ಚಿತ್ರರಂಗದಲ್ಲಿ ಸಿಕ್ಕ ಸ್ಟಾರ್​​ಡಂ ಬಿಟ್ಟು ಟ್ಯಾಕ್ಸಿ ಓಡಿಸಿದ್ದೇಕೆ? ಎಲ್ಲವನ್ನೂ ವಿವರಿಸಿದ ನಟ

ಸಿನಿಮಾ ರಂಗದಿಂದ ಬರುವ ಹಣದಲ್ಲಿ ಜೀವನ ಸಾಗಿಸುವುದು ಕಷ್ಟ ಎನಿಸಿತು. ಈ ಕಾರಣಕ್ಕೆ ಅವರು ಚಿತ್ರರಂಗ ತೊರೆದು ಕುಟುಂಬದ ಜೊತೆ ನ್ಯೂಜಿಲೆಂಡ್ ತೆರಳಿದ್ದಾರೆ.

ಚಿತ್ರರಂಗದಲ್ಲಿ ಸಿಕ್ಕ ಸ್ಟಾರ್​​ಡಂ ಬಿಟ್ಟು ಟ್ಯಾಕ್ಸಿ ಓಡಿಸಿದ್ದೇಕೆ? ಎಲ್ಲವನ್ನೂ ವಿವರಿಸಿದ ನಟ
ಅಬ್ಬಾಸ್
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Jul 19, 2023 | 6:30 AM

ನಟ ಅಬ್ಬಾಸ್ (Abbas) ಅವರು ತಮಿಳು ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚಿದವರು. ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ, ಕಳೆದ 8 ವರ್ಷಗಳ ಹಿಂದೆ ಅವರು ಸಿನಿಮಾ ರಂಗ ತೊರೆದಿದ್ದಾರೆ. ಅಬ್ಬಾಸ್ ಸದ್ಯ ನ್ಯೂಜಿಲೆಂಡ್​ನಲ್ಲಿ ಸೆಟಲ್ ಆಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ ಹೊರತಾಗಿಯೂ ಅವರಿಗೆ ದೊಡ್ಡ ಯಶಸ್ಸು ಸಿಗಲೇ ಇಲ್ಲ. ಸಿನಿಮಾ ರಂಗದಿಂದ ಬರುವ ಹಣದಲ್ಲಿ ಜೀವನ ಸಾಗಿಸುವುದು ಕಷ್ಟ ಎನಿಸಿತು. ಈ ಕಾರಣಕ್ಕೆ ಅವರು ಚಿತ್ರರಂಗ ತೊರೆದು ಕುಟುಂಬದ ಜೊತೆ ನ್ಯೂಜಿಲೆಂಡ್​ಗೆ ತೆರಳಿದ್ದಾರೆ.

ಇತ್ತೀಚೆಗೆ ಹಲವು ವಿಚಾರಗಳ ಬಗ್ಗೆ ಅಬ್ಬಾಸ್ ಮಾತನಾಡಿದ್ದಾರೆ. ‘ಕೊವಿಡ್ ಅವಧಿಯಲ್ಲಿ ನಾನು ಕೆಲವರಿಗೆ ಸಹಾಯ ಮಾಡಿದ್ದೇನೆ. ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವಾಗ ಅಭಿಮಾನಿಗಳೊಂದಿಗೆ ಜೂಮ್ ಕರೆಗಳ ಮೂಲಕ ಮಾತನಾಡಿದ್ದೆ. ಆತ್ಮಹತ್ಯೆಯ ಆಲೋಚನೆ ಮಾಡಿದವರ ಮನಸ್ಥಿತಿ ಬದಲಿಸುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದಾರೆ ಅಬ್ಬಾಸ್.

‘ನನಗೂ ಆತ್ಮಹತ್ಯೆ ಆಲೋಚನೆಗಳು ಬಂದಿದ್ದವು. ನಾನು 10 ನೇ ತರಗತಿಯಲ್ಲಿ ಅನುತ್ತೀರ್ಣನಾದೆ. ಆ ಸಮಯದಲ್ಲಿ ನನ್ನ ಗರ್ಲ್​ಫ್ರೆಂಡ್​ ಬಿಟ್ಟು ಹೋದಳು. ರಸ್ತೆಯ ಪಕ್ಕದಲ್ಲಿ ನಿಂತು, ವೇಗವಾಗಿ ಚಲಿಸುವ ವಾಹನದ ಮುಂದೆ ಹೆಜ್ಜೆ ಹಾಕಲು ಯೋಚಿಸುತ್ತಿರುವಾಗ ನನಗೆ ಒಂದು ವಿಚಾರ ಹೊಳೆಯಿತು. ನಾನು ತೆಗೆದುಕೊಳ್ಳುವ ನಿರ್ಧಾರದಿಂದ ಕಾರು ಚಾಲಕನ ಅನುಗುಣವಾಗಿ ವರ್ತಿಸಿದರೆ, ಆ ವ್ಯಕ್ತಿಯ ಜೀವನವೂ ಗಾಢವಾಗಿ ಪರಿಣಾಮ ಬೀರುತ್ತದೆ. ನನ್ನ ಕರಾಳ ಕ್ಷಣದಲ್ಲಿಯೂ ಸಹ, ನಾನು ಇನ್ನೊಬ್ಬ ವ್ಯಕ್ತಿಯ ಯೋಗಕ್ಷೇಮವನ್ನು ಪರಿಗಣಿಸುತ್ತಿದ್ದೇನೆ’ ಎಂದಿದ್ದಾರೆ ಅಬ್ಬಾಸ್.

ಇದನ್ನೂ ಓದಿ: Rachita Ram: ‘ಸಂಜು ವೆಡ್ಸ್​ ಗೀತಾ 2’ ಸಿನಿಮಾಗೆ ರಚಿತಾ ರಾಮ್​ ನಾಯಕಿ? ನಾಗಶೇಖರ್​ ಜೊತೆ ನಡೆದಿದೆ ಮಾತುಕತೆ

‘ಆರಂಭದಲ್ಲಿ ಕೆಲ ಸಿನಿಮಾ ಯಶಸ್ಸು ಕಂಡಿತು. ಆದರೆ, ಬಳಿಕ ನನ್ನ ಕೆಲವು ಚಿತ್ರಗಳು ಸೋತವು. ನಾನು ಆರ್ಥಿಕವಾಗಿ ನಿರ್ಗತಿಕನಾಗಿದ್ದೆ. ಬಾಡಿಗೆ ಕಟ್ಟಲು ಹಣ ಇರಲಿಲ್ಲ. ನನಗೆ ಇರುವ ಜನಪ್ರಿಯತೆಯಿಂದ ಆರಂಭದಲ್ಲಿ ನಾನು ಕೆಲಸ ಹುಡುಕಲು ಹೋಗಿಲ್ಲ. ಬಳಿಕ ನಾನು ನಿರ್ಮಾಪಕ ಆರ್‌ಬಿ ಚೌಧರಿ ಅವರನ್ನು ಸಂಪರ್ಕಿಸಿ ಕೆಲಸಕ್ಕಾಗಿ ವಿನಂತಿಸಿದೆ. ಅವರು ಸಿನಿಮಾ ಒಂದರಲ್ಲಿ ನಟಿಸಲು ಅವಕಾಶ ನೀಡಿದರು. ಆದರೆ, ಕೊನೆಗೂ ನನಗೆ ಬೇಸರವಾಗಿ ಚಿತ್ರರಂಗ ಬಿಟ್ಟೆ. ನಾನು ನನ್ನ ಕೆಲಸವನ್ನು ಆನಂದಿಸುತ್ತಿರಲಿಲ್ಲ. ನನ್ನ ಬಾಲಿವುಡ್ ಚೊಚ್ಚಲ ಚಿತ್ರ ‘ಆಂಶ್​’ ವೀಕ್ಷಿಸಲು ಬಂದ ನನ್ನ ಸ್ನೇಹಿತರಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದ್ದೆ’ ಎಂದಿದ್ದಾರೆ.

‘ನನ್ನ ಕುಟುಂಬವನ್ನು ನಾನು ಸಾಕಲೇಬೇಕಿತ್ತು. ಹೀಗಾಗಿ ನ್ಯೂಜಿಲೆಂಡ್​ಗೆ ತೆರಳಿದೆ. ಅಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದೆ. ಟ್ಯಾಕ್ಸಿ ಕೂಡ ಓಡಿಸಿದೆ’ ಎಂದಿದ್ದಾರೆ ಅಬ್ಬಾಸ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್