Angus Cloud Death: ಕೇವಲ 25ನೇ ವಯಸ್ಸಿಗೆ ಮೃತಪಟ್ಟ ಅಮೆರಿಕ ಟಿವಿ ಸೀರಿಸ್ ನಟ ಆ್ಯಂಗಸ್​ ಕ್ಲೌಡ್

ಆ್ಯಂಗಸ್​ ಕ್ಲೌಡ್ ಅವರು ಎಚ್​​ಬಿಒ ಟಿವಿ ಸೀರಿಸ್ ‘ಯುಫೋರಿಯಾ’ದಲ್ಲಿ ನಟಿಸಿದ್ದರು. ಇದರಲ್ಲಿ ಆ್ಯಂಗಸ್ ಅವರ ಪಾತ್ರ ಗಮನ ಸೆಳೆದಿತ್ತು.

Angus Cloud Death: ಕೇವಲ 25ನೇ ವಯಸ್ಸಿಗೆ ಮೃತಪಟ್ಟ ಅಮೆರಿಕ ಟಿವಿ ಸೀರಿಸ್ ನಟ ಆ್ಯಂಗಸ್​ ಕ್ಲೌಡ್
ಆ್ಯಂಗಸ್
Follow us
ರಾಜೇಶ್ ದುಗ್ಗುಮನೆ
|

Updated on: Aug 01, 2023 | 7:58 AM

‘ಯುಫೋರಿಯಾ’ (Euphoria) ಟಿವಿ ಸೀರಿಸ್ ನಟ ಆ್ಯಂಗಸ್ ಕ್ಲೌಡ್ (Angus Cloud) ಅವರು ಸೋಮವಾರ (ಜುಲೈ 31) ಮೃತಪಟ್ಟಿದ್ದಾರೆ. ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದು ಕುಟುಂಬದವರು ಹಾಗೂ ಆಪ್ತರಿಗೆ ಸಾಕಷ್ಟು ದುಃಖ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಲಾಗುತ್ತಿದೆ. ಹಾಲಿವುಡ್​ ನಟಿ ಜೆಂಡೇಯಾ ಅವರು ಆ್ಯಂಗಸ್​ ಕ್ಲೌಡ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಆ್ಯಂಗಸ್​ ಕ್ಲೌಡ್ ಅವರು ಎಚ್​​ಬಿಒ ಟಿವಿ ಸೀರಿಸ್ ‘ಯುಫೋರಿಯಾ’ದಲ್ಲಿ ನಟಿಸಿದ್ದರು. ಈ ಸೀರಿಸ್ 2019ರಲ್ಲಿ ಆರಂಭ ಆಗಿದ್ದು, 2022ರಲ್ಲಿ 2ನೇ ಸೀಸನ್ ಪ್ರಸಾರ ಕಂಡಿದೆ. ಇದರಲ್ಲಿ ಆ್ಯಂಗಸ್ ಅವರ ಪಾತ್ರ ಗಮನ ಸೆಳೆದಿತ್ತು. ಆ್ಯಂಗಸ್ ಅವರು ಓಕ್ಲೆಂಡ್​ನಲ್ಲಿರುವ ತಮ್ಮ ನಿವಾಸದಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ.

ಮೂಲಗಳ ಪ್ರಕಾರ ಆ್ಯಂಗಸ್ ಅವರ ತಾಯಿ ಸೋಮವಾರ ತಡರಾತ್ರಿ ತುರ್ತುಸಂಖ್ಯೆಗೆ ಕರೆ ಮಾಡಿದ್ದರು ಮತ್ತು ಆ್ಯಂಗಸ್ ಉಸಿರಾಡುತ್ತಿಲ್ಲ ಎಂಬುದನ್ನು ಹೇಳಿದ್ದರು. ಆ್ಯಂಗಸ್​ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಈ ಮೊದಲು ಆಲೋಚಿಸಿದ್ದರು.

‘ಅತ್ಯಂತ ಭಾರವಾದ ಹೃದಯದಿಂದ ನಾವು ಆ್ಯಂಗಸ್​​ಗೆ ವಿದಾಯ ಹೇಳಬೇಕಾಗಿದೆ. ಒಬ್ಬ ಕಲಾವಿದನಾಗಿ, ಸ್ನೇಹಿತನಾಗಿ, ಸಹೋದರನಾಗಿ ಮತ್ತು ಮಗನಾಗಿ ಆ್ಯಂಗಸ್ ನಮಗೆಲ್ಲರಿಗೂ ಅವರು ವಿಶೇಷವಾಗಿದ್ದರು. ಕಳೆದ ವಾರ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಈ ವೇಳೆ ಅವರು ತೀವ್ರವಾಗಿ ಬೇಸರಗೊಂಡಿದ್ದರು. ಆ್ಯಂಗಸ್ ತಂದೆಯೊಂದಿಗೆ ಸೇರಿಕೊಂಡಿದ್ದಾರೆ’ ಎಂದು ಕುಟುಂಬದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾ ಮುಷ್ಕರಕ್ಕೆ ತತ್ತರಿಸಿದ ಹಾಲಿವುಡ್​; ಬಿಗ್ ಬಜೆಟ್ ಚಿತ್ರದ ನಿರ್ಮಾಪಕರಿಗೆ ಆತಂಕ

‘ಮಾನಸಿಕ ತೊಂದರೆ ಆ್ಯಂಗಸ್​​ನ ಅತೀವವಾಗಿ ಕಾಡುತ್ತಿತ್ತು. ಹಾಸ್ಯ, ನಗು ಮತ್ತು ಅವರು ನೀಡಿದ ಪ್ರೀತಿಗಾಗಿ ಜಗತ್ತು ಅವರನ್ನು ನೆನಪಿಸಿಕೊಳ್ಳುತ್ತದೆ. ಈ ಸಾವಿನ ಬಗ್ಗೆ ಮತ್ತಷ್ಟನ್ನು ಹೇಳಲು ಸಾಧ್ಯವಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ’ ಎಂದು ಕುಟುಂಬದವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ