿದ್ದರು. ಇನ್ನು ಬಾಲಕೃಷ್ಣ ಸಹ ನನ್ನ ಮನೆಗೆ ಬಂದು ಮಗಳಿಗೆ ಆಶೀರ್ವಾದ ಮಾಡಿದ್ದರು. ಇನ್ನು ನಾಗಾರ್ಜುನ ಬಳಿ ನಾನು ವ್ಯಾಪಾರ-ವ್ಯವಹಾರಗಳ ವಿಷಯ ಹೆಚ್ಚು ಮಾತನಾಡುತ್ತೀನಿ. ಅದು ಮಾತ್ರವಲ್ಲದೆ ತೆಲುಗು ಚಿತ್ರರಂಗದ ಲಿಜೆಂಡರಿ ನಿರ್ದೇಶಕ ಕೆ ರಾಘವೇಂದ್ರ ರಾವ್ ನನಗೆ ಕರೆ ಮಾಡಿ ಐಸ್​​ಬಾತ್, ಡೊಪೊಮಿನ್ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡುವ ನನ್ನ ಧೈರ್ಯವನ್ನು ಹೊಗಳಿದ್ದರು. ನನ್ನ ವಿರುದ್ಧ ದಾಖಲಾಗಿದ್ದ ಡ್ರಗ್ಸ್ ಕೇಸ್​​ನಲ್ಲಿ ಕ್ಲೀನ್ ಚಿಟ್ ಪಡೆದಿದ್ದಕ್ಕೆ ಅಭಿನಂದಿಸಿದ್ದರು’ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಹೇಮಾ ಕೊಲ್ಲ, ‘ನನಗೆ ತೆಲುಗು ಚಿತ್ರರಂಗದ ಬಹುತೇಕ ಎಲ್ಲ ನಟರೊಟ್ಟಿಗೆ ಆತ್ಮೀಯ ನಂಟು ಇದೆ. ನಾಗಾರ್ಜುನ, ಬಾಲಕೃಷ್ಣ ಅವರುಗಳನ್ನು ಬಾಬು ಎಂದು ಕರೆಯುತ್ತೀನಿ, ಸೂಪರ್ ಸ್ಟಾರ್ ಮಹೇಶ್ ಬಾಬು ಅವರನ್ನು ಮಹಿ ಎಂದು ಕರೆಯುತ್ತೀನಿ, ಪ್ರಭಾಸ್ ಅವರನ್ನ ಡಾರ್ಲಿಂಗ್ ಎಂದೇ ಕರೆಯುತ್ತೀನಿ ಎಂದಿದ್ದಾರೆ. ಅಲ್ಲದೆ, ಪ್ರಭಾಸ್ ಅವರ ಆಪ್ತ ಸಂಬಂಧಿ ನನ್ನ ಆತ್ಮೀಯ ಗೆಳೆಯ ಆಗಿದ್ದು, ನಾನು ಯಾವಾಗ ಬೇಕಿದ್ದರೂ ಹೋಗಿ ಪ್ರಭಾಸ್ ಅವರನ್ನು ಭೇಟಿ ಆಗಬಹುದು ಅಷ್ಟು ಆಪ್ತತೆ ಹೊಂದಿದ್ದೇವೆ’ ಎಂದಿದ್ದಾರೆ ಹೇಮಾ.

ಅಂದಹಾಗೆ ಬೆಂಗಳೂರು ಕೇಸಿನ ಬಳಿಕ ಹೇಮಾ ಕೊಲ್ಲ ಅವರಿಗೆ ಅವಕಾಶಗಳು ಕಡಿಮೆ ಆಗಿವೆ. ಕಳೆದ ವರ್ಷ ‘ನಾನು ಸಿನಿಮಾ ರಂಗ ತ್ಯಜಿಸುತ್ತಿದ್ದೇನೆ’ ಎಂದು ಹೇಳಿದ್ದ ಹೇಮಾ ಕೊಲ್ಲ. ಈಗ ಮಾತನಾಡಿ, ನಾನು ಇನ್ನು ಮುಂದೆ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುವುದಿಲ್ಲ ಅಭಿಮಾನಿಗಳು ಗುರುತಿಸುವ ಇಷ್ಟಪಡುವ ಪಾತ್ರಗಳಲ್ಲಿ ಮಾತ್ರ ನಟಿಸುತ್ತೀನಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ