ಮೂರೇ ದಿನಕ್ಕೆ ಭಾರತದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದ ‘ಆಪನ್​ಹೈಮರ್’; ‘ಬಾರ್ಬಿ’ ಕಥೆ ಏನು?

ಕಿಲಿಯನ್ ಮರ್ಫಿ ಅವರು ಆಪನ್​ಹೈಮರ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಸಿನಿಮಾ ಜುಲೈ 21ರಂದು ರಿಲೀಸ್ ಆಗಿದೆ. ‘ಆಪನ್​ಹೈಮರ್‘ ಶುಕ್ರವಾರ 14.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಮೂರೇ ದಿನಕ್ಕೆ ಭಾರತದಲ್ಲಿ 50 ಕೋಟಿ ರೂಪಾಯಿ ಕಮಾಯಿ ಮಾಡಿದ ‘ಆಪನ್​ಹೈಮರ್’; ‘ಬಾರ್ಬಿ’ ಕಥೆ ಏನು?
ಆಪನ್​ಹೈಮರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 24, 2023 | 12:26 PM

‘ಆಪನ್​ಹೈಮರ್’ ಸಿನಿಮಾ (Oppenheimer Movie) ಸಾಕಷ್ಟು ಹೈಪ್​ನೊಂದಿಗೆ ಭಾರತದಲ್ಲಿ ರಿಲೀಸ್ ಆಯಿತು. ಈ ಸಿನಿಮಾ ದೊಡ್ಡ ಮಟ್ಟದ ಓಪನಿಂಗ್ ಪಡೆದಿದೆ. ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ಸಿನಿಮಾ ಎನ್ನುವ ಕಾರಣಕ್ಕೂ ಈ ಚಿತ್ರ ಭರ್ಜರಿ ನಿರೀಕ್ಷೆ ಸೃಷ್ಟಿ ಮಾಡಿತ್ತು. ಮೊದಲ ಮೂರುದಿನಗಳಲ್ಲಿ ಈ ಸಿನಿಮಾ ಭಾರತದಲ್ಲಿ 49 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾಗೆ ಹೋಲಿಕೆ ಮಾಡಿದರೆ ‘ಬಾರ್ಬಿ’ ಚಿತ್ರ ಸಾಧಾರಣ ಗಳಿಕೆ ಕಂಡಿದೆ ಎಂದೇ ಹೇಳಬಹುದು.

ಇಡೀ ವಿಶ್ವವನ್ನೇ ನಾಶ ಮಾಡುವ ಶಕ್ತಿ ಅಣುಬಾಂಬ್​ಗೆ ಇದೆ. ಇದನ್ನು ಮೊದಲ ಬಾರಿಗೆ ಜಪಾನ್ ಮೇಲೆ ಪ್ರಯೋಗ ಮಾಡಲಾಯಿತು. ಇದನ್ನು ಕಂಡು ಹಿಡಿದಿದ್ದು ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್ ಜೀವನದ ಕುರಿತ ಕಥೆ ಇದಾಗಿದೆ. ಕಿಲಿಯನ್ ಮರ್ಫಿ ಅವರು ಆಪನ್​ಹೈಮರ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಸಿನಿಮಾ ಜುಲೈ 21ರಂದು ರಿಲೀಸ್ ಆಗಿದೆ. ‘ಆಪನ್​ಹೈಮರ್‘ ಶುಕ್ರವಾರ 14.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಚಿತ್ರಕ್ಕೆ ಶನಿವಾರ ಹಾಗೂ ಭಾನುವಾರ ತಲಾ 17.25 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಆಗಿದೆ. ಇದರಿಂದ ಚಿತ್ರದ ಒಟ್ಟೂ ಗಳಿಕೆ 49 ಕೋಟಿ ರೂಪಾಯಿ ಆಗಿದೆ.

ಇತ್ತೀಚೆಗೆ ರಿಲೀಸ್ ಆದ ‘ಮಿಷನ್ ಇಂಪಾಸಿಬಲ್​ 7’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಐದು ದಿನಕ್ಕೆ 63 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆ್ಯಕ್ಷನ್ ಸಿನಿಮಾ ಎಂಬ ಕಾರಣಕ್ಕೆ ಜನರು ಇದನ್ನು ಮುಗಿಬಿದ್ದು ವೀಕ್ಷಿಸಿದ್ದರು. ಆ್ಯಕ್ಷನ್ ಸಿನಿಮಾ ಅಲ್ಲದ ಹೊರತಾಗಿಯೂ ‘ಆಪನ್​ಹೈಮರ್’ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Oppenheimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ; ‘ಆಪನ್​ಹೈಮರ್​’ ಚಿತ್ರಕ್ಕೆ ಎದುರಾಯ್ತು ವಿರೋಧ

ಹಾಲಿವುಡ್​ನ ‘ಬಾರ್ಬಿ’ ಕೂಡ ‘ಆಪನ್​ಹೈಮರ್ ಜೊತೆ ರಿಲೀಸ್ ಆಗಿತ್ತು. ಈ ಚಿತ್ರ ಭಾರತದಲ್ಲಿ 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಾಧಾರಣ ಮೊತ್ತದ ಗಳಿಕೆಯೊಂದಿಗೆ ಸಿನಿಮಾ ಮುನ್ನುಗ್ಗುತ್ತಿದೆ. ಸಾಲು ಸಾಲು ಹಾಲಿವುಡ್​ ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗುತ್ತಿವೆ. ಹಿಂದಿ ಚಿತ್ರಗಳಿಗಿಂತಲೂ ಅಧಿಕ ಕಲೆಕ್ಷನ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:26 pm, Mon, 24 July 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ