Brad Pitt: ‘ನನಗೆ ಈ ಕಾಯಿಲೆ ಇದೆ ಅಂದ್ರೆ ಜನ ನಂಬಲ್ಲ’; ಜನರ ಪರಿಚಯ ಸಿಗದೇ ಒದ್ದಾಡುತ್ತಿರುವ ನಟ ಬ್ರಾಡ್​ ಪಿಟ್​

| Updated By: ಮದನ್​ ಕುಮಾರ್​

Updated on: Jun 27, 2022 | 3:52 PM

Brad Pitt | Prosopagnosia: ‘ಈ ಕಾಯಿಲೆಯಿಂದಾಗಿ ಜನರು ನನ್ನ ಬಗ್ಗೆ ಕೆಟ್ಟದಾಗಿ ತಿಳಿದುಕೊಳ್ಳುತ್ತಾರೆ’ ಎಂದು ಬ್ರಾಡ್​ ಪಿಟ್​ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರಿಗೆ ಇರುವ ಸಮಸ್ಯೆ ಏನು? ಇಲ್ಲಿದೆ ವಿವರ..

Brad Pitt: ‘ನನಗೆ ಈ ಕಾಯಿಲೆ ಇದೆ ಅಂದ್ರೆ ಜನ ನಂಬಲ್ಲ’; ಜನರ ಪರಿಚಯ ಸಿಗದೇ ಒದ್ದಾಡುತ್ತಿರುವ ನಟ ಬ್ರಾಡ್​ ಪಿಟ್​
ಬ್ರಾಡ್ ಪಿಟ್
Follow us on

ಖ್ಯಾತ ನಟ ಬ್ರಾಡ್​ ಪಿಟ್​ (Brad Pitt) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಹಾಲಿವುಡ್​ (Hollywood) ಸಿನಿಮಾಗಳ ಮೂಲಕ ಅವರು ಆ ಪರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಜಗತ್ತಿನ ಶ್ರೀಮಂತ ನಟರಲ್ಲಿ ಬ್ರಾಡ್​ ಪಿಟ್​ ಕೂಡ ಇದ್ದಾರೆ. ಅನೇಕ ಹಿಟ್​ ಸಿನಿಮಾಗಳಲ್ಲಿ ನಟಿಸಿರುವ ಅವರು ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಾರೆ. ಆದರೆ ಅವರು ಆ ಕಾಯಿಲೆ ಬಗ್ಗೆ ಹೇಳಿಕೊಂಡಾಗ ಅನೇಕರು ನಂಬುವುದೇ ಇಲ್ಲ ಎಂಬುದು ಬೇಸರದ ಸಂಗತಿ. ಈ ಕುರಿತು ಇತ್ತೀಚಿಗಿನ ಸಂದರ್ಶನದಲ್ಲಿ ಬ್ರಾಡ್​ ಪಿಟ್​ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಗೆ ಇರುವ ಆರೋಗ್ಯ ಸಮಸ್ಯೆ ಏನು? ಜನರ ಮುಖವನ್ನು ಮರೆಯುವ (Face Blindness) ಕಾಯಿಲೆ! ಅಚ್ಚರಿ ಎನಿಸಿದರೂ ಇದು ನಿಜ. ಈ ಬಗ್ಗೆ ಸ್ವತಃ ಬ್ರಾಡ್​ ಪಿಟ್​ ಮಾಹಿತಿ ನೀಡಿದ್ದಾರೆ.

ಸೆಲೆಬ್ರಿಟಿ ಎಂದ ಮೇಲೆ ದಿನವೂ ಅನೇಕ ಜನರನ್ನು ಭೇಟಿ ಆಗಬೇಕಾಗುತ್ತದೆ. ಹಲವು ಪಾರ್ಟಿ, ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಭೇಟಿಯಾದ ವ್ಯಕ್ತಿಗಳ ಮುಖವನ್ನು ಗುರುತಿಸಲು ಬ್ರಾಡ್​ ಪಿಟ್​ಗೆ ಸಾಧ್ಯವಾಗುತ್ತಿಲ್ಲ. ಈ ಕಾಯಿಲೆಗೆ ಪ್ರೊಸೋಪೆಗ್ನೋಸಿಯಾ ಎಂದು ಕರೆಯುತ್ತಾರೆ. ಸಿಂಪಲ್​ ಭಾಷೆಯಲ್ಲಿ ಫೇಸ್​ ಬ್ಲೌಂಡ್​ನೆಸ್​ ಎನ್ನುತ್ತಾರೆ.

ಬ್ರಾಡ್​ ಪಿಟ್​ ಅವರನ್ನು ವಿಶ್ವಾದ್ಯಂತ ಇರುವ ಜನರು ಗುರುತಿಸುತ್ತಾರೆ. ಆದರೆ ಸ್ವತಃ ಬ್ರಾಡ್​ ಪಿಟ್​ಗೆ ಜನರ ಗುರುತು ಸರಿಯಾಗಿ ಸಿಗುವುದಿಲ್ಲ ಎಂಬುದು ವಿಪರ್ಯಾಸ. ಇದರಿಂದ ಅವರಿಗೆ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ವಿಶೇಷವಾಗಿ ಪಾರ್ಟಿಗಳಲ್ಲಿ ಅವರು ಜನರ ಮುಖವನ್ನು ಗುರುತಿಸಲು ಸಾಧ್ಯವಾಗದೇ ಭಾರಿ ಮುಜುಗರಕ್ಕೆ ಒಳಗಾಗುತ್ತಾರಂತೆ.

ಇದನ್ನೂ ಓದಿ
Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​
Justin Bieber: ವೈರಸ್​ನಿಂದ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು; ಖ್ಯಾತ ಗಾಯಕನಿಗೆ ಕಾಡುತ್ತಿದೆ ಗಂಭೀರ ಸಮಸ್ಯೆ
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

‘ಈ ಕಾಯಿಲೆಯಿಂದಾಗಿ ಜನರು ನನ್ನ ಬಗ್ಗೆ ಕೆಟ್ಟದಾಗಿ ತಿಳಿದುಕೊಳ್ಳುತ್ತಾರೆ. ಇವನು ಯಾರೊಂದಿಗೂ ಬೆರೆಯುವುದಿಲ್ಲ, ಯಾರ ಜೊತೆಯೂ ಮಾತನಾಡುವುದಿಲ್ಲ ಅಂತ ಜನರು ಭಾವಿಸುತ್ತಾರೆ. ಜನರ ಮುಖ ಗುರುತಿಸಲಾಗದೇ ಇರುವುದಕ್ಕೆ ನನಗೆ ನಾಚಿಕೆ ಆಗುತ್ತದೆ. ಇದರಿಂದ ನನಗೆ ಚಿಂತೆ ಆಗಿದೆ’ ಎಂದು ಬ್ರಾಡ್​ ಪಿಟ್​ ಹೇಳಿದ್ದಾರೆ.

ತಮ್ಮ ಈ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಅನೇಕರು ನಂಬುವುದೇ ಇಲ್ಲ ಎಂಬುದು ಬ್ರಾಡ್​ ಪಿಟ್​ ಅವರ ಚಿಂತೆಗೆ ಕಾರಣ ಆಗಿದೆ. ಒಂದು ವರ್ಷ ಅವರು ಖಿನ್ನತೆಗೂ ಒಳಗಾಗಿದ್ದರು. ಈಗತಾನೇ ಖಿನ್ನತೆಯಿಂದ ತಾವು ಹೊರಬಂದಿರುವುದಾಗಿಯೂ ಬ್ರಾಡ್​ ಪಿಟ್​ ಹೇಳಿದ್ದಾರೆ. ಜನರ ಮುಖ ಗುರುತಿಸಲು ಆಗದೇ ಒದ್ದಾಡುತ್ತಿರುವ ಸ್ಟಾರ್​ ನಟನ ಈ ಪರಿಸ್ಥಿತಿ ಬಗ್ಗೆ ತಿಳಿದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಚಿತ್ರ ಕಾಯಿಲೆ ಹಾಗೂ ನಿರುದ್ಯೋಗಕ್ಕೆ ರೋಸಿಹೋದ ಕಿರುತೆರೆ ನಟಿ; ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ

ಪಾರ್ಶ್ವವಾಯು ಬಳಿಕ ನಾಲಿಗೆಯ ಮೇಲೆ ಬೆಳೆದ ಕಪ್ಪು ಕೂದಲು: ವಿಚಿತ್ರ ಕಾಯಿಲೆಗೆ ತುತ್ತಾದ ವ್ಯಕ್ತಿ