ಬಿಗ್ ಬಾಸ್ ನಿಯಮ ಮೀರಿ ಹೊರ ಬರ್ತೀನಿ ಎಂದರೆ ದುಬಾರಿ ದಂಡ? ಇಲ್ಲಿದೆ ವಿವರ

ಹಿಂದಿಯಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಪ್ರತಿ ಸೀಸನ್‌ಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.ಅವರು ಸ್ಪರ್ಧಿಗಳ ಜೊತೆ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋನಿಂದ ಅರ್ಧಕ್ಕೆ ಹೊರಹೋಗುವ ಪ್ರಯತ್ನ ಮಾಡುತ್ತಾರೆ.  

ಬಿಗ್ ಬಾಸ್ ನಿಯಮ ಮೀರಿ ಹೊರ ಬರ್ತೀನಿ ಎಂದರೆ ದುಬಾರಿ ದಂಡ? ಇಲ್ಲಿದೆ ವಿವರ
ಬಿಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 12, 2023 | 12:27 PM

ಜಿಯೋ ಸಿನಿಮಾ (Jio Cinema) ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡದ 10ನೇ ಸೀಸನ್ ಐದನೇ ವಾರ ಪೂರ್ಣಗೊಳಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಏರ್ಪಡುತ್ತಿದೆ. ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ (Bigg Boss) ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರು. ಈಗ ಮರಳಿ ದೊಡ್ಮನೆಗೆ ಬಂದಿದ್ದಾರೆ. ಅವರು ಈವಾರ ಬಿಗ್ ಬಾಸ್​ನಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸೇವ್ ಆದ ಹೊರತಾಗಿಯೂ ಅವರು ಎಲಿಮಿನೇಟ್ ಆಗುತ್ತೇನೆ ಎಂದರು. ಹಿಂದಿ ಬಿಗ್ ಬಾಸ್​ನಲ್ಲಿ ಈ ರೀತಿ ಮಾಡಿದರೆ ದೊಡ್ಡ ದಂಡ ಕಟ್ಟಬೇಕಾಗುತ್ತದೆ. ಆ ಬಗ್ಗೆ ಇಲ್ಲಿದೆ ವಿವರ.

ಪ್ರತಿ ವರ್ಷ ವೀಕ್ಷಕರು ಬಿಗ್ ಬಾಸ್​ಗಾಗಿ ಕಾಯುತ್ತಾರೆ. 3 ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಜಗಳ ಸಾಮಾನ್ಯ. ಬಿಗ್ ಬಾಸ್​ನ​ ವಿವಾದಾತ್ಮಕ ಶೋ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇದು ಪ್ರಸಾರ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹಿಂದಿಯಲ್ಲಿ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸಲ್ಮಾನ್ ಪ್ರತಿ ಸೀಸನ್‌ಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.ಅವರು ಸ್ಪರ್ಧಿಗಳ ಜೊತೆ ಕಠಿಣವಾಗಿ ನಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಶೋನಿಂದ ಅರ್ಧಕ್ಕೆ ಹೊರಹೋಗುವ ಪ್ರಯತ್ನ ಮಾಡುತ್ತಾರೆ.

ಬಿಗ್ ಬಾಸ್​ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳನ್ನು ಕಟು ಟೀಕೆ ಮಾಡುತ್ತಾರೆ. ಇದನ್ನು ಸಹಿಸಲಾರದೇ ಅನೇಕ ಸ್ಪರ್ಧಿಗಳು ಕಾರ್ಯಕ್ರಮವನ್ನು ತೊರೆಯಲು ನಿರ್ಧರಿಸುತ್ತಾರೆ. ಬಿಗ್ ಬಾಸ್ ನಿರ್ಧಾರಗಳಿಂದ ಸ್ಪರ್ಧಿಗಳು ತುಂಬಾನೇ ಹತಾಶೆಗೊಳ್ಳುತ್ತಾರೆ. ಆ ಬಳಿಕ ಅರ್ಧಕ್ಕೆ ಹೊರ ನಡೆಯಲು ಅನೇಕ ಸ್ಪರ್ಧಿಗಳು ನಿರ್ಧರಿಸುತ್ತಾರೆ. ಸಲ್ಮಾನ್‌ ಅವರು ಹಾಕುವ ಕಠೋರ ಛೀಮಾರಿಯೇ ಇದಕ್ಕೆ ಕಾರಣ ಅನ್ನೋದು ಅನೇಕರ ಅಭಿಪ್ರಾಯ. ಈ ರೀತಿ ಹೊರ ಹೋದರೆ ಅವರು ದೊಡ್ಡ ಮೊತ್ತದ ದಂಡಪಾವತಿಸಬೇಕು.

ದುಬಾರಿ ಆಗುತ್ತದೆ..

ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ನಡೆಸಿಕೊಡುವವರ ಮಧ್ಯೆ ಒಂದು ಒಪ್ಪಂದ ಆಗಿರುತ್ತದೆ. ಈ ಒಪ್ಪಂದವನ್ನು ಚಾಚೂತಪ್ಪದೇ ಪಾವತಿಸಬೇಕು. ಯಾರ ಮೇಲೂ ಕೈ ಮಾಡುವಂತಿಲ್ಲ, ಬಿಗ್ ಬಾಸ್​ನಿಂದ ಅರ್ಧಕ್ಕೆ ಹೊರಬರುವಂತಿಲ್ಲ ಸೇರಿ ಅನೇಕ ನಿಯಮಗಳು ಇದರಲ್ಲಿ ಇವೆ. ಈ ನಿಯಮ ಮೀರಿದರೆ ಎಷ್ಟು ನಷ್ಟ ಆಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮುನ್ನಾವರ್ ಫಾರೂಕಿ ಬಿಗ್ ಬಾಸ್ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಎಲಿಮಿನೇಷನ್ ವಿಚಾರದಲ್ಲಿ ಮತ್ತೆ ಮರುಕಳಿಸಿತು ‘ಬಿಗ್ ಬಾಸ್​ ಸೀಸನ್ 8’ರ ಘಟನೆ?

2 ಕೋಟಿ ರೂಪಾಯಿ!

‘ಪ್ರತಿ ವರ್ಷ ಅನೇಕ ಜನರು ಬಿಗ್ ಬಾಸ್ ಬಾಗಿಲಿಗೆ ಹೋಗಿ ನಾವು ಹೊರಹೋಗಬೇಕು ಎಂದು ಹೇಳುತ್ತಾರೆ. ಹೀಗೆ ಹೋಗಬೇಕಾದ 2 ಕೋಟಿ ರೂಪಾಯಿ ಕೊಡಬೇಕು ಅಂತ ಬಿಗ್ ಬಾಸ್ ಒಪ್ಪಂದದಲ್ಲಿ ಬರೆಯಲಾಗಿದೆ’ ಎಂದಿದ್ದಾರೆ ಮುನ್ನಾವರ್. ಇದು ಅನೇಕರಿಗೆ ಅಚ್ಚರಿ ತರಿಸಿದೆ.

ಶೋಗೆ ನಷ್ಟ

ಬಿಗ್ ಬಾಸ್​ ಮನೆ ಒಳಗೆ ಬಂದ ನಂತರ ಸ್ಪರ್ಧಿಗಳಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಇರುವುದಿಲ್ಲ. ಕೆಲವೊಮ್ಮೆ ಸ್ಪರ್ಧಿಗಳಿಗೆ ಒಂಟಿತನ, ಕುಟುಂಬದ ನೆನಪು ಕಾಡುತ್ತದೆ. ಹೀಗೆ ಕಾಡಿದಾಗ ಸ್ಪರ್ಧಿಗಳು ಹೊರ ನಡೆದರೆ ಶೋ ನಡೆಸಿಕೊಡುವವರಿಗೆ ನಷ್ಟ ಉಂಟಾಗುತ್ತದೆ. ಈ ಕಾರಣದಿಂದಲೇ ಇಂಥ ಕಠಿಣ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Sun, 12 November 23

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್