ಮತ್ತೆ ಸಮಸ್ಯೆಯಲ್ಲಿ ‘ಹೇರಾ ಫೇರಿ’: ನಿರ್ಮಾಪಕರ ನಡುವೆ ಜಗಳ
Hera Peri movie: ಕ್ಲಲ್ಟ್ ಕಾಮಿಡಿ ಸಿನಿಮಾ ‘ಹೇರಾಫೇರಿ’ಯ ಮೂರನೇ ಭಾಗ ಮಾಡುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು, ಆಗ ಪರೇಶ್ ರಾವಲ್ ತಾವು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದು ಭಾರಿ ಸುದ್ದಿ ಆಗಿತ್ತು. ಅಕ್ಷಯ್ ಕುಮಾರ್ ಸಂಧಾನದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಇದೀಗ ಸಿನಿಮಾಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಸಿನಿಮಾದ ಹಕ್ಕುಗಳ ಕುರಿತಾಗಿ ಇಬ್ಬರು ನಿರ್ಮಾಪಕರ ನಡುವೆ ಜಗಳ ಶುರುವಾಗಿದೆ.

ಬಾಲಿವುಡ್‌ನ (Bollywood) ಐಕಾನಿಕ್ ಹಾಸ್ಯ ಸಿನಿಮಾಗಳಲ್ಲಿ ‘ಹೇರಾ ಫೇರಿ’ಗೆ ದೊಡ್ಡ ಹೆಸರು. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ನಟಿಸಿದ್ದ ಈ ಸಿನಿಮಾ ಇಂದಗೂ ಕಲ್ಟ್. ‘ಹೇರಾ-ಫೇರಿ’ಯ ಸೀಕ್ವೆಲ್ ‘ಫಿರ್ ಹೇರಾ ಫೇರಿ’ ಸಿನಿಮಾ ಸಹ ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯ್ತು. ಇತ್ತೀಚೆಗಷ್ಟೆ ಸಿನಿಮಾದ ಇನ್ನೊಂದು ಮೂರನೇ ಭಾಗ ಮಾಡುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು, ಆಗ ಪರೇಶ್ ರಾವಲ್ ತಾವು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದು ಭಾರಿ ಸುದ್ದಿ ಆಗಿತ್ತು. ಅಕ್ಷಯ್ ಕುಮಾರ್ ಸಂಧಾನದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಇದೀಗ ಸಿನಿಮಾಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಸಿನಿಮಾದ ಹಕ್ಕುಗಳ ಕುರಿತಾಗಿ ಇಬ್ಬರು ನಿರ್ಮಾಪಕರ ನಡುವೆ ಜಗಳ ಶುರುವಾಗಿದೆ.
ಸಾಮಾನ್ಯವಾಗಿ ‘ಹೇರಾ ಫೇರಿ’ ಅಂದ ಕೂಡಲೇ ನಿರ್ಮಾಪಕ ಫಿರೋಜ್ ನಾಡಿಯಾವಾಲಾ ನೆನಪಾಗುತ್ತಾರೆ. ಆದರೆ ವಿಜಯ್ ಕುಮಾರ್ ಗಿಲಾನಿ ಅವರು ಸಿನಿಮಾದ ಹಕ್ಕುಗಳು ತಮ್ಮ ಬಳಿ ಇವೆಯೆಂದು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ, ಈ ಚಿತ್ರಗಳ ಹಕ್ಕುಗಳನ್ನು ಅವರು ಕಾನೂನುಬದ್ಧವಾಗಿ ಹೊಂದಿದ್ದಾರೆ. ‘ಹೇರಾ ಫೇರಿ ಫ್ರಾಂಚೈಸಿಯ ಹಕ್ಕುಗಳು ನನ್ನ ಬಳಿಯೇ ಇವೆ. ಫಿರೋಜ್ ನಾಡಿಯಾಡ್ವಾಲಾ ಅವರಿಗೆ ಈ ಚಿತ್ರದ ಮೇಲೆ ಯಾವುದೇ ಹಕ್ಕಿಲ್ಲ. ಈ ವಿಷಯದಲ್ಲಿ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ ಮತ್ತು ಶೀಘ್ರದಲ್ಲೇ ಸತ್ಯ ಹೊರಬರಲಿದೆ’ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ನಿರ್ಮಾಪಕ ಫಿರೋಜ್ ನಾಡಿಯಾವಾಲಾ ಅವರು ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. ಈ ಹಿಂದೆ ಸಾಲ ತೀರಿಸದ ಕಾರಣ ಅವರ ಕೆಲವು ಚಿತ್ರಗಳ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ. ಅದೇ ಸಮಯದಲ್ಲಿ ‘ಹೇರಾ-ಫೇರಿ’ಯ ಹಕ್ಕುಗಳನ್ನು ವಿಜಯ್ ಕುಮಾರ್ ಅವರಿಗೆ ವರ್ಗಾವಣೆ ಆಗಿವೆಯಂತೆ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಪಿಆರ್ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್ಪೋಸ್ ಮಾಡಿದ ಫ್ಯಾನ್ಸ್
ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಕಾಂಬಿನೇಷನ್‌ನಲ್ಲಿ ‘ಹೇರಾ ಫೇರಿ 3’ ಚಿತ್ರೀಕರಣ ಆರಂಭವಾಗಬೇಕಿತ್ತು. ಪ್ರೋಮೋ ಕೂಡ ಶೂಟ್ ಮಾಡಲಾಗಿತ್ತು. ಆದರೆ ಈಗಿನ ಈ ಕಾನೂನು ವಿವಾದದಿಂದಾಗಿ ಚಿತ್ರದ ಶೂಟಿಂಗ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ, ಹಕ್ಕುಗಳ ವಿವಾದ ಇತ್ಯರ್ಥವಾಗುವವರೆಗೆ ಈ ಹೆಸರಿನಲ್ಲಿ ಯಾವುದೇ ಹೊಸ ಚಿತ್ರ ಅಥವಾ ಕಂಟೆಂಟ್ ಬಿಡುಗಡೆ ಮಾಡದಂತೆ ತಡೆಯಾಜ್ಞೆ ಬರುವ ಸಾಧ್ಯತೆಯೂ ಇದೆ.
ಈಗಾಗಲೇ ಕಥೆ ಮತ್ತು ಕಾಸ್ಟಿಂಗ್ ವಿಚಾರವಾಗಿ ಸಾಕಷ್ಟು ಏರಿಳಿತ ಕಂಡಿದ್ದ ‘ಹೇರಾ ಫೇರಿ 3’, ಈಗ ಮಾಲೀಕತ್ವದ ಜಗಳಕ್ಕೆ ಸಿಲುಕಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಚಿತ್ರದ ಹಕ್ಕುಗಳು ವಿಜಯ್ ಕುಮಾರ್ ಅವರ ಬಳಿ ಇದ್ದರೆ, ಫಿರೋಜ್ ನಾಡಿಯಾವಾಲಾ ಅವರು ಈ ಪ್ರಾಜೆಕ್ಟ್ ಅನ್ನು ಹೇಗೆ ಮುಂದುವರಿಸುತ್ತಾರೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ, ತೆರೆಯ ಮೇಲೆ ನಗು ಉಕ್ಕಿಸುತ್ತಿದ್ದ ‘ಹೇರಾ ಫೇರಿ’ ತಂಡ, ಈಗ ತೆರೆಯ ಹಿಂದೆ ಕೋರ್ಟ್ ಕಚೇರಿ ಅಲೆಯುವಂತಾಗಿದೆ. ಈ ಕಾನೂನು ಸಮರದಲ್ಲಿ ಯಾರಿಗೆ ಜಯ ಸಿಗಲಿದೆ ಮತ್ತು ‘ಹೇರಾ ಫೇರಿ 3’ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




